ಪಿಎಫ್ ಹಣಕ್ಕಾಗಿ ಪೌರ ಕಾರ್ಮಿಕನ ಶವ ಇಟ್ಟು ಪ್ರತಿಭಟನೆ

302

Get real time updates directly on you device, subscribe now.

ಚಿಕ್ಕನಾಯಕನಹಳ್ಳಿ: ಪಟ್ಟಣದ ಪುರಸಭೆಯಲ್ಲಿ ಚಾಲಕನಾಗಿದ್ದ ರೇಣುಕಯ್ಯ ಭಾನುವಾರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಪಿಎಫ್ ಹಣಕ್ಕಾಗಿ ದಿನನಿತ್ಯ ಪುರಸಭೆಗೆ ಅಲೆದಾಡುತ್ತಿದ್ದರು ಹಾಗೂ ಹಣಕ್ಕಾಗಿ ಹೋರಾಟದಲ್ಲಿ ಸಹ ಭಾಗವಹಿಸಿದ್ದರು, ಆದರೆ ಮೃತಪಟ್ಟಿದ್ದು ಪಿಎಫ್ ಹಣ ಸಿಗದೆ ಸಾವನಪ್ಪಿದಕ್ಕೆ ಆಕ್ರೋಶಕೊಂಡ ಪೌರ ಕಾರ್ಮಿಕರು ರೇಣುಕಯ್ಯನ ಶವವನ್ನು ಪುರಸಭೆ ಆವರಣದಲ್ಲಿ ಇಟ್ಟು ಪ್ರತಿಭಟನೆ ನಡೆಸಿದರು.

ಪಟ್ಟಣದ ಪುರಸಭೆಯಲ್ಲಿ ಹೊರಗುತ್ತಿಗೆ ನೌಕರನಾಗಿ ಸುಮಾರು 25 ವರ್ಷ ಸೇವೆ ಸಲ್ಲಿಸಿದ ರೇಣುಕಯ್ಯ ಬೈಕ್ ಗುದ್ದಿ ಸಾವನ್ನಪ್ಪಿದ್ದರು, ಇತ್ತೀಚಿನ ಕೆಲ ತಿಂಗಳ ಹಿಂದೆ ಚಾಲಕ ಕೆಲಸದಿಂದ ವಜಾ ಮಾಡಲಾಗಿತ್ತು, ಇದರಿಂದ ನೊಂದಿದ್ದ ರೇಣುಕಯ್ಯ ಜೀವನದ ಯೋಚನೆಯಲ್ಲಿ ಮುಳಗಿದ್ದರು ಹಾಗೂ ಹಲವಾರು ವರ್ಷಗಳಿಂದ ಪಿಎಫ್ ಹಣ ಬಂದಿಲ್ಲ ಎಂದು ಕಚೇರಿಗೆ ಆಲೆದಾಡುತ್ತಿದ್ದರು ಹಾಗೂ ಪಿಎಫ್ ಹಣಕ್ಕಾಗಿ ನಡೆದ ಹೋರಾಟಗಳಲ್ಲಿ ಭಾಗವಹಿಸಿ ಪಿಎಫ್ ಹಣ ನೀಡುವಂತೆ ಅಧಿಕಾರಿಗಳಲ್ಲಿ ಗೋಗರೆದಿದ್ದರು, ಕೊನೆಗೂ ಪಿಎಫ್ ಹಣ ನೋಡದೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಪುರಸಭೆ ಮುಂಭಾಗ ಮೃತ ರೇಣುಕಯ್ಯನ ಶವವಿಟ್ಟು 25 ವರ್ಷ ಪುರಸಭೆಗೆ ಸೇವೆ ಸಲ್ಲಿಸಿದರು ಕೆಲಸದಿಂದ ವಜಾ ಮಾಡಲಾಗಿತ್ತು, ನ್ಯಾಯಯುತವಾಗಿ ನೀಡಬೇಕಾದ ಪಿಎಫ್ ಹಣ ನೀಡಲಿಲ್ಲ, ಬದುಕಿದ್ದಾಗ ಕಷ್ಟ ಅನುಭವಿಸಿಕೊಂಡೆ ರೇಣುಕಯ್ಯ ಸಾವನ್ನಪ್ಪಿದ್ದು ಇನ್ನಾದರು ಇವರ ಕುಟುಂಬಕ್ಕೆ ಪಿಎಫ್ ಹಣ ನೀಡುತ್ತೀರಾ ಎಂದು ಪುರಸಭೆ ಅಧಿಕಾರಿಗಳನ್ನು ಪೌರ ಕಾರ್ಮಿಕರು ಪ್ರಶ್ನೆ ಮಾಡಿದರು. ರೇಣುಕಯ್ಯನ ಕುಟುಂಬಕ್ಕೆ 10 ಲಕ್ಷ ಪರಿಹಾರ, ಇವರ ಮಗನಿಗೆ ಪುರಸಭೆಯಲ್ಲಿ ಕೆಲಸ ನೀಡುವಂತೆ ಮುಖ್ಯಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ಮಗನಿಗೆ ಕೆಲಸ ನೀಡುವುದಾಗಿ ಭರವಸೆ ನೀಡಿದ ಮುಖ್ಯಾಧಿಕಾರಿ: ಪುರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ರೇಣುಕಯ್ಯನ ಸಾವು ನಮಗೂ ಸಹ ದುಃಖ ತಂದಿದ್ದು , ಪಿಎಫ್ ಹಣ ಶೀಘ್ರದಲ್ಲಿ ಅವರ ಕುಟುಂಬಕ್ಕೆ ನೀಡಲಾಗುತ್ತದೆ ಹಾಗೂ ಅವರ ಮಗನಿಗೆ ಪುರಸಭೆಯಲ್ಲಿ ಕೆಲಸ ನೀಡುವುದಾಗಿ ಮುಖ್ಯಾಧಿಕಾರಿ ಶ್ರೀನಿವಾಸ್ ಪೌರ ಕಾರ್ಮಿಕರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಪುಷ್ಪ, ಮಾಜಿ ಉಪಾಧ್ಯಕ್ಷೆ ರೇಣುಕಾ ಗುರುಮೂರ್ತಿ, ಸದಸ್ಯರಾದ ಉಮಾ, ನಾಗರಾಜು ಸೇರಿದಂತೆ ಪುರಸಭೆ ಅಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!