ಪರ್ಯಾಯ ರಾಜಕಾರಣಕ್ಕೆ ಜೆಡಿಯು ಬೆಂಬಲಿಸಿ

204

Get real time updates directly on you device, subscribe now.

ತುಮಕೂರು: ಬಸವಣ್ಣನವರ ತತ್ವ, ಆದರ್ಶ, ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಸಮ ಸಮಾಜದ ನಿರ್ಮಾಣ ಸಾಧ್ಯ ಹಾಗೆಯೇ ಪರ್ಯಾಯ ರಾಜಕಾರಣಕ್ಕೆ ಜನರು ಬೆಂಬಲ ನೀಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಜೆಡಿಯು ಜಿಲ್ಲಾಧ್ಯಕ್ಷ ಕೆ.ಜಿ.ಎಲ್.ರವಿ ತಿಳಿಸಿದರು.

ಜಿಲ್ಲಾ ಜೆಡಿಯು ಕಚೇರಿಯಲ್ಲಿ ಬಸವ ಜಯಂತಿ ಆಚರಿಸಿ ಮಾತನಾಡಿ, ಕಾಂಗ್ರೆಸ್, ಬಿಜೆಪಿಯ ಕೋಮು, ದ್ವೇಷದ ರಾಜಕಾರಣದಿಂದ ಜನರು ಬೇಸತ್ತಿದ್ದು, ಪರ್ಯಾಯ ರಾಜಕೀಯ ಪಕ್ಷಗಳತ್ತ ಮುಖ ಮಾಡಿದ್ದಾರೆ ಎನ್ನುವುದಕ್ಕೆ ದೆಹಲಿ ಮತ್ತು ಪಂಜಾಬ್ ಲಿತಾಂಶಗಳೇ ಉದಾಹರಣೆಯಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೂ ಜೆಡಿಯುಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿನ ಮೂರು ಪಕ್ಷಗಳ ಆಡಳಿತ ನೋಡಿದ ಪ್ರಬುದ್ಧ ಮತದಾರರು ರಾಜ್ಯಕ್ಕೆ ಒಂದು ಪರ್ಯಾಯ ಪಕ್ಷ ಅಗತ್ಯವಿದೆ ಎಂಬ ಮಾತುಗಳು ರಾಜ್ಯದಲ್ಲಿ ಕೇಳಲಾರಂಭಿಸಿದೆ. 70 ವರ್ಷಗಳಲ್ಲಿ ದೇಶ ಮತ್ತು ರಾಜ್ಯವನ್ನು ಆಳಿದ ಕಾಂಗ್ರೆಸ್ ಸಾಲದ ಹೊರೆ ಮಾಡಿದೆ ಎಂಬ ಆರೋಪ ಮಾಡಿದ ಬಿಜೆಪಿ 7 ವರ್ಷಗಳಲ್ಲಿ ದೇಶದ ಜನರಲ್ಲಿ ಸುಳ್ಳು ಹೇಳಿ ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದು, ಬಿಜೆಪಿ ವಿರುದ್ಧ ಭ್ರಮನಿರಸನಗೊಂಡಿದ್ದಾರೆ ಎಂದರು.
ಜಾತ್ಯಾತೀತ ಜನತಾದಳದ ದ್ವಂದ ನಿಲುವುಗಳಿಂದ ರಾಜ್ಯದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುವ ಹಂತದಲ್ಲಿದೆ ಹಾಗಾಗಿ ರಾಜ್ಯದಲ್ಲಿ ಜೆಡಿಯು ಪಕ್ಷವನ್ನು ಪುನಃಶ್ವೇತನ ಮಾಡಿ ಅಧಿಕಾರಕ್ಕೆ ತರಲು ಪ್ರತಿಯೊಬ್ಬರು ಪಕ್ಷದ ತತ್ವ ಸಿದ್ಧಾಂತಗಳ ಮೇಲೆ ಸಂಘಟನೆ, ಪ್ರತಿಭಟನೆ, ಭ್ರಷ್ಟಾಚಾರ ವಿರುದ್ಧ ಹೋರಾಟ, ರೈತ ಪರ ಹೋರಾಟ, ಹಮ್ಮಿಕೊಂಡು ಪಕ್ಷ ಸಂಘಟಿಸಲು ನಿಟ್ಟಿನಲ್ಲಿ ಜಿಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ಜಿಲ್ಲಾ ಕಾರ್ಯಾಧ್ಯಕ್ಷ ಸಾಗರನಹಳ್ಳಿ ಎಸ್.ಆರ್. ಪಂಚಾಕ್ಷರಯ್ಯ, ಜಿಲ್ಲಾ ಎಸ್ಸಿ ವಿಭಾಗದ ಸಂಚಾಲಕ ಶ್ರೀರಾಮಯ್ಯ, ಜಿಲ್ಲಾ ಎಸ್ಟಿ ವಿಭಾಗದ ಸಂಚಾಲಕ ಎಂ.ಹೆಚ್.ಗೋಪಾಲ್, ಜಿಲ್ಲಾ ಹಿರಿಯ ಉಪಾಧ್ಯಕ್ಷ ಬಸವರಾಜು, ಜಿಲ್ಲಾ ಉಪಾಧ್ಯಕ್ಷರಾಗಿ ತುರುವೇಕೆರೆಯ ಎಂ.ಪಿ.ಶಿವಕುಮಾರ್, ಪುಲಮಾಚಿ ಕೋಟಿ ಕಲ್ಲಪ್ಪ, ಕೊಡಿಗೇನಹಳ್ಳಿ ನಾಗರಾಜು, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ವೀರಪ್ಪದೇವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ರೇಣುಕಪ್ರಸಾದ್, ಪಿ.ಸಿ.ಲೋಕೇಶ್, ವಿ.ಮಂಜುನಾಥ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಹರೀಶ ಎಂ.ಪಿ, ಮುದ್ದರಾಜು ಡಿ.ಸಿ, ಚಿಕ್ಕದಾಸಪ್ಪ, ಜಗದೀಶ್ ಸಂಘಟನಾ ಕಾರ್ಯದರ್ಶಿಗಳಾಗಿ ರಾಜಶೇಖರ್ ಎಸ್.ಎಸ್.ಶ್ರೀನಿವಾಸ್, ಚಂದ್ರಶೇಖರ್, ಖಜಾಂಚಿ ಎಸ್.ಜಿ.ಜಯದೇವ್, ತುಮಕೂರು ನಗರ ಅಧ್ಯಕ್ಷರು ಬಿ.ಆರ್. ಪರಮೇಶ್ ಸಿಂ‘ಗಿ ಅವರನ್ನು ಜನತಾದಳ ರಾಜ್ಯಾಧ್ಯಕ್ಷ ಮಹಿಮ ಜ. ಪಟೇಲ್ ಅವರ ಆದೇಶದ ಮೇರೆಗೆ ಮೇಲ್ಕಂಡವರನ್ನು ಜಿಲ್ಲಾ ಪದಾಧಿಕಾರಿಗಳನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ತಿಳಿಸಲಾಗಿದೆ.

Get real time updates directly on you device, subscribe now.

Comments are closed.

error: Content is protected !!