ನೂರಾರು ಲೀಟರ್ ಅಡುಗೆ ಎಣ್ಣೆ ಟಿನ್ ವಂಚನೆ

107

Get real time updates directly on you device, subscribe now.

ಕುಣಿಗಲ್: ಬಡವರಿಗೆ ಫುಡ್ಕಿಟ್ ನೀಡುತ್ತೇನೆಂದು ಅಂಗಡಿ ವರ್ತಕರಿಗೆ ವ್ಯಕ್ತಿಯೋರ್ವ ನೂರಾರು ಲೀಟರ್ ಅಡುಗೆ ಎಣ್ಣೆ ಟಿನ್ ವಂಚಿಸಿರುವ ಘಟನೆ ತಾಲೂಕಿನ ಎಡೆಯೂರು ಹಾಗೂ ಹುಲಿಯೂರು ದುರ್ಗದಲ್ಲಿ ನಡೆದಿದೆ.

ಯುಗಾದಿ ಹಬ್ಬದ ಮುನ್ನದಿನ ಹುಲಿಯೂರು ದುರ್ಗದ ಅಶ್ವಥ ಎಂಬುವರ ಮಳಿಗೆಗೆ ಬಂದ ವ್ಯಕ್ತಿಯೋರ್ವ ತಾನು ಬಡವರಿಗೆ ಫುಡ್ ಕಿಟ್ ನೀಡುತ್ತಿದ್ದು ಇದಕ್ಕಾಗಿ ತಲಾ 15 ಕೆಜಿಯ 12 ಟಿನ್ ಅಡುಗೆ ಎಣ್ಣೆ (180 ಲೀ) ಹಾಗೂ ಅರವತ್ತು ಪಾಕೆಟ್ ವಿವಿಧ ಆಹಾರ ಧಾನ್ಯಗಳ ಪ್ಯಾಕೇಟ್ ಕೊವಂತೆ ಕೇಳಿದ, ಇದಕ್ಕೆ ಅಂಗಡಿಯವರು ಸಮೀಪದ ಸಗಟು ವಿತರಕರ ಬಳಿ ಖಾದ್ಯತೈಲ ತರಲು ಕಳಿಸಿ, ಆಹಾರ ಧಾನ್ಯ ಪೊಟ್ಟಣ ಕಟ್ಟಲು ಮುಂದಾದರು. ಈ ವೇಳೆ ಆಟೋದೊಂದಿಗೆ ಅಡುಗೆ ಎಣ್ಣೆ ಸಗಟು ವಿತರಕರ ಬಳಿ ತೆರಳಿದ ವ್ಯಕ್ತಿ ಆಟೋದಲ್ಲಿ ಅಡುಗೆ ಎಣ್ಣೆ ಟಿನ್ ಇಟ್ಟುಕೊಂಡು ಮದ್ದೂರು ಸಮೀಪದ ಗ್ರಾಮಕ್ಕೆ ತೆರಳಿ ಅಲ್ಲಿ ಟಿನ್ ಇಳಿಸಿ ಆಟೋ ವಾಪಸ್ ಕಳಿಸಿದ್ದಾನೆ. ಆಟೋ ವಾಪಸ್ ಬಂದರೂ ವ್ಯಕ್ತಿ ಬಾರದ ಕಾರಣ ಅನುಮಾನಗೊಂಡ ವರ್ತಕ ವಿಚಾರಿಸಲಾಗಿ ಮೋಸ ಹೋಗಿರುವುದು ತಿಳಿದು ಬಂದು ಘಟನೆಗೆ ಸಂಬಂಧಿಸಿದಂತೆ ವರ್ತಕ ಹುಲಿಯೂರು ದುರ್ಗ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ಮಾಸುವ ಮುನ್ನವೆ ಎಡೆಯೂರಿನ ಸಗಟು ವರ್ತಕರೊಬ್ಬರ ಬಳಿಯೂ ಇದೆ ರೀತಿ 16 ಟಿನ್ (240 ಲೀ) ಅಡುಗೆ ಎಣ್ಣೆ ಟಿನ್ ಪಡೆದು ವಂಚಿಸಿ ಹೋಗಿದ್ದಾನೆ. ಎಡೆಯೂರು ವರ್ತಕರು ಸಹ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವರ್ತಕ ಅಶ್ವಥ್, ತಾಲೂಕಿನಲ್ಲಿ ಯಾವುದೇ ಸಗಟು ವರ್ತಕರು ಇಂತಹ ವ್ಯಕ್ತಿಗಳ ಜಾಲಕ್ಕೆ ಬೀಳದ ಬಗ್ಗೆ ಜಾಗೃತೆ ವಹಿಸಬೇಕೆಂದು ಮನವಿ ಮಾಡಿದ್ದಾರೆ, ಎರಡೂ ಘಟನೆಯಿಂದ ಒಟ್ಟಾರೆ ಸುಮಾರು ಒಂದು ಲಕ್ಷ ರೂ. ವಂಚನೆ ಆಗಿದೆ ಎನ್ನಲಾಗಿದೆ.

Get real time updates directly on you device, subscribe now.

Comments are closed.

error: Content is protected !!