ಮೇ 15ಕ್ಕೆ ತುಮಕೂರಿಗೆ ಜಾಂಬವ ರಥಯಾತ್ರೆ ಆಗಮನ

154

Get real time updates directly on you device, subscribe now.

ತುಮಕೂರು: ರಾಜ್ಯದಲ್ಲಿ ಮಾದಿಗರನ್ನು ಒಗ್ಗೂಡಿಸುವ ಸಲುವಾಗಿ ಪ್ರಗತಿಪರರು ಚಿಂತಕರು ಪ್ರಜ್ಞಾವಂತರು ಮಾದಿಗರ ಜಾತಿ ಪ್ರಮಾಣ ಪತ್ರದಲ್ಲಿ ಆದಿ ದ್ರಾವಿಡ ಬದಲಾಗಿ ಮಾದಿಗ ಎಂದು ಮುಂದಿನ ಜಾತಿ ಗಣತಿ ಸಮೀಕ್ಷೆಯಲ್ಲಿ ಬರೆಸುವ ಸಂಬಂಧ ಹಾಗೂ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಾಂಬವ ರಥಯಾತ್ರೆ ಕೈಗೊಂಡಿದ್ದು ಜಾಂಬವ ಜಾಗೃತಿ ರಥಯಾತ್ರೆ ಮೇ 15 ರಂದು ತುಮಕೂರು ನಗರಕ್ಕೆ ಆಗಮಿಸಲಿದೆ ಎಂದು ಮಾದಿಗ ಸಮುದಾಯದ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೋಡಿಯಾಲ ಮಹದೇವ್ ತಿಳಿಸಿದರು.

ನಗರದಲ್ಲಿ ಜಾಗೃತಿ ಜಾಂಬವ ರಥಯಾತ್ರೆ ಆಗಮಿಸುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಮೇ 15ಕ್ಕೆ ನಗರಕ್ಕೆ ರಥಯಾತ್ರೆ ಆಗಮಿಸಲಿದ್ದು ನಂತರ ನಗರದ ಎಂ.ಜಿ ರಸ್ತೆಯ ಬಾಲಭವನದಲ್ಲಿ ಬೆಳಗ್ಗೆ 10.30 ಕ್ಕೆ ಸಮಾವೇಶ ನಡೆಯಲಿದೆ ಎಂದರು.
ರಾಜ್ಯದ 16 ಜಿಲ್ಲೆಗಳಲ್ಲಿ ಆದಿಜಾಂಬವ ಮಾದಿಗ ಸಮುದಾಯದ ಸುಮಾರು 40 ಲಕ್ಷಕ್ಕೂ ಹೆಚ್ಚು ಮಾದಿಗರು ತಮ್ಮ ಸಮುದಾಯದ ಜಾತಿ ಪ್ರಮಾಣ ಪತ್ರಗಳಲ್ಲಿ ಆದಿ ಕರ್ನಾಟಕ ಬದಲು ಆದಿ ದ್ರಾವಿಡ ಎಂದು ನಮೂದು ಮಾಡುತ್ತಿದ್ದಾರೆ, ಈ ಪ್ರಮಾಣಪತ್ರ ಪಡೆದಿರುವ ಕಾರಣದಿಂದಾಗಿ ಸರ್ಕಾರಿ ಸೌಲಭ್ಯಗಳಿಂದ ಮತ್ತು ರಾಜಕೀಯ ಕ್ಷೇತ್ರದಿಂದ ಒಳಮೀಸಲಾತಿ ಸೇರಿದಂತೆ ಎಲ್ಲಾ ತರಹದ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ತಿಳಿಸಿದರು.
ಮುಂಬರುವ ರಾಷ್ಟ್ರೀಯ ಜಾತಿ ಜನಗಣತಿ ಸಮೀಕ್ಷೆಯ ಸಮಯದಲ್ಲಿ ಮಾದಿಗ ಅಥವಾ ಮಾದರ್ ಎಂದು ಬರೆಸುವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಏಪ್ರಿಲ್ 5 ರಿಂದ ಮಾದಿಗ ಸಮುದಾಯ ವಾಸಿಸುವ ಊರುಗಳಿಗೆ ಹೋಗಿ ಸಮೀಕ್ಷೆಯಲ್ಲಿ ಏಕೆ ಬದಲಾಗಿ ಮಾದಿಗ ಎಂದು ಬಳಸುವಂತೆ ಜಾಗೃತಿ ಮೂಡಿಸಲು ರಾಜ್ಯದ ಚಿಂತಕರ ತಂಡ ಜಾಂಬವ ಯಾತ್ರೆಯ ಮೂಲಕ ಪ್ರವಾಸ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಈಗಾಗಲೇ ಈ ಜಾಂಬವ ಜಾಗೃತಿ ರಥಯಾತ್ರೆಯು ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಮುಗಿಸಿ ತುಮಕೂರು ಜಿಲ್ಲೆಗೆ ಮೇ 15 ರಂದು ಆಗಮಿಸುತ್ತಿದ್ದು ಜಿಲ್ಲೆಯ ಮಾದಿಗ ಸಮುದಾಯದ ಮುಖಂಡರು ಜಾಂಬವ ರಥಯಾತ್ರೆಯ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ವಿವರ ಪಡೆಯಲು ಯಾತ್ರೆಯಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದು ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ಸಮುದಾಯದ ಮುಖಂಡ ಹಾಗೂ ಚಿಂತಕ ಕೊಟ್ಟ ಶಂಕರ್, ಯುವ ಮುಖಂಡ ಬೆಳಗುಂಬ ವೆಂಕಟೇಶ್, ನರಸಪ್ಪ, ರಘು ಬಿ.ಎಚ್, ಬಂಡೆ ಕುಮಾರ್, ದೊಡ್ಡಗುಣಿ ಕೀರ್ತಿ, ಕಾವಲು ರಾಜಣ್ಣ ಯಲದಬಾಗಿ, ಹರೀಶ್, ಕಾಂತರಾಜು, ಡಾ.ಮುಕುಂದ ಎಲ್, ಪಾಲಸಂದ್ರ ಹನುಮಂತರಾಯಪ್ಪ, ನಾಗರಾಜು, ಮಾದಿಗ ದಂಡೋರ ರಾಜ್ಯ ಕಾರ್ಯದರ್ಶಿ ಗೂಳಹರಿವೆ ನಾಗರಾಜ್, ಕೇಬಲ್ ರಘು, ನಾಗೇಶ್, ಮಧು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!