ಹುಳಿಯಾರು: ಕುಡುಕ ಗಂಡನ ಹಿಂಸೆ ತಾಳಲಾರದೆ ತನ್ನ ಒಂದೂವರೆ ವರ್ಷದ ಹೆಣ್ಣು ಮಗುವಿನೊಂದಿಗೆ ಗೃಹಿಣಿ ಬಾವಿಗೆ ಹಾರಿದ ಘಟನೆ ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಜರುಗಿದೆ.
ಕೆಂಕೆರೆ ಗ್ರಾಮದ ಜಗದೀಶ್ ಎಂಬುವವರ ಪತ್ನಿ ಪ್ರೇಮ (30) ತನ್ನ ಮಗುವಿನೊಂದಿಗೆ ಬಾವಿಗೆ ಹಾರಿದ ಗೃಹಿಣಿಯಾಗಿದ್ದಾಳೆ. ನಿತ್ಯ ಗಂಡ ಕುಡಿದು ಬಂದು ಗಲಾಟಿ ಮಾಡಿ ಹೊಡೆದು ಬಡಿಯುತ್ತಿದ್ದನೆಂತಲೂ ಈ ಕಿರುಕುಳ ತಾಳಲಾರದೆ ಮನನೊಂದು ಸಾಯಲು ಗ್ರಾಮದಲ್ಲಿರುವ ಗಾಣಿಗರ ಬಾವಿಗೆ ಹಾರಿದ್ದಾಳೆ ಎನ್ನಲಾಗಿದೆ.
ಬಾವಿಗೆ ಇವರಿಬ್ಬರೂ ಬಿದ್ದ ಶಬ್ಧ ಕೇಳಿಸಿಕೊಂಡ ಗ್ರಾಮಸ್ಥರ ಬಾವಿಯ ಬಳಿ ದೌಡಾಯಿಸಿ ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ತಾಯಿ ಪ್ರೇಮಾಳನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದ್ದು ಮಗು ರೂಪಾ ಬಾವಿಯಲ್ಲೇ ಕೊನೆಯುಸಿರು ಎಳೆದಿದೆ. ಅಗ್ನಿಶಾಮಕ ದಳದವರು ಬಂದು ಮಗುವಿನ ಮೃತ ದೇಹವನ್ನು ಮೇಲೆತ್ತಿ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.
ಈ ಘಟನೆಯಿಂದ ಗ್ರಾಮದಲ್ಲಿರುವ ಕೆಲವರ ನಿಂದನೆ ಮಾತನ್ನು ಕೇಳಬೇಕಾಗುತ್ತದೆ ಎಂದು ಮನನೊಂದು ಪ್ರೇಮಾ ವಿಚಲಿತಳಾಗಿ ಶನಿವಾರ ಬೆಳಗ್ಗೆ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಇದನು ಗಮನಿಸಿದ ಕುಟುಂಬದವರು ನೇಣಿನ ಕುಣಿಕೆಯಿಂದ ಬಿಡಿಸಿ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ಗೆ ದಾಖಲಿಸಿದ್ದಾರೆ.
ಮಗುವಿನೊಂದಿಗೆ ಬಾವಿಗೆ ಬಿದ್ದ ತಾಯಿ- ಮಗು ಸಾವು
Get real time updates directly on you device, subscribe now.
Next Post
Comments are closed.