ದಲಿತ ಯುವಕರ ಹತ್ಯೆ ಕೇಸ್ ಮುಚ್ಚುವ ಹುನ್ನಾರವಾಗ್ತಿದೆ

271

Get real time updates directly on you device, subscribe now.

ತುಮಕೂರು: ದಲಿತ ಯುವಕರ ಹತ್ಯೆ ಕೃತ್ಯ ಅಮಾನವೀಯ, ಇಂಥ ಘೋರ ಕೃತ್ಯ ನಡೆದರೂ ಕೊಲೆಯಾದ ಕುಟುಂಬದವನ್ನು ಯಾರು ಭೇಟಿ ಮಾಡುತ್ತಿಲ್ಲ, ಜಿಲ್ಲೆಯಲ್ಲಿ ಮೂವರು ಸಚಿವರಿದ್ದರೂ ಸಾಂತ್ವನ ಹೇಳಿಲ್ಲ, ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ ನಡೆದಿದೆ ಎಂದು ಕುಣಿಗಲ್ ಶಾಸಕ ಡಾ.ರಂಗನಾಥ್ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದವರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ, ಇಬ್ಬರು ದಲಿತ ಯುವಕರ ಹತ್ಯೆ ನಡೆದಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ, ಘಟನೆಗೆ ಸಂಬಂಧಿಸಿದಂತೆ ಸಾಕ್ಷಿಗಳಿದ್ದರು ಪ್ರಕರಣ ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ, ಆ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕುವ ಹುನ್ನಾರವೂ ನಡೆದಿದೆ ಎಂದು ಕಿಡಿಕಾರಿದರು.
ಸರ್ಕಾರ ನಡೆಸುತ್ತಿರುವ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ, ಸರ್ಕಾರ ಶಾಂತಿ ಕದಡುವ, ದ್ವೇಷ, ಹಗೆ ಸಾಧಿಸುವ ಕಾರ್ಯಗಳನ್ನು ಹತ್ತಿಕ್ಕಬೇಕು, ಈ ಕೃತ್ಯದಲ್ಲಿ ರಾಜಕಾರಣಿಗಳ ಸಹಚರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಕಾಲೋನಿಯಲ್ಲಿರುವ ಕುಟುಂಬಗಳಿಗೆ ಬೆದರಿಕೆ ಹಾಕಲಾಗುತ್ತಿದೆ, ಭಯದ ವಾತಾವರಣ ನಿರ್ಮಿಸಿದ್ದಾರೆ, ನಮ್ಮ ಜೊತೆ ಮಾತನಾಡಲು ಹೆದರುತ್ತಿದ್ದಾರೆ, ಇಲ್ಲಿನ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಾರೆ ಎಂಬ ನಂಬಿಕೆ ಇಲ್ಲ, ಉನ್ನತ ಮಟ್ಟದ ತನಿಖೆ ಆಗಬೇಕು ಆಗಬೇಕು, ಘೋರವಾದ ಕೃತ್ಯ ನಡೆದಿದ್ದು, ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು, ಸರಿಯಾಗಿ ತನಿಖೆ ಮಾಡಬೇಕು, ಇಲ್ಲವಾದಲ್ಲಿ ನಮ್ಮ ನಾಯಕರ ಜೊತೆ ಚರ್ಚಿಸಿ ಮುಂದೆ ಹೋರಾಟ ನಡೆಸಲಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ ಮಾತನಾಡಿ, ಕೊಲೆಯಾದ ದಲಿತ ಯುವಕರ ಕುಟುಂಬಕ್ಕೆ ಇಪ್ಪತ್ತೈದು ಲಕ್ಷ ರೂಪಾಯಿ ಪರಿಹಾರ ನೀಡಬೇಕು, ಈ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ, ಸರ್ಕಾರ ಸರಿಯಾಗಿ ತನಿಖೆ ನಡೆಸಿ ಬಡ ಕುಂಟುಂಬಕ್ಕೆ ನ್ಯಾಯ ಒದಗಿಸಬೇಕು, ಕೊಲೆಗೆ ಮೂಲ ಕಾರಣ ಏನು ಎಂಬುದು ಪತ್ತೆಹಚ್ಚಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಯಲಚವಾಡಿ ನಾಗರಾಜ್, ರಾನ ಬೇಗಂ, ಸುಜಾತ, ಪುಟ್ಟರಾಜು ಸುದ್ದಿಗೋಷ್ಠಿಯಲ್ಲಿದ್ದರು.

Get real time updates directly on you device, subscribe now.

Comments are closed.

error: Content is protected !!