ಕುಣಿಗಲ್: 2023ರಲ್ಲಿ ಜೆಡಿಎಸ್ನಿಂದ ಮಾಜಿ ಸಚಿವ ಡಿ.ನಾಗರಾಜಯ್ಯನವರೆ ಅಭ್ಯರ್ಥಿ, ಅವರ ಮಕ್ಕಳಾದ ಜಗದೀಶ, ಡಾ.ರವಿ ನಡುವೆ ಯಾವುದೇ ಜಗಳ ಬೇಡ, ಇಬ್ಬರೂ ಲವಕುಶರಂತೆ ತಾಲೂಕಿನಾದ್ಯಂತ ಪಕ್ಷವನ್ನು ಸಂಘಟಿಸಿ, 2023ರಲ್ಲಿ ಡಿ.ನಾಗರಾಜಯ್ಯ ಅರವನ್ನು ಆಯ್ಕೆ ಮಾಡಿಸಿದಲ್ಲಿ ಅವರನ್ನು ಸಚಿವರನ್ನಾಗಿಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಜನತಾ ಜಲಾಧಾರೆ ಕಾರ್ಯಕ್ರಮದಲ್ಲಿ ಮಾತನಾಡಿ, 2023ರಲ್ಲಿ ಜೆಡಿಎಸ್ ಪೂರ್ಣ ಬಹುಮತದ ಸರ್ಕಾರ ರಚನೆ ಮಾಡುವುದು ಸಿದ್ಧ ಎಂದ ಅವರು ತಾಲೂಕಿನ ಜನತೆ ಡಿ.ನಾಗರಾಜಯ್ಯ ಅವರನ್ನು ಆಶೀರ್ವದಿಸಿ ಜೆಡಿಎಸ್ ಬಲಪಡಿಸಬೇಕೆಂದರು.
ಕಾರ್ಯಕ್ರಮ ಮುಗಿಸಿ ಹೊರಡುವಾಗ ಕೆಲ ಕಾರ್ಯಕರ್ತರು, ಕರೆಂಟ್ ಸರಿಯಾಗಿ ಬರುತ್ತಿಲ್ಲ ಎಂಬ ಅಹವಾಲು ಇಟ್ಟಾಗ, ಬಿಜೆಪಿ ಸರ್ಕಾರದ ಧೋರಣೆಯನ್ನು ಕಟುವಾಗಿ ಟೀಕಿಸಿದ ಅವರು, ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡಿ ಜನತೆಯನ್ನು ಅಂ‘ಕಾರದಲ್ಲಿರಿಸಿ ನಮ್ಮ ರಾಜ್ಯದ ಕರೆಂಟನ್ನು ಹೊರ ರಾಜ್ಯಕ್ಕೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ಬಿಜೆಪಿ ಸರ್ಕಾರದಿಂದ ಏನು ತಾನೆ ನೀರೀಕ್ಷೆ ಮಾಡಲಾಗುತ್ತದೆ, ಇತ್ತ ಅಡುಗೆ ಅನಿಲ ನೋಡಿದರೆ ಸಾವಿರ ರೂ. ಗಡಿ ದಾಟಿಸಿ, ಸೀಮೆ ಎಣ್ಣೆಯನ್ನು ನಿಲ್ಲಿಸಿ ಸೌದೆ ಕಡಿಯುವುದನ್ನು ನಿಷೇಧಿಸಿ ಗೃಹಿಣಿಯರು, ಸಾಮಾನ್ಯ ಜನರ ಶೋಷಣೆ ಮಾಡುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕೆಂದರು.
ಡಿ.ನಾಗರಾಜಯ್ಯ ಜೆಡಿಎಸ್ ಅಭ್ಯರ್ಥಿ
Get real time updates directly on you device, subscribe now.
Prev Post
Next Post
Comments are closed.