ಅಗ್ನಿ ಅವಘಡಕ್ಕೆ ಕೊಬ್ಬರಿ, ದವಸ ಧಾನ್ಯ ಭಸ್ಮ

326

Get real time updates directly on you device, subscribe now.

ತುರುವೇಕೆರೆ: ತಾಲೂಕಿನ ದಂಡಿನಶಿವರ ಠಾಣಾ ವ್ಯಾಪ್ತಿಯ ಅಪ್ಪಸಂದ್ರ ಗುಂಡಿಕಾವಲ್ ಬಳಿ ವಾಸದ ಮನೆಯಲ್ಲಿ ದಾಸ್ತಾನು ಮಾಡಲಾಗಿದ್ದ 30 ಸಾವಿರಕ್ಕೂ ಹೆಚ್ಚು ಕೊಬ್ಬರಿ ಹಾಗೂ ದವಸ ಧಾನ್ಯಗಳು ಬೆಂಕಿ ಕೆನ್ನಾಲಿಗೆ ಸಿಲುಕಿ ಉರಿದು ಬೂದಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ದಂಡಿನಶಿವರ ಹೋಬಳಿ ಅಪ್ಪಸಂದ್ರ ಗುಂಡಿಕಾವಲಿನಲ್ಲಿ ಈಶ್ವರಪ್ಪ ತನ್ನ ಕುಟುಂಬದೊಂದಿಗೆ ವಾಸವಿದ್ದರು, ತಾವು ಬೆಳೆದ ಕೊಬ್ಬರಿಯನ್ನು ವಾಸವಿದ್ದ ಮನೆಯಲ್ಲಿಯೇ ಸುಮಾರು 30 ಸಾವಿರ ಕೊಬ್ಬರಿ ದಾಸ್ತಾನು ಮಾಡಿದ್ದರು, ದಂಡಿನಶಿವರ ಜಾತ್ರಾ ಮಹೋತ್ಸವಕ್ಕೆಂದು ತಮ್ಮ ಕುಟುಂಬ ಸಮೇತ ತೆರಳಿದ್ದ ವೇಳೆ ಕೊಬ್ಬರಿ ದಾಸ್ತಾನಿಗೆ ಬೆಂಕಿ ತಗುಲಿದೆ, ಆಸುಪಾಸಿನವರು ಹಾಗೂ ಅಗ್ನಿಶಾಮಕ ಸಿಬ್ಬಂದಿಯವರ ಬೆಂಕಿ ನಂದಿಸುವ ಪ್ರಯತ್ನವಿಲವಾಗಿದ್ದು, ಮನೆಯ ಬಳಿ ನಿಂತಿದ್ದ ಟ್ರಾಕ್ಟರ್ ಮತ್ತಿತರ ವಸ್ತುಗಳನ್ನು ಸಂರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಯ ತೀವ್ರತೆಗೆ ಕೊಬ್ಬರಿ, ದವಸ ಧಾನ್ಯ ಉರಿದು ಬೂದಿಯಾದವು ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ದಲಿತ ಸಂಘರ್ಷ ಸಮಿತಿ ಮುಖಂಡ ಜಗದೀಶ್, ಒಂಟಿ ಮನೆಯಲ್ಲಿ ವಾಸಿಸುತ್ತಿದ್ದ ದಲಿತ ಸಮುದಾಯಕ್ಕೆ ಸೇರಿದ ಈಶ್ವರಪ್ಪ ಕುಟುಂಬವನ್ನು ಒಕ್ಕಲೆಬ್ಬಿಸುವ ಸಲುವಾಗಿ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿದ ಅವರು ಅಪಾರ ಪ್ರಮಾಣದ ಕೊಬ್ಬರಿ, ದವಸ ಧಾನ್ಯ, ಬಟ್ಟೆ ಬರೆ ಕಳೆದುಕೊಂಡಿರುವ ಈಶ್ವರಪ್ಪ ಕುಟುಂಬ ಬೀದಿಗೆ ಬಿದ್ದಿದೆ, ಸಂತ್ರಸ್ಥ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ನೀಡಬೇಕು, ಕೃತ್ಯದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಘಟನೆಯ ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿಗಳು ಹಾಗೂ ದಂಡಿನಶಿವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!