ಹುಳಿಯಾರು: ಮಳೆಗಾಳಿಗೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿ ಭಾರಿ ತೊಂದರೆಯಾದ ಘಟನೆ ಹುಳಿಯಾರು ಹೋಬಳಿಯ ಬರಕನಹಾಲ್ ತಾಂಡ್ಯದಲ್ಲಿ ಮಂಗಳವಾರ ಸಂಜೆ ಜರುಗಿದೆ.
ಗ್ರಾಮದಲ್ಲಿ ಬೃಹತ್ ಗಾತ್ರ ಬೆಳೆದಿದ್ದ ಆಲದ ಮರ ಹಾಗೂ ಹತ್ತಿ ಸೇರಿದಂತೆ 3 ಮರಗಳು ಹಾಗೂ 4 ವಿದ್ಯುತ್ ಕಂಬಗಳು ಧರೆಗುರುಳಿವೆ. ಅದೃಷ್ಟವಶತ್ ಮರಗಳು ಹಾಗೂ ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದಿದ್ದರಿಂದ ಯಾವುದೇ ಹಾನಿಯಾಗಿಲ್ಲ.
ಆದರೆ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಕಂಬಗಳು ಧರೆಗುರುಳಿರುವುದರಿಂದ ಗ್ರಾಮದಲ್ಲಿ ಸಂಜೆಯಿಂದ ವಿದ್ಯುತ್ ವ್ಯತ್ಯಯವಾಗಿದೆ. ಮಳೆಬಿದ್ದ ಕಾರಣ ಕಂಬಗಳ ದುರಸ್ತಿ ಕಾರ್ಯವನ್ನು ಬುಧವಾರ ಮಾಡುವುದಾಗಿ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾಗಿ ಇಲ್ಲಿನ ನಿವಾಸಿಗಳು ಇಡೀ ರಾತ್ರಿ ಕತ್ತಲೆಯಲ್ಲಿ ಕಳೆಯುವುದು ಅನಿವಾರ್ಯವಾಗಿದೆ.
ಮರಗಳ ತೆರವು ಕಾರ್ಯ ಸಹ ಇನ್ನೂ ಆಗದಿರುವುದರಿಂದ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ತೊಡಕಾಗಿದೆ. ಹಾಗಾಗಿ ಮರದ ಮಾಲೀಕರು ಮರಗಳ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಗ್ರಾಮಸ್ಥರ ಒತ್ತಾಯವಾಗಿದೆ.
ಮಳೆಗಾಳಿಗೆ ಧರೆಗುರುಳಿದ ಮರ, ವಿದ್ಯುತ್ ಕಂಬ
Get real time updates directly on you device, subscribe now.
Prev Post
Comments are closed.