ಬೈಕ್ ಗಳ ನಡುವೆ ಡಿಕ್ಕಿ- ಸವಾರಿಗೆ ಗಂಭೀರ ಗಾಯ

340

Get real time updates directly on you device, subscribe now.

ಕೊರಟಗೆರೆ: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರಿಗೆ ಗಂಭೀರ ಗಾಯವಾಗಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಗ್ರಾಮದ ಕ್ಯಾಮೇನಹಳ್ಳಿ ರಸ್ತೆಯ ಭಾರತ್ ಗ್ಯಾಸ್ ಅಂಗಡಿ ಸಮೀಪ ಹೊಳವನಹಳ್ಳಿ ಮಾರ್ಗವಾಗಿ ಬೈಕ್ ನಲ್ಲಿ ಬಂದ ತುಂಬಗಾನಹಳ್ಳಿ ಗ್ರಾಮದ ಉಮೇಶ್ ಹಾಗೂ ಕ್ಯಾಮೇನಹಳ್ಳಿ ಮಾರ್ಗವಾಗಿ ಬೈಕ್ ನಲ್ಲಿ ಬಂದ ಅದೆ ಗ್ರಾಮದ ಹನುಮಂತರಾಯಪ್ಪ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಉಮೇಶ್ ಹಾಗೂ ಹನುಮಂತರಾಯ ಇಬ್ಬರಿಗೂ ಬಲವಾಗಿ ತಲೆಗೆ ಪಟ್ಟಾಗಿದೆ ಎನ್ನಲಾಗಿದೆ.
ಸ್ಥಳಕ್ಕೆ ಎಎಸೈ ಮಂಜುನಾಥ್, ಪೇದೆ ಬಾಲಾನಾಯಕ್ ಭೇಟಿ ನೀಡಿ ಸಾರ್ವಜನಿಕರ ಸಹಾಯದಿಂದ ಗಾಯಾಳುಗಳನ್ನ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

Get real time updates directly on you device, subscribe now.

Comments are closed.

error: Content is protected !!