ಎಸಿಬಿ ಬಲೆಗೆ ಬಿದ್ದ ಗ್ರಾಪಂ ಕಾರ್ಯದರ್ಶಿ

281

Get real time updates directly on you device, subscribe now.

ತುಮಕೂರು: ಅರಕೆರೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.

ಖಾಲಿ ನಿವೇಶನದ ಕುರಿತು ಅರುಣ್ ಕುಮಾರ್ ಎಂಬುವವರು ಅರ್ಜಿ ನೀಡಿದ್ದು ಪಂಚಾಯತ್ ಕಾರ್ಯದರ್ಶಿ ಶ್ರೀಧರ್ 7500 ಲಂಚಕ್ಕೆ ಬೇಡಿಕೆ ಇಟ್ಟು 3000 ಹಣ ಮುಂಗಡವಾಗಿ ಪಡೆದು ಉಳಿದ 4500 ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.
ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದ ಯಾವುದೇ ಕೆಲಸ ಪಡೆಯಬೇಕಿದ್ದರೆ ಅಧಿಕಾರಿಗಳಿಗೆ ಲಂಚ ನೀಡಲೇಬೇಕು, ಬಡ ರೈತರು ಮತ್ತು ಮಧ್ಯಮ ವರ್ಗದವರು ಹಣ ಕಟ್ಟಲಾಗದೆ ತೊಂದರೆ ಅನುಭವಿಸುವಂತಾಗಿತ್ತು, ಇದೀಗ ಸಾರ್ವಜನಿಕರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಗ್ರಾಪಂ ಕಾರ್ಯದರ್ಶಿಯನ್ನು ಲಂಚ ಪಡೆಯುವಾಗ ಬಲೆಗೆ ಕೆಡವಿದ್ದಾರೆ.
ಕಾರ್ಯಾಚರಣೆ ವೇಳೆ ಡಿವೈಎಸ್ಪಿ ಮಲ್ಲಿಕಾರ್ಜುನ್ ಚುಕ್ಕಿ, ಇನಸ್ಪೆಕ್ಟರ್ ವೀರೇಂದ್ರ, ವಿಜಯಲಕ್ಷ್ಮಿ, ನರಸಿಂಹರಾಜು, ಚಂದ್ರು, ಶಿವಣ್ಣ, ನವೀನ್ ಕುಮಾರ್, ಸುರೇಶ್ ಇನ್ನಿತರರಿದ್ದರು.

Get real time updates directly on you device, subscribe now.

Comments are closed.

error: Content is protected !!