ತುಮಕೂರು: ರಾಷ್ಟ್ರ ಮಟ್ಟದಲ್ಲಿ ಶೈಕ್ಷಣಿಕವಾಗಿ ಈಗಾಗಲೇ ಗುರುತಿಸಿಕೊಂಡಿರುವ ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆಯಡಿಯಲ್ಲಿ ಇದೀಗ ತುಮಕೂರಿನ ಸರಸ್ವತಿಪುರಂನಲ್ಲಿ ಆಧುನಿಕ ಸೌಲಭ್ಯ ಮತ್ತು ಭೋದನಾ ಸಲಕರಣೆ ಒಳಗೊಂಡ ಶ್ರೀಸಿದ್ಧಾರ್ಥ ಸಿರಿ ಪಿಯು ಕಾಲೇಜು ಪ್ರಸಕ್ತ ಸಾಲಿನಿಂದ ಕಾರ್ಯಾರಂಭ ಮಾಡಿದೆ.
ನಗರದ ಸರಸ್ವತಿಪುರಂನಲ್ಲಿರುವಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿದ್ಧಾರ್ಥ ಸಿರಿ ಪಿಯು ಕಾಲೇಜಿನ ವಿಶೇಷತೆಗಳನ್ನು ಕುರಿತು ಸಾಹೆ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಂ.ಝಡ್.ಕುರಿಯನ್ ಮಾಹಿತಿ ನೀಡಿದರು.
ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆ ರಾಜ್ಯದಲ್ಲಿ 85 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆ ನಡೆಸುತ್ತಿದ್ದು, ಆಂಧ್ರಪ್ರದೇಶ ಮತ್ತು ಬೆಂಗಳೂರಿನಲ್ಲಿ ಈಗಾಗಲೆ ಶಾಖೆಗಳನ್ನು ಹೊಂದಿರುವ ಸಿರಿ ಅಕಾಡೆಮಿ ಜೊತೆ ಸಹಯೋಗದೊಂದಿಗೆ ತುಮಕೂರಿನಲ್ಲಿ ಆಧುನಿಕ ಸೌಲಭ್ಯ ಹೊಂದಿರುವ ಪಿಯುಸಿ ಕಾಲೇಜು ಆರಂಭವಾಗಿರುವುದು ಜಿಲ್ಲೆಯ ಗ್ರಾಮಾಂತರ ಪ್ರದೇಶಕ್ಕೆ ಉತ್ತಮ ಶೈಕ್ಷಣಿಕ ಕೊಡುಗೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಿರಿ ಅಕಾಡೆಮಿ ಮುಖ್ಯಸ್ಥ ಸಾಂಬಶಿವರಾವ್ ಮಾತನಾಡಿ, ತುಮಕೂರಿನಲ್ಲಿ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಶಿಕ್ಷಣ ನೀಡುತ್ತಿದೆ, ಹೊರಗಡೆ ಹೋಗುವ ಅವಶ್ಯಕತೆ ಇಲ್ಲ, ಇಲ್ಲೇ ಎಲ್ಲಾ ಮೂಲ ಸೌಕರ್ಯ ದೊರೆಯುತ್ತಿವೆ, ಪುಸ್ತಕ, ಕೋಚಿಂಗ್, ಸಮವಸ್ತ್ರ ಆಧಾರದ ಮೇಲೆ ಶುಲ್ಕ ತೆಗೆದುಕೊಳ್ಳಲಾಗುತ್ತದೆ, ಸಿದ್ದಾರ್ಥ ಸಿರಿ ಅಕಾಡೆಮಿಯಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ಹೊಂದಿದು, ಪಿಯುಸಿ ಜೊತೆಗೆ ನೀಟ್ ಸೇರಿದಂತೆ ಸ್ಫರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಯೋಜನಾ ಸಮನ್ವಯಾಧಿಕಾರಿ ಎನ್.ಜಿ.ಜಯಕುಮಾರ್ ಮಾತನಾಡಿ, ಸಿದ್ಧಾರ್ಥ ಶಿಕ್ಷಣ ಸಂಸ್ಥೆಯು ಜಿಲ್ಲೆಯ ಶೈಕ್ಷಣಿಕ ಬೇಡಿಕೆಗಳಿಗೆ ಅನುಗುಣವಾಗಿ ಮತ್ತು ಪೂಷಕರ ಒತ್ತಾಸೆಗೆ ಪೂರಕವಾಗಿ ಪಿಯುಸಿ ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡಲು ಸಿದ್ಧವಿದೆ, ಮಕ್ಕಳ ಭವಿಷ್ಯ ಮುಖ್ಯ, ಅದರಲ್ಲೂ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಾಲೇಜು ಆರಂಭವಾಗಿದೆ, ಪ್ರಯತ್ನ ಸಣ್ಣದು ಉದ್ದೇಶ ದೊಡ್ಡದು ಎಂಬ ಘೋಷಣೆಯೊಂದಿಗೆ ಕಾಲೇಜಿನಲ್ಲಿ ಚಟುವಟಿಕೆಗಳು ನಡೆಯಲಿವೆ ಎಂದು ತಿಳಿಸಿದರು.
ಎಸ್ಎಸ್ಎಲ್ಸಿ ಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದು ಸಿರಿ ಅಕಾಡೆಮಿಯ ಪಿಯುಸಿ ಕಾಲೇಜಿಗೆ ದಾಖಲಾಗಿರುವ ಗದಗ್ ಜಿಲ್ಲೆಯ ಲಕ್ಷ್ಮೀಶ್ವರದ ಚೇತನ್.ಆರ್.ಕೆ ಮತ್ತು ಪೋಷಕರಿಗೆ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಿದ್ದಾರ್ಥ ಸಿರಿ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಶಿವಪ್ರಸಾದ್, ಸಿದ್ದಾರ್ಥ ಸಂಸ್ಥೆಯ ಭೋದಕ ಸಿಬ್ಬಂದಿ ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.
ಶ್ರೀಸಿದ್ಧಾರ್ಥ ಸಿರಿ ಪಿಯು ಕಾಲೇಜು ಆರಂಭ
Get real time updates directly on you device, subscribe now.
Prev Post
Comments are closed.