ಕುಂಚಿಟಿಗ ಜನಾಂಗದಲ್ಲಿ ಒಗ್ಗಟ್ಟು ಮೂಡಲಿ

197

Get real time updates directly on you device, subscribe now.

ಮಧುಗಿರಿ: ಕುಂಚಿಟಿಗ ಜನಾಂಗದಲ್ಲಿ ಒಗ್ಗಟ್ಟು ಮೂಡಬೇಕಾಗಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ತಾಲೂಕಿನ ಐ.ಡಿ.ಹಳ್ಳಿಯಲ್ಲಿ ಕರಡೆನೋರು ಗೋತ್ರದ ಶ್ರೀದೇವಿ ಭೂದೇವಿ ದೇವರ ಜಾತ್ರಾ ಮಹೋತ್ಸವ ಮತ್ತು ಜಲದಿ ಉತ್ಸವ ಉದ್ಘಾಟಿಸಿ ಮಾತನಾಡಿ, ನಮಗೆ ಉತ್ತಮ ಗುರುಗಳು ಸಿಕ್ಕಿದ್ದು ಅವರ ಮಾರ್ಗದರ್ಶನದಲ್ಲಿ ಕುಂಚಿಟಿಗರ 48 ಕುಲಗಳು ಒಗ್ಗಟ್ಟಾಗಿ ಹೋಗಬೇಕಾಗಿದೆ, ಒಗ್ಗಟ್ಟಾದಾಗ ಮಾತ್ರ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯ, ಈಗಾಗಲೇ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಇಲ್ಲದೆ ನಮ್ಮ ಮಕ್ಕಳಿಗೆ ಅನ್ಯಾಯ ಆಗುತ್ತಿದೆ, ಇಂತಹ ಸದರ್ಭದಲ್ಲಿ ಒಗ್ಗಟ್ಟು ಪ್ರದರ್ಶನ ತೋರಿದರೆ ಕೆಲಸಗಳಾಗುತ್ತವೆ, ಕುಂಚಿಟಿಗರು ಕೂಡಿ ಕೆಟ್ಟರು ಎಂಬ ಗಾದೆ ಇದೆ, ಆ ಗಾದೆಗೆ ತಿಲಾಂಜಲಿ ನೀಡಿ ಕುಂಚಿಟಿಗರು ಕೂಡಿ ಗಟ್ಟಿಯಾದರು ಎಂಬ ಭಾವನೆ ಮೂಡಬೇಕಾಗಿದೆ, ಸಮಾಜದ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದರು.
ಸಾನಿಧ್ಯ ವಹಿಸಿದ್ದ ಎಲೆರಾಂಪುರ ಮಠದ ಪೀಠಾಧ್ಯಕ್ಷ ಹನುಮಂತನಾಥ ಸ್ವಾಮೀಜಿ ಮಾತನಾಡಿ ದೇವಾಲಯಗಳಿಂದ ಮನಸ್ಸಿಗೆ ನೆಮ್ಮದಿ ಮೂಡುತ್ತದೆ ಮತ್ತು ಜಾತ್ರಾ ಮಹೋತ್ಸವಗಳಿಂದ ಧರ್ಮಜಾಗೃತಿಯಾಗುತ್ತದೆ ಎಂದರು.
ಕರಡೆನೋರ ಗೋತ್ರದ ಬಹಳಷ್ಟು ಮಂದಿ ಉನ್ನತ ಅಧಿಕಾರಿಗಳಾಗಿದ್ದು ಅವರು ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಧಾರ್ಮಿಕ ಕಾರ್ಯಗಳಲ್ಲಿ ಬಳಸಬೇಕು, ಶಾಸಕ ವೀರಭದ್ರಯ್ಯ ಎಲ್ಲಾ ಸಮುದಾಯಗಳ ದೇವಸ್ಥಾನಗಳಿಗೆ ವೈಯಕ್ತಿಕವಾಗಿ ಮತ್ತು ಶಾಸಕರ ಅನುದಾನದಿಂದ ಸಹಾಯ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಅವರಿಗೆ ಮತ್ತೊಮ್ಮೆ ಸೇವೆ ಮಾಡುವ ಅವಕಾಶ ಸಿಗಲಿ ಎಂದು ಹಾರೈಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಬೋಗಣ್ಣಾ, ನರಸಿಂಹರಾಜು, ಲಕ್ಷ್ಮಿಕಾಂತ್ , ಜಿಲ್ಲಾ ಅರಣ್ಯಾಧಿಕಾರಿ ರಮೇಶ್, ತಹಶೀಲ್ದಾರ್ ಸುರೇಶ್ ಆಚಾರ್, ರಾಮಚಂದ್ರಪ್ಪ, ಜಿಲಾನ್, ಜಗಣ್ಣ, ನಾಗಭೂಷಣ್ ಚೌಳಹಳ್ಳಿ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!