ಕುಣಿಗಲ್: ಪುರಸಭೆಯ ಪೌರ ಕಾರ್ಮಿಕರಿಗೆ ನೀಡುವ ಬೆಳಗಿನ ಉಪಹಾರ ಕಳಪೆಗುಣಮಟ್ಟದ್ದಾಗಿದೆ ಎಂದು ಪೌರಕಾರ್ಮಿಕರ ವ್ಯಾಪಕ ದೂರಿನ ಮೇರೆಗೆ ಸೋಮವಾರ ಪುರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಶ್ರೀನಿವಾಸ್ ದಿಡೀರ್ ಭೇಟಿ ನೀಡಿ ಉಪಹಾರ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪುರಸಭೆಯ ಒಟ್ಟು 60 ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ಪೂರೈಕೆ ಯೋಜನೆಯಡಿಯಲ್ಲಿ ಉಪಹಾರ ನೀಡಬೇಕಿದೆ, ಆದರೆ ಸದರಿ ಉಪಹಾರ ಗುಣಮಟ್ಟ ತೀರಾ ಕಳಪೆಯಾಗಿದ್ದು, ದಿನಾಲೂ ಫಲಾವ್ ಎಂದು ಮಸಾಲೆ ಅನ್ನ ನೀಡುತ್ತಿರುವ ಬಗ್ಗೆ, ನೀಡುವ ಉಪಹಾರವೂ ಸರಿಯಾಗಿಲ್ಲದೆ ಕೆಲವೊಮ್ಮೆ ಹಳಸಿದ ವಾಸನೆ ಬರುತ್ತಿದೆ ಎಂದು ಪೌರ ಕಾರ್ಮಿಕರು ದೂರಿದ್ದರ ಮೇರೆಗೆ ಸೋಮವಾರ ಬೆಳಗ್ಗೆ ಪೌರ ಕಾರ್ಮಿಕರು ಉಪಹಾರ ಸೇವಿಸುವ ಸಮಯಕ್ಕೆ ದಿಡೀರ್ ಭೇಟಿ ನೀಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಅವರಿಗೆ ಕಾರ್ಮಿಕರು ದೂರುಗಳ ಸರಮಾಲೆ ಮುಂದಿಟ್ಟರು.
ಸ್ವತಃ ಉಪಹಾರ ಪರಿಶೀಲಿಸಿದ ಶ್ರೀನಿವಾಸ್, ಗುಣಮಟ್ಟದ ಬಗ್ಗೆ ಬೇಸರ ವ್ಯಕ್ತಪಡಿಸಿದರು, ಉಪಹಾರ ಪೂರೈಕೆ ಟೆಂಡರ್ ಅವಧಿ ಮುಗಿದು ಒಂದು ತಿಂಗಳಾದರೂ ಟೆಂಡರ್ ಪ್ರಕ್ರಿಯೆ ನಡೆಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು, ಪೌರ ಕಾರ್ಮಿಕರಿಗೆ ಶೀಘ್ರವೆ ಪರಿಸ್ಥಿತಿ ಸುಧಾರಿಸುವ ಭರವಸೆ ನೀಡಿ ಈ ಹಿಂದೆ ಉಪಹಾರಕ್ಕೆ 20 ರೂ.ದರ ನಿಗದಿ ಮಾಡಿದ್ದು, ಅದನ್ನು 40 ರೂ.ಗೆ ಹೆಚ್ಚಿಸಿ ಟೆಂಡರ್ ಕರೆಯಲು ಎರಡು ತಿಂಗಳ ಹಿಂದೆಯೆ ಸಭೆ ಅನುಮೋದನೆ ನೀಡಲಾಗಿದೆ, ಪ್ರತಿದಿನವೂ ಬೇರೆ ಬೇರೆ ರೀತಿ ಗುಣಮಟ್ಟದ ಉಪಹಾರ ನೀಡುವ ಜೊತೆಯಲ್ಲಿ ಮೊಟ್ಟೆ ವಿತರಣೆಗೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಪರಿಸರ ಅಭಿಯಂತರ ಚಂದ್ರಶೇಖರ, ಹಿರಿಯ ಆರೋಗ್ಯನಿರೀಕ್ಷ ಉಮೇಶ್ ಇತರರು ಇದ್ದರು.
ಕಾರ್ಮಿಕರಿಗೆ ಕಳಪೆ ಉಪಹಾರ- ಅಧಿಕಾರಿಗಳಿಗೆ ತರಾಟೆ
Get real time updates directly on you device, subscribe now.
Prev Post
Next Post
Comments are closed.