ತುಮಕೂರು: ಶಿಸ್ತಿಗೆ ಇನ್ನೊಂದು ಹೆಸರೇ ಪೊಲೀಸ್ ಇಲಾಖೆ, ಇಂಥ ಇಲಾಖೆಯಲ್ಲೂ ಅಧಿಕಾರಿಗಳ ಮಧ್ಯೆ ಆಂತರಿಕ ಕದನ, ವೈಮನಸ್ಸು, ದ್ವೇಷ ಇದ್ದೇ ಇದೆ, ಇನ್ನು ಸರಕಾರಿ ವ್ಯವಸ್ಥೆಯಲ್ಲಿ ಯಾವುದೇ ಇಲಾಖೆಯಲ್ಲಿ ಸಿಬಂದ್ದಿ ಹಾಗೂ ಅಧಿಕಾರಿಗಳ ನಡುವೆ ಸಂಘರ್ಷ ನಡೆಯುತ್ತಲೇ ಇರುತ್ತದೆ, ಅದು ಬಹಿರಂಗವಾಗದೆ ಒಳಗೊಳಗೆ ಅಧಿಕಾರಿಗಳನ್ನ ಟಾರ್ಗೆಟ್ ಮಾಡುವ ಪ್ರವೃತ್ತಿ ನಡೆಯುತ್ತಲೇ ಇರುತ್ತದೆ. ಕೆಲವೊಂದು ಪ್ರಕರಣ ಬಯಲಾದರೆ ಮತ್ತೆಕೆಲವು ಪ್ರಕರಣ ಗೊತ್ತಾಗುವುದೇ ಇಲ್ಲ. ಜಿಲ್ಲೆಯಲ್ಲೂ ಕೂಡ ಆಗಾಗ್ಗೆ ವಿವಿಧ ಇಲಾಖೆಯ ಅಧಿಕಾರಗಳ ಮೇಲೆ ಟಾರ್ಗೆಟ್ ನಡೆಯುತ್ತಲೆ ಇದೆ, ಅತ್ಯಂತ ಶಿಸ್ತಿನ ಅಧಿಕಾರಿ ಜಿಲ್ಲಾ ಎಸ್ಪಿ ರಾಹುಲ್ ಕುಮಾರ್ ಅವರ ಬಗ್ಗೆಯೂ ಅಪಪ್ರಚಾರ ಮಾಡಿಸುವ ಹುನ್ನಾರ ಇಲಾಖೆ ಅಧಿಕಾರಿಗಳೇ ಮಾಡುತ್ತಿದ್ದಾರೆ ಎಂಬ ಮಾತು ಈಗ ಗುಟ್ಟಾಗಿ ಉಳಿದಿಲ್ಲ, ಇದರಿಂದ ಅಂತಹ ಅಧಿಕಾರಿಗಳಿಗಾಗುವ ಲಾಭವಾದ್ರು ಏನು ಎಂಬುದು ತಿಳಿಯುತ್ತಿಲ್ಲ!.
ಎಂತಹದ್ದೇ ಸಮಸ್ಯೆ ಇದ್ದರೂ ಜಿಲ್ಲಾ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಅವರನ್ನು ಭೇಟಿ ಮಾಡಲು ದೂರುದಾರ ಬಂದರೆ ಖದ್ದು ಅವರೇ ಚೇರು ಬಿಟ್ಟು ಸಮಸ್ಯೆ ಆಲಿಸಲು ಮುಂದಾಗುತ್ತಾರೆ, ತಕ್ಷಣ ಕೂರಿಸಿ ಟೀ ತರಿಸಿ ಮಾತನಾಡಿಸಿ ಸಮಸ್ಯೆಗೆ ಪರಿಹಾರ ಸೂಚಿಸುತ್ತಾರೆ. ಸಂಬಂಧ ಪಟ್ಟ ಠಾಣಾ ಪೊಲೀಸ್ ಸಿಬ್ಬಂದಿಗೆ ಫೋನ್ ಮಾಡಿ ಈ ಕೆಲಸ ಕೂಡಲೇ ಮಾಡಿ ಮುಗಿಸಿ ಎಂದು ಹೇಳ್ತಾರೆ, ಹೀಗೆ ಸಾರ್ವಜನಿಕರೊಂದಿಗೆ ಹೆಚ್ಚು ಆಪ್ತವಾಗಿ ನಡೆದುಕೊಳ್ಳುವ ರಾಹುಲ್ ಕುಮಾರ್ ಶಹಪುರವಾಡ್ ಬಗ್ಗೆ ಕೆಲವು ಅಧಿಕಾರಿಗಳು ಇಲ್ಲಸಲ್ಲದ ಸುದ್ದಿ ಹರಿ ಬಿಟ್ಟು ಅದನ್ನು ಮಾಧ್ಯಮದ ಮಂದಿಗೂ ಮುಟ್ಟಿಸಿ ವಿಕೃತಿ ಮೆರೆಯುತ್ತಿದ್ದಾರೆ.
ಇಲಾಖೆಯಲ್ಲಿದ್ದ ಹಲವು ಹುಳುಕುಗಳನ್ನು ಸರಿಪಡಿಸಿ ಪೊಲೀಸ್ ಇಲಾಖೆ ಮರ್ಯಾದೆ ಉಳಿಸಿ, ಬೇರು ಬಿಟ್ಟುಕೊಂಡಿದ್ದ ಹಲವು ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದರು, ಆಗಾಗ ಎರಗಿ ಬರುವ ಆರ್ಟಿಐ ಅರ್ಜಿದಾರರಿಗೂ ಮೂಗುದಾರ ಹಾಕಿದ್ದರು. ದಂಡಿನಶಿವರ ಪ್ರಕರಣವೊಂದರಲ್ಲಿ ಖುದ್ದು ಎಸ್ಪಿ ಕಾರು ಕಳಿಸಿ ಸಾಕಷ್ಟು ಪ್ರಶಂಸೆಗೆ ಒಳಗಾಗಿದ್ದರು, ಇಂತಹ ಅಧಿಕಾರಿ ಬಗ್ಗೆ ಅವಹೇಳನವಾಗಿ ಬಿಂಬಿಸುವ ಕೆಲಸ ಮಾಡಲು ಕೆಲ ಪೊಲೀಸ್ ಅಧಿಕಾರಿಗಳು ಹೊರಟಿದ್ದಾರೆ, ತನ್ನ ವ್ಯಾಪ್ತಿಯಲ್ಲಿ ಜನರಿಗೆ ಅನುಕೂಲವಾಗುವ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕಾದ ಕೆಲವು ಅಧಿಕಾರಿ ಎನಿಸಿಕೊಂಡ ಪೊಲೀಸಪ್ಪಗಳು ಎಸ್ಪಿ ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲು ಒರಟಿರುವುದು ನಾಚಿಕೆಗೇಡಿನ ಸಂಗತಿ, ಸತ್ಯ ಯಾವುತ್ತು ಸುಳ್ಳಾಗಲ್ಲ ಎಂಬುದು ಕೆಲವು ತರಲೆ ಖಾಕಿಗಳಿಗೆ ಅರ್ಥವಾಗಬೇಕಿದೆ, ಇಲ್ಲವಾದಲ್ಲಿ ತಾವು ತೋಡಿದ ಗುಂಡಿಗೆ ತಾವೇ ಬೀಳುವುದು ನಿಶ್ಚಿತ ಎಂದು ಪೊಲೀಸರೇ ಮಾತನಾಡಿಕೊಳ್ಳುತ್ತಿದ್ದಾರೆ.
Get real time updates directly on you device, subscribe now.
Prev Post
Next Post
Comments are closed.