ತುಮಕೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ತುಮಕೂರು ವಿಶ್ವವಿದ್ಯಾನಿಲಯ ಶಾಖೆ ವತಿಯಿಂದ ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಬೇಸಿಗೆ ಕಾಲದಲ್ಲಿ ಪಕ್ಷಿಗಳಿಗೆ ಬೇಸಿಗೆ ಹಕ್ಕಿನ ನೀರಿನ ಫೀಡರ್ ಇಡುವ ಪಕ್ಷಿಗಳಿಗಾಗಿ ಜೀವ ಹನಿ ಎಂಬ ವಿಶೇಷ ಕಾರ್ಯಕ್ರಮ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಉಪನ್ಯಾಸಕ ಪರಶುರಾಮ ಮಾತನಾಡಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗೆ ಸಮಸ್ಯೆ ಬಂದಾಗ ಹೋರಾಟ ಮಾಡುತ್ತದೆ, ವಿದ್ಯಾರ್ಥಿಗಳಿಗೆ ದೇಶಕ್ಕೆ ಕೊಡುಗೆ ಕೊಟ್ಟಂತ ವ್ಯಕ್ತಿಗಳ ಆಚರಣೆ ಮಾಡುವ ಮುಖಾಂತರ ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿ ಮೂಡಿಸುವ ಸಂಘಟನೆಯಾಗಿದೆ, ಇದರ ಜೊತೆಗೆ ರಚನಾತ್ಮಕ ಕಾರ್ಯಗಳಾದ ಕಳೆದ ವರ್ಷ 10 ಲಕ್ಷ ಸಸಿ ನೆಡುವುದು, ಈ ವರ್ಷ ಹಕ್ಕಿಗಳಿಗೆ ಬೇಸಿಗೆ ಕಾಲದ ಕುಡಿಯುವ ಪೀಡರ್ ಇಡುವ ಕಾರ್ಯಕ್ರಮವನ್ನು ಶ್ಲಾಘಿಸಿದರು.
ದೈನಂದಿನ ಬಳಕೆಗೆ ನೀರನ್ನು ಅತಿಯಾಗಿ ಪೋಲು ಮಾಡುತ್ತೇವೆ, ಅದರ ಒಂದು ಭಾಗವನ್ನು ಪ್ರಾಣಿ ಪಕ್ಷಿಗಳಿಗೆ ನೀಡುವುದರಿಂದ ಜೀವದಾನಮಾಡಬಹುದು ಎಂದರು.
ಎಬಿವಿಪಿ ತುಮಕೂರು ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ ಮಾತನಾಡಿ, ಬೇಸಿಗೆಯ ತಾಪಕ್ಕೆ ಜನರೇ ತತ್ತರಿಸುತ್ತಾರೆ, ಇನ್ನು ಜೀವಿಗಳ ಗತಿಯೇನು? ಹಾಗಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನೀರಿನ ಬಟ್ಟಲುಗಳನ್ನು ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಇಟ್ಟಿದ್ದೇವೆ, ಇದರಿಂದ ಪಕ್ಷಿಗಳು ಬಾಯಾರಿಕೆಯಾದಾಗ ಬಂದು ನೀರು ಕುಡಿಯುತ್ತಿವೆ, ಈ ಕೆಲಸ ಎಲ್ಲ ಉದ್ಯಾನಗಳಲ್ಲಿ ಹಾಗೂ ಮನೆಗಳಲ್ಲಿ ಮಾಡಿದರೆ ಇನ್ನೂ ಅನುಕೂಲ ಎಂದು ಹೇಳಿದರು.
ಉಪನ್ಯಾಸಕ ನಟರಾಜ್ ಮಾತನಾಡಿ, ಬೇಸಿಗೆಯಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ನೀರು ಅತ್ಯಾವಶ್ಯಕ, ಪ್ರತಿದಿನ ಎರಡು ಅಥವಾ ಮೂರು ಬಾರಿ ನೀರು ಕುಡಿಯುತ್ತವೆ, ಹಾಗಾಗಿ ನಗರ ವಾಸಿಗಳು ತಮ್ಮ ಮನೆಗಳ ಮೇಲೆ ಒಂದು ಬಟ್ಟಲು ಅಥವಾ ಇತರ ಪಾತ್ರೆಗಳಲ್ಲಿ ಪ್ರತಿ ದಿನ ನೀರು ಇಡುವುದರಿಂದ ಸಾವಿರಾರು ಪ್ರಾಣಿ ಪಕ್ಷಿಗಳ ಜೀವ ಉಳಿಯಲಿದೆ, ಪ್ರಾಣಿಗಳೂ ನಮ್ಮಂತೆ ಜೀವಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಎಬಿವಿಪಿ ಕಾರ್ಯಕರ್ತರಾದ ಸರ್ವೇಶ್, ರೇಣುಕಾ ಪ್ರಸಾದ್, ಲಕ್ಷ್ಮಿ, ಹರೀಶ್, ಕೌಶಿಕ್, ದರ್ಶನ್, ತೇಜಸ್, ಜಯಸೂರ್ಯ ಇತರರು ಇದ್ದರು.
ಎಬಿವಿಪಿಯಿಂದ ಪಕ್ಷಿಗಳಿಗಾಗಿ ಜೀವ ಹನಿ ಕಾರ್ಯ
Get real time updates directly on you device, subscribe now.
Next Post
Comments are closed.