ಉಕ್ರೇನ್ ನಲ್ಲಿದ್ದ ವಿದ್ಯಾರ್ಥಿಗಳಿಗೆ ಸಿದ್ದಗಂಗಾ ಮೆಡಿಕಲ್ ಕಾಲೇಜಿನಲ್ಲಿ ಶಿಕ್ಷಣ

260

Get real time updates directly on you device, subscribe now.

ತುಮಕೂರು: ರಷ್ಯಾ ಉಕ್ರೇನ್ ಯದ್ಧದ ಪರಿಣಾಮ ಉಕ್ರೇನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ಸರ್ಕಾರ ಸುರಕ್ಷಿತವಾಗಿ ಕರೆತಂದಿದ್ದು ಅವರ ವಿದ್ಯಾಭ್ಯಾಸ ಮೊಟಕಾಗಬಾರದು ಎನ್ನುವ ಉದ್ದೇಶದಿಂದ ನಮ್ಮ ಸಿದ್ಧಗಂಗಾ ಮೆಡಿಕಲ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರೆಸಲು ಅವಕಾಶ ನೀಡಲಾಗಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ಸಿದ್ಧಗಂಗಾ ಮಠದಲ್ಲಿ ಮಾತನಾಡಿದ ಅವರು ಭಾರತಕ್ಕೆ ಮರಳಿರುವ ತುಮಕೂರಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ನಮ್ಮ ಮೆಡಿಕಲ್ ಕಾಲೇಜಿನಲ್ಲಿ ಪ್ರಾಕ್ಟಿಕಲ್, ಲೈಬ್ರರಿ ಸೇರಿದಂತೆ ಅಗತ್ಯ ನೆರವು ನೀಡಿ ಕ್ಲಿನಿಕಲ್ ಸಪೋರ್ಟ್ ಸಿಗುವಂತೆ ಮಾಡಿದ್ದು ಮುಂದಿನ ವೈದ್ಯಕೀಯ ಪರೀಕ್ಷೆಗಳ ಬಗ್ಗೆ ಸರ್ಕಾರ ನಿ‘ರ್ರಿಸಬೇಕಿದೆ ಎಂದರು.
ಎಸ್ಎಂಸಿಆರ್ಐ ನಿರ್ದೇಶಕ ಡಾ.ಎಸ್.ಪರಮೇಶ್ ಪತ್ರಕರ್ತರೊಂದಿಗೆ ಮಾತನಾಡಿ, ನಮ್ಮ ಜಿಲ್ಲೆಯಿಂದ ಒಟ್ಟು 27 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದು ಅದರಲ್ಲಿ ನಮ್ಮಲ್ಲಿಗೆ ಆಗಮಿಸಿರುವ 16 ಜನ ವಿದ್ಯಾರ್ಥಿಗಳಿಗೆ ಸದ್ಯ ಪ್ರಾಕ್ಟಿಕಲ್ ತರಬೇತಿ ನೀಡಲಾಗುತ್ತಿದೆ, ಯಾವುದೇ ರೀತಿಯ ವೈದ್ಯಕೀಯ ವೆಚ್ಚ ಪಡೆಯದೆ ಉಚಿತ ಶಿಕ್ಷಣ ನೀಡುತ್ತಿದ್ದೇವೆ, ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಾಲಿನಿ.ಎಂ. ಅವರು ಖುದ್ದು ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ತರಗತಿ ನಡೆಸಿಕೊಡುತ್ತಿದ್ದು ಉಕ್ರೇನ್ ನಿಂದ ಥಿಯರಿ ಶಿಕ್ಷಣ ಹಾಗೂ ಆಸ್ಪತ್ರೆಯಲ್ಲಿ ಪ್ರಾಕ್ಟಿಕಲ್ ಪಡೆಯುತ್ತಿದ್ದಾರೆ ಎಂದರು.
ವಿದ್ಯಾರ್ಥಿನಿ ರೂಪಶ್ರೀ ಮಾತನಾಡಿ ಸಿದ್ಧಗಂಗಾ ಆಸ್ಪತ್ರೆ ನಮಗೆ ಮಾನಸಿಕ ಧೈರ್ಯ ತುಂಬಿ, ನಮ್ಮ ಎಲ್ಲಾ ಗೊಂದಲಗಳನ್ನು ಬಗೆ ಹರಿಸಿ ವೈದ್ಯಕೀಯ ತರಬೇತಿ ಮುಂದುವರೆಸಲು ಅವಕಾಶ ನೀಡುತ್ತಿದ್ದು, ಇಲ್ಲಿನ ವೈದ್ಯರು ರೋಗಿಗಳ ಸಂದರ್ಶನ, ಶಸ್ತ್ರ ಚಿಕಿತ್ಸಾಗಳ ಕೊಠಡಿಗಳಲ್ಲಿ ಅತ್ಯುತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ, ಮುಂದಿನ ಭವಿಷ್ಯದ ಬಗ್ಗೆ ಉಕ್ರೇನ್ ಹಾಗೂ ಭಾರತ ಸರ್ಕಾರದ ನಿರ್ಧಾರವನ್ನು ಎದುರುನೋಡುತ್ತಿದ್ದೇವೆ ಎಂದರು.
ಎಸ್ಎಂಸಿಆರ್ಐ ಪ್ರಾಂಶುಪಾಲರಾದ ಡಾ.ಶಾಲಿನಿ ಎಂ, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ನಿರಂಜನ್ ಮೂರ್ತಿ, ಸಿಇಓ ಡಾ.ಸಂಜೀವ್ ಕುಮಾರ್, ಪಿಆರ್ಓ ಕಾಂತರಾಜು ಇದ್ದರು.

Get real time updates directly on you device, subscribe now.

Comments are closed.

error: Content is protected !!