ದಾದಿಯರು ವೃತ್ತಿಪರತೆಯಿಂದ ಕೆಲಸ ಮಾಡಲಿ

89

Get real time updates directly on you device, subscribe now.

ತುಮಕೂರು: ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳಬೇಕು, ಶುಶ್ರೂಷೆಗೆ, ನಗು ಎಂಬುವುದು ಬಹಳ ಮುಖ್ಯ, ದಾದಿಯರ ಕೆಲಸದ ಬಗ್ಗೆ ಹೆಮ್ಮೆ ಇರಬೇಕೆ ಹೊರತು ಅಸಡ್ಡೆ ತೋರಬಾರದು, ಅದು ತೋರ್ಪಡಿಕೆಯಾಗದೆ ವೃತ್ತಿಪರತೆಯಿಂದ ಕೂಡಿರಬೇಕು ಎಂದು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಲಿಯ ಸದಸ್ಯರಾದ ಕನ್ನಿಕಾ ಪರಮೇಶ್ವರ ಕರೆ ನೀಡಿದರು.

ನಗರದ ಶ್ರೀಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಔಷಧಶಾಸ್ತ್ರ ಹಾಗೂ ವೈದ್ಯಕೀಯ ಅಧೀಕ್ಷಕರ ವಿಭಾಗ ಸಂಯುಕ್ತವಾಗಿ ಡಾ.ಎಚ್.ಎಂ.ಗಂಗಾ‘ರಯ್ಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತಾ ರಾಷ್ಟ್ರೀಯ ದಾದಿಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿ, ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು, ದಾದಿಯರ ಕೆಲಸದ ಬಗ್ಗೆ ಹೆಮ್ಮೆ ಇರಬೇಕೆ ಹೊರತು ಕೆಲಸದ ಬಗ್ಗೆ ಅಸಡ್ಡೆ ತೋರಬಾರದು, ಅದು ವೃತ್ತಿಪರತೆಯಿಂದ ಕೂಡಿರಬೇಕು ಎಂದು ಕನ್ನಿಕಾ ಪರಮೇಶ್ವರ ನುಡಿದರು.
ಪ್ರೀತಿಯ ವರ್ತನೆ ಇರಬೇಕು, ಶೇ.50 ರಷ್ಟು ರೋಗಿಗಳನ್ನು ಕಾಳಜಿ ವಹಿಸಿ ನಗುತ್ತಾ ಅವರೊಂದಿಗೆ ತಕ್ಷಣ ಪ್ರತಿಕ್ರಿಯಿಸಿದ ರೋಗಿಗಳಿಗೆ ಸಂತೋಷವಾಗುತ್ತದೆ, ದಾದಿಯರು ಜವಾಬ್ದಾರಿಯುತವಾಗಿ ಮತ್ತು ಸಮಯಪಾಲನೆಯಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಶ್ರೀಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಸುನಿಲ್ ಚಂದ್ರ ಮಹಾಪಾತ್ರ ಮಾತನಾಡಿ, ವೈದ್ಯರು ಮಾತ್ರವೇ ರೋಗಿಗಳೊಡನೆ ಬೆರೆಯಬಾರದು, ದಾದಿಯರು ಸಹ ರೋಗಿಗಳೊಡನೆ ಬೆರೆಯಬೇಕು, ಉತ್ತಮ ಒಡನಾಟ ಇಟ್ಟುಕೊಳ್ಳಬೇಕು, ರೋಗಿಗಳು ಗುಣಮುಖರಾಗಲು ದಾದಿಯರ ಆರೈಕೆ ಮತ್ತು ಕಾಳಜಿ ಬಹಳ ಮುಖ್ಯ ಎಂದರು.
ವೈದ್ಯಕೀಯ ಅಧೀಕ್ಷಕ ಡಾ.ವೆಂಕಟೇಶ್ ಮಾತನಾಡಿ, ದಾದಿಯರು ಸ್ವಲ್ಪ ಕಠಿಣವಾಗಿ ಕೆಲಸ ಮಾಡುತ್ತಾರೆ, ಉತ್ತಮ ರೀತಿಯಲ್ಲಿ ರೋಗಿಗಳ ಕಾಳಜಿ ವಹಿಸುತ್ತಾರೆ, ರೋಗಿಗಳ ಬಳಿ ಹೋಗಿ ರೋಗಿಗಳಿಗೆ ಶುಭೋದಯ ಹೇಳಿ ಅವರನ್ನು ಮಾತನಾಡಿಸಬೇಕು ಉತ್ತಮ ಒಡನಾಟ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಡಾ.ಜಿ.ಎನ್.ಮಂಜುನಾಥ್, ಶಾಲಿನಿ, ಥೆರಸಾ, ಸೂಪಡೆಂಟ್ಗಳಾದ ಡಾ.ಆರ್.ಎಂ.ಸ್ವಾಮಿ ಹಾಜರಿದ್ದರು.
ಕೋವಿಡ್ ಸಂದರ್ಭದಲ್ಲಿ ಕ್ರಿಯಾತ್ಮಕವಾಗಿ ಕೆಲಸ ಮಾಡಿದ ಶುಶ್ರೂಷಕಿಯರನ್ನು ಇದೇ ವೇಳೆ ಗೌರವಿಸಲಾಯಿತು. ವೈದ್ಯಕೀಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು.

Get real time updates directly on you device, subscribe now.

Comments are closed.

error: Content is protected !!