ಮಂತ್ರಿ ಪದವಿ ನೀಡೋದು ನಾಯಕರಿಗೆ ಬಿಟ್ಟದ್ದು

ತುಮಕೂರಿನಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೇಳಿಕೆ

198

Get real time updates directly on you device, subscribe now.

ತುಮಕೂರು: ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಬಿಟ್ಟದ್ದು, ರಾಜ್ಯ ನಾಯಕರ ಅಪೇಕ್ಷೆ ಏನಿದೆ, ಸಮಯ ಸಂದರ್ಭ ನೋಡ್ಕೊಂಡು ನಿರ್ಧಾರ ಮಾಡ್ತಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.

ತುಮಕೂರು ನಗರಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿಜಯೇಂದ್ರ ಮಾಧ್ಯಮದವರೊಂದಿಗೆ ಮಾತನಾಡಿ, ಪಕ್ಷ ಯಾವುದೇ ಜವಾಬ್ದಾರಿ ನೀಡಿದ್ರು ನಿಭಾಯಿಸ್ತೀನಿ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ಸ್ಪರ್ಧೆ ಮಾಡುವಿರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಎಲ್ಲದಕ್ಕೂ ಕಾಲವೇ ಉತ್ತರ ನೀಡುತ್ತದೆ, ಶಿರಾ ಮತ್ತು ಕೆ.ಆರ್.ಪೇಟೆ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ, ಕಾರ್ಯಕರ್ತರ ಜೊತೆ ಕೆಲಸ ಮಾಡಿದ್ದಕ್ಕೆ ಸಂತೋಷ ಇದೆ, ಶಿವಕುಮಾರ ಶ್ರೀಗಳ ಹುಟ್ಟುಹಬ್ಬದ ನೆಪದಲ್ಲಿ ರಾಜಕೀಯ ಮಾಡುವ ಪ್ರಮೇಯ ಉದ್ಭವ ಆಗಿಲ್ಲ ಎಂದರು.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮದ ಬಗ್ಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ಮೂರ್ಖರಿದ್ದಾರೆ, 50 ರಿಂದ 60 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವ ಮಾನಸಿಕತೆಯಲ್ಲಿ ಇಲ್ಲ, ಹೀಗಾಗಿ ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡ್ತಾರೆ, ಚುನಾವಣೆ ಯಾವಾಗ ಬರುತ್ತೆ, ಮತ್ತೆ ಯಾವಾಗ ಅಧಿಕಾರಕ್ಕೆ ಬರ್ತೀವೋ ಅಂತ ಆತುರದಲ್ಲಿ ಹಗಲು ಗನಸು ಕಾಣ್ತಿದ್ದಾರೆ, ಅವರ ಕನಸು ನನಸಾಗಲ್ಲ, ಬಿಜೆಪಿ ಮತ್ತೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೆ ಎಂದರು.
ಕಾಂಗ್ರೆಸ್ ಮಹಾನ್ ನಾಯಕರು ಅಂದು ಕೊಂಡವರು ಯಾವಾಗ ಮುಖ್ಯಮಂತ್ರಿ ಗಾದಿ ಮೇಲೆ ಕೂರ್ತೀವಿ ಅಂತಾ ಕನಸು ಕಾಣ್ತಿದ್ದಾರೆ, ಈ ಮಹಾನ್ ನಾಯಕರು ಕೇವಲ ಬಿಜೆಪಿ ಪಕ್ಷದವರ ವಿರುದ್ಧ ಮಾತ್ರವಲ್ಲ, ತಮ್ಮ ಪಕ್ಷದ ಶಾಸಕರು, ಮುಖಂಡರ ವಿರುದ್ಧವೂ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ, ಕಾಂಗ್ರೆಸ್ ಪಕ್ಷದ ಒಳಜಗಳ ಮತ್ತು ಪಕ್ಷದ ನಡುವೆ ಆವಿಶ್ವಾಸ ಬರುವ ದಿನಗಳಲ್ಲಿ ಬಿಜೆಪಿಗೆ ವರವಾಗುತ್ತೆ ಎಂದು ಡಿಕೆಶಿಗೆ ಹೆಸರೇಳದೆ ವಿಜಯೇಂದ್ರ ಟಾಂಗ್ ಕೊಟ್ಟರು.
ಈ ಕಾಂಗ್ರೆಸ್ ಮಹಾ ನಾಯಕರು ಯಾವುದೇ ರೀತಿಯ ರಿವೇಂಜ್ ತೀರಿಸ್ಕೊಂಡ್ರು ಕೂಡ ರಾಜ್ಯದ ಪ್ರಜ್ಞಾವಂತ ಜನರು ಇದೆಲ್ಲದನ್ನ ವೀಕ್ಷಣೆ ಮಾಡ್ತಾ ಇರ್ತಾರೆ, ಬಿಜೆಪಿಗೆ ಇದು ವರವಾಗುತ್ತೆ ಎಂದು ತಿಳಿಸಿದರು.
ಈ ವೇಳೆ ಶಾಸಕ ಜ್ಯೋತಿಗಣೇಶ್, ಮುಖಂಡ ಸದಾಶಿವಯ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!