ನಿರಾಶ್ರಿತರ ನೆರವಿಗೆ ನಿಂತ ಹಿಂದೂ ಸಂಘಟನೆಗಳು..

136

Get real time updates directly on you device, subscribe now.


ಶಿರಾ ತಾಲ್ಲೂಕು ಹಿಂದೂ ಸಂಘಟನೆಗಳ ವತಿಯಿಂದ ಲಾಕ್‌ಡೌನ್ ನಡುವೆ ಸಿಲುಕಿದ ನಿರಾಶ್ರಿತರು, ಬಡವರಿಗೆ ಅವರಿರುವೆಡೆಗೇ ಊಟ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಶಿರಾ: ದೇಶಕ್ಕೆ ದೇಶವೇ ಲಾಕ್‌ಡೌನ್‌ನಲ್ಲಿ ಇದ್ದು, ಅದರ ನಡುವೆಯೇ ಊರಿಂದ ಊರಿಗೆ ತೆರಳುವ ಪ್ರಯಾಣಿಕರನ್ನು ತಾಲ್ಲೂಕು ಆಡಳಿತ ನಿರ್ಬಂಧಿಸಿದ್ದು, ನಿರಾಶ್ರಿತರ ಶಿಬಿರದಲ್ಲಿ ಇರಿಸಲಾಗಿದೆ.
ಹೀಗೆ ನಿರ್ಬಂಧಿಸಲಾದ ಶಿಬಿರಾರ್ಥಿಗಳಿಗೆ, ಕರ್ತವ್ಯ ನಿರತ ವೈದ್ಯರು, ದಾದಿಯರು, ಪ್ಯಾರಾಮೆಡಿಕಲ್ ಸಿಬ್ಬಂದಿ, ರಕ್ಷಣೆ ನೀಡುವ ಪೊಲೀಸರು, ಹೋಂ ಗಾರ್ಡ್‌ಸ್‌, ಹಲವು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇತರೆ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ಅಲ್ಲಲ್ಲಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ಹಲವಾರು ಸ್ವಯಂ ಸೇವಕರು ನಿರತರಾಗಿದ್ದಾರೆ.
ಹಿಂದೂ ಸಂಘಟನೆಗಳು, ಆರ್ಎಸ್‌ಎಸ್ ಮತ್ತು ಬಿಜೆಪಿ ಪಕ್ಷ ಜಂಟಿಯಾಗಿ ಇಂಥ ಸೇವೆ ಕೈಗೊಂಡಿದ್ದು, ಈಗಾಗಲೇ ಸಾವಿರಾರು ಮಂದಿಗೆ ಊಟ ಮತ್ತು ನೀರು ಸರಬರಾಜು ಮಾಡಿದೆ. ಅಷ್ಟೇ ಅಲ್ಲದೇ ಕೊರೋನಾ ವಿರುದ್ಧ ಹೋರಾಡುತ್ತಿರುವ ಸೈನಿಕರು, ನಿರಾಶ್ರಿತರು, ಭಿಕ್ಷುಕರು, ವೈದ್ಯಕೀಯ ಚಿಕಿತ್ಸೆಗಾಗಿ ನಗರಕ್ಕೆ ಬಂದು ಊಟಕ್ಕಾಗಿ ಪರಿತಪಿಸುವ ಇತರೆ ರೋಗಿಗಳು ಮತ್ತು ಅವರ ಸಂಬಂಧಿಗಳು ಯಾರೇ ಆದರೂ ಊಟ ಮತ್ತು ನೀರಿನ ಸೌಲಭ್ಯ ಕಲ್ಪಿಸುವ ಸಂಕಲ್ಪ ಮಾಡಿದೆ. ತಾಲ್ಲೂಕಿನ ಯಾವುದೇ ಭಾಗಕ್ಕಾದರೂ ಅಗತ್ಯ ಸೇವೆ ಸಲ್ಲಿಸಲು ನಮ್ಮ ಸ್ವಯಂ ಸೇವಕರು ಸಿದ್ಧರಿದ್ದು, ಅಗತ್ಯ ಬಿದ್ದವರು ಬಿಜೆಪಿ ನಗರಾಧ್ಯಕ್ಷ ವಿಜಯರಾಜ್ ಅವರ ಫೋನ್ ಸಂಖ್ಯೆ: 9986771044ನ್ನು ಸಂಪರ್ಕಿಸಲು ಕೋರಲಾಗಿದೆ.

ಶಿರಾ ತಾಲ್ಲೂಕು ಹಿಂದೂ ಸಂಘಟನೆಗಳ ವತಿಯಿಂದ ಲಾಕ್‌ಡೌನ್ ನಡುವೆ ಸಿಲುಕಿದ ನಿರಾಶ್ರಿತರು, ಬಡವರಿಗಾಗಿ ಊಟ ತಯಾರು ಮಾಡುತ್ತಿರುವ ನೋಟ.

Get real time updates directly on you device, subscribe now.

Comments are closed.

error: Content is protected !!