ಕುಣಿಗಲ್: ಕುರಿ ಮಂದೆ ಮೇಲೆ ಅಪರಿಚಿತ ಲಾರಿ ಹರಿದು ಅರವತ್ತಕ್ಕೂ ಹೆಚ್ಚು ಕುರಿಗಳ ಮಾರಣ ಹೋಮವಾಗಿ ಕುರಿಗಾಹಿಯೊಬ್ಬ ಗಾಯಗೊಂಡ ಘಟನೆ ಕುಣಿಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಜ್ಯ ಹೆದ್ದಾರಿ 33ರ ಗವಿಮಠ ಗ್ರಾಮದಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಮಡಕಶಿರಾ ತಾಲೂಕಿನ ಜಂಬಲಬಂಡೆ ಗ್ರಾಮದ ದೊಡ್ಡ ಈರಪ್ಪ ಮತ್ತು ಸಂಗಡಿಗರು ತಮಗೆ ಸೇರಿದ ಸಾವಿರದ ಇನ್ನೂರಕ್ಕೂ ಹೆಚ್ಚು ಕುರಿಯನ್ನು ಕಳೆದ ಕೆಲವಾರು ತಿಂಗಳಿನಿಂದ ತಾಲೂಕಿನ ವಿವಿಧೆಡೆ ಮೇಯಿಸಿಕೊಂಡು ಶುಕ್ರವಾರ ಬೆಳಗಿನ ಜಾವ ಮೂರುವರೆ ಗಂಟೆಯಲ್ಲಿ ಕುಣಿಗಲ್ ಕಡೆಗೆ ಕುರಿ ಮಂದೆಯೊಂದಿಗೆ ಹೆದ್ದಾರಿ 33ರಲ್ಲಿ ಸಾಗುತ್ತಿರುವಾಗ ಮದ್ದೂರು ಕಡೆಯಿಂದ ಕುಣಿಗಲ್ ಕಡೆಗೆ ಸಾಗುತ್ತಿದ್ದ ಅಪರಿಚಿತ ಲಾರಿ ಏಕಾಏಕಿ ಕುರಿ ಮಂದೆ ಮೇಲೆ ಹರಿದು ಸ್ಥಳದಲ್ಲೆ ಅರವತ್ತಕ್ಕೂ ಹೆಚ್ಚು ಕುರಿ ಮೃತಪಟ್ಟಿದ್ದು, ಇಪ್ಪತ್ತಕ್ಕೂ ಹೆಚ್ಚು ಗಾಯಗೊಂಡವು.
ಘಟನೆಯಲ್ಲಿ ಕುರಿಗಾಹಿ ಚಂದ್ರಪ್ಪ ಎಂಬಾತ ಗಾಯಗೊಂಡಿದ್ದಾನೆ, ಇಡೀ ಹೆದ್ದಾರಿ ತುಂಬೆಲ್ಲಾ ಸತ್ತ ಕುರಿಗಳ ಅವಶೇಷ ಹರಡಿ ಅಪಘಾತದ ಭೀಕರತೆಗೆ ಸಾಕ್ಷಿಯಾಗುತ್ತು. ಸ್ಥಳಕ್ಕೆ ತಹಶೀಲ್ದಾರ್ ಮಹಾಬಲೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಂದ್ರಪ್ಪ ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಪಘಾತ ನಡೆದ ಸ್ಥಳದ ಸುತ್ತಲೂ ಮೃತ ಕುರಿಗಳ ಅವಶೇಷದಿಂದ ದುರ್ವಾಸನೆ ಬೀರತೊಡಗಿದ್ದು ಗ್ರಾಮಸ್ಥರು ಹೇರೂರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಕೂಡಲೆ ಸ್ವಚ್ಛಗೊಳಿಸುವಂತೆ ಒತ್ತಾಯಿಸಿದರು.
ಲಾರಿ ಹರಿದು 60ಕ್ಕೂ ಹೆಚ್ಚು ಕುರಿ ಮಾರಣ ಹೋಮ
Get real time updates directly on you device, subscribe now.
Prev Post
Next Post
Comments are closed.