ಬಿರುಗಾಳಿ, ಮಳೆಗೆ ನೆಲಕಚ್ಚಿದ ವಿದ್ಯುತ್ ಕಂಬ

401

Get real time updates directly on you device, subscribe now.

ತುರುವೇಕೆರೆ: ತಾಲೂಕಿನ ವ್ಯಾಪ್ತಿಯಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ತೆಂಗಿನ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳುವ ಮೂಲಕ ಅಪಾರ ನಷ್ಟ ಸಂಭವಿಸಿದೆ.

ತಾಲೂಕಿನ ದಬ್ಬೇಘಟ್ಟ, ಮಾಯಸಂದ್ರ, ದಂಡಿನಶಿವರ ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯಿತು. ಬಿರುಗಾಳಿ ತೀವ್ರತೆಗೆ ತೆಂಗಿನ ಮರಗಳು ವಿದ್ಯುತ್ ಮಾರ್ಗಗಳ ಮೇಲೆ ಉರುಳಿಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ, ಪರಿಣಾಮವಾಗಿ ತಾಲೂಕಿನ ರಾಮಡೀಹಳ್ಳಿ, ಮಾಚೇನಹಳ್ಳಿ, ಮಾಯಸಂದ್ರ ಹೋಬಳಿಯ ನರಿಗೇಹಳ್ಳಿ, ಗೈನಾಥಪುರ, ದಬ್ಬೆಘಟ್ಟ ವ್ಯಾಪ್ತಿಯ ದೊಡ್ಡಾಘಟ್ಟ, ಸೋಮೇನಹಳ್ಳಿ ಬಳಿ ಕಂಬಗಳು ಉರುಳಿ ಬಿದ್ದಿದ್ದು, ಒಟ್ಟಾರೆ 75 ಕ್ಕೂ ಹೆಚ್ಚು ಕಂಬ ಮುರಿದು ಬಿದ್ದಿವೆ ಎಂದು ಬೆಸ್ಕಾಂ ಇಲಾಖೆ ಮಾಹಿತಿ ನೀಡಿದೆ.
ವಿದ್ಯುತ್ ಕಂಬ ಉರುಳಿ ಬಿದ್ದ ಪರಿಣಾಮ ಹಲವು ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು, ಬೆಸ್ಕಾಂ ಇಲಾಖೆಯ ಎಇ ಗಿರೀಶ್, ಶಾಖಾಧಿಕಾರಿಗಳಾದ ಉಮೇಶ್ವರಯ್ಯ, ನಾರಾಯಣಪ್ಪ, ಸೋಮಶೇಖರ್, ಕಾಂತರಾಜ್ ಮತ್ತು ಪವರ್ ಮ್ಯಾನ್ಗಳು ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಐಪಿ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಕಾರ್ಯ ಪ್ರಗತಿಯಲ್ಲಿದ್ದು, ಕೆಲ ಗ್ರಾಮಗಳಿಗೆ ಈಗಾಗಲೇ ವಿದ್ಯುತ್ ಸಂಪರ್ಕ ಒದಗಿಸಲಾಗುವುದು ಎಂದು ಎಇ ಗಿರೀಶ್ ಮಾಹಿತಿ ನೀಡಿದರು.

Get real time updates directly on you device, subscribe now.

Comments are closed.

error: Content is protected !!