ಗುಬ್ಬಿ: ತಾಲ್ಲೂಕಿನ ಪೆದ್ದನಹಳ್ಳಿಯಲ್ಲಿ ವಾರದ ಹಿಂದೆ ಇಬ್ಬರು ದಲಿತ ಹುಡುಗರ ಹತ್ಯೆಯಾಗಿರುವುದನ್ನು ಪೊಲೀಸ್ ಇಲಾಖೆ ಸೂಕ್ಷ್ಮವಾಗಿ ತನಿಖೆ ನಡೆಸಬೇಕು ಎಂದು ಮಾಜಿ ಗೃಹ ಸಚಿವ ಹಾಲಿ ಶಾಸಕ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದರು.
ತಾಲ್ಲೂಕಿನ ಕಡಬ ಹೋಬಳಿಯ ಪೆದ್ದನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಗಿರೀಶ್ ಕುಟುಂಬಕ್ಕೆ ಸಾಂತ್ವನ ಹೇಳಿ ಧನ ಸಹಾಯ ಮಾಡಿ ಮಾತನಾಡಿ, ಈಗಾಗಲೇ ಸುಮಾರು 20 ಜನರನ್ನು ಬಂಧಿಸುವಂತಹ ವಿಚಾರ ನನಗೆ ತಿಳಿದಿದೆ, ಆದರೂ ಸಹ ಈ ವ್ಯಕ್ತಿಗಳ ಕೊಲೆ ಏಕೆ ಆಗಿದೆ ಎಂಬುದು ಇಲ್ಲಿ ನಡೆಯುವ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ, ಹಾಗಾಗಿ ಪೊಲೀಸ್ ಇಲಾಖೆ ಬೇಕಾಬಿಟ್ಟಿಯಾಗಿ ತನಿಖೆ ನಡೆಸದೆ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸಿ ಮಾಡಬೇಕಿದೆ, ಇಲ್ಲಿ ನಡೆಯುವ ವಿಷಯ ಇಡೀ ರಾಜ್ಯಾದ್ಯಂತ ಚರ್ಚೆಯಾಗುತ್ತಿದ್ದು ಇದರ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯದೆ ಇಲ್ಲಿ ನಡೆದಿರುವ ಘಟನೆಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕನ ಮಾಡಬೇಕಿದೆ ಎಂದರು.
ಇಂತಹ ಘಟನೆಗಳು ನಡೆದ ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು, ಸ್ಥಳೀಯ ಶಾಸಕರು ಆಗಮಿಸಬೇಕಿತ್ತು, ಆದರೆ ಇದುವರೆಗೂ ಆಗಮಿಸಿಲ್ಲ ಎಂದರೆ ಇದರ ಬಗ್ಗೆ ಸಾರ್ವಜನಿಕರೇ ಅರ್ಥ ಮಾಡಿಕೊಳ್ಳುತ್ತಾರೆ ಎಂದ ಅವರು ಇಂತಹ ಕೆಟ್ಟ ಸ್ಥಿತಿಗೆ ಬಡ ಕುಟುಂಬ ತಳ್ಳಿದಾಗ ಆಡಳಿತ ಮಾಡುತ್ತಿರುವ ಸರಕಾರ ನೋಡಬೇಕಾಗಿರುವುದು ಅವರ ಜವಾಬ್ದಾರಿ, ಆದರೆ ಅವರು ಒಬ್ಬರೂ ಬಂದಿಲ್ಲ ಎಂದರು.
ಸಾರ್ವಜನಿಕರು ತೀರ್ಮಾನಿಸುತ್ತಾರೆ, ಇನ್ನೂ ಪರಿಹಾರ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯವನ್ನು ಸರ್ಕಾರ ನೀಡಬೇಕು, ಇದನ್ನು ನಾವು ಯಾವುದೇ ಕಾರಣಕ್ಕೂ ನ್ಯಾಯ ಒದಗಿಸುವವರೆಗೂ ಬಿಡುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಜಿಲ್ಲಾ ಕಾರ್ಯದರ್ಶಿ ಮುರುಳಿಧರ್ ಹಾಲಪ್ಪ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ರಾಮಕೃಷ್ಣ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಯ್ಯ, ಮುಖಂಡರಾದ ಪ್ರಸನ್ನಕುಮಾರ್, ಕೆಪಿಸಿಸಿ ಸದಸ್ಯ ತಾತಯ್ಯ, ನಿಂಬೆಕಟ್ಟೆ ಜಯಣ್ಣ, ಸಲೀಂ, ಜಿ.ಬಿ.ಮಂಜುನಾಥ್ ಸೇರಿದಂತೆ ದಲಿತ ಮುಖಂಡರು ಹಾಜರಿದ್ದರು.
ದಲಿತ ಯುವಕರ ಹತ್ಯೆ ಖಂಡನೀಯ: ಪರಂ
Get real time updates directly on you device, subscribe now.
Prev Post
Next Post
Comments are closed.