ತುಮಕೂರಿನಲ್ಲಿ ಅದ್ದೂರಿ ಶಂಕರಾಚಾರ್ಯರ ಉತ್ಸವ

156

Get real time updates directly on you device, subscribe now.

ತುಮಕೂರು: ನಗರದ ಶಂಕರಮಠದಲ್ಲಿ ಶ್ರೀಶಂಕರ ಸೇವಾ ಸಮಿತಿ ವತಿಯಿಂದ ಕಳೆದ 7 ದಿನಗಳಿಂದ ಹಮ್ಮಿಕೊಂಡಿರುವ ಜಗದ್ಗುರು ಶ್ರೀಶಂಕರ ಭಗವತ್ಪಾದರ ಜಯಂತಿ ಸಪ್ತಾಹದ ಅಂಗವಾಗಿ ಶುಕ್ರವಾರ ಶ್ರೀ ಶಂಕರಾಚಾರ್ಯರ ಉತ್ಸವ ಅದ್ದೂರಿಯಿಂದ ನಡೆಯಿತು.
ವಿವಿಧ ಬಗೆಯ ಪುಷ್ಪಾಲಂಕೃತವಾದ ರಥದಲ್ಲಿ ಶಂಕರಾಚಾರ್ಯ ಭಗವತ್ಪಾದರ ಭಾವಚಿತ್ರ ಕೂರಿಸಿ ವೇದ ಘೋಷ ಮತ್ತು ನಾದ ಸ್ವರಗಳೊಂದಿಗೆ ಮೆರವಣಿಗೆ ವೈಭವದಿಂದ ಜರುಗಿತು.

ಬಿ.ಹೆಚ್.ರಸ್ತೆಯಲ್ಲಿರುವ ಶಂಕರಮಠದ ಆವರಣದಲ್ಲಿ ಹೊರಟ ಮೆರವಣಿಗೆಯು ಬಿ.ಹೆಚ್.ರಸ್ತೆ, ಟೌನ್ಹಾಲ್ ವೃತ್ತದ ಮೂಲಕ ಸಾಗಿ ಮತ್ತೆ ಬಿ.ಹೆಚ್.ರಸ್ತೆ ಮುಖೇನ ಎಂ.ಜಿ.ರಸ್ತೆ 2ನೇ ಕ್ರಾಸ್ ಮುಖಾಂತರ ಶ್ರೀರಾಮ ಮಂದಿರ ರಸ್ತೆ, ಬಿ.ಹೆಚ್.ರಸ್ತೆಯ ಮೂಲಕ ಶಂಕರ ಮಠ ಸೇರಿತು.
ಮೆರವಣಿಗೆ ಸಂದರ್ಭಲ್ಲಿ ಮಾತನಾಡಿದ ಶಂಕರ ಸೇವಾ ಸಮಿತಿ ಅಧ್ಯಕ್ಷ ನಂಜುಂಡೇಶ್ವರ್, 7 ದಿನಗಳ ಕಾಲ ಶಂಕರ ಭಗವತ್ಪಾದರ ಜಯಂತಿ ಸಪ್ತಾಹ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಗಿದೆ. ಪ್ರತಿದಿನ ಸಂಜೆ ವಿಧ್ವಾಸರಿಂದ ಪ್ರವಚನ ಕಾರ್ಯಕ್ರಮ, ರುದ್ರಾಭಿಷೇಕ, ಶಂಕರಾಚಾರ್ಯರ ಪಾರಾಯಣ ನಡೆಸಲಾಯಿತು. ಕೊನೆ ದಿನವಾದ ಶುಕ್ರವಾರ ಮಂಗಳಾ ಕಾರ್ಯ ನಡೆಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಬ್ರಾಹ್ಮಣ ಸಂಘ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಈ ಬಾರಿ ಶಂಕರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿ ಜಿಲ್ಲಾಡಳಿತದ ಸಹಕಾರದೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು. ಇದಕ್ಕೆ ಶಂಕರ ಮಠ, ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಎಲ್ಲಾ ವಿಪ್ರ ಸಂಘಟನೆಗಳ ಸಹಕಾರವೂ ದೊರೆಯಿತು, ಮುಂದಿನ ದಿನಗಳಲ್ಲಿ ಎಲ್ಲಾ ಸಮುದಾಯದವರನ್ನು ಸೇರಿಸಿಕೊಂಡು ಅತ್ಯಂತ ಯಶಸ್ವಿಯಾಗಿ ಶಂಕರ ಜಯಂತಿ ಆಚರಿಸಲಾಗುವುದು ಎಂದರು.
ಶಂಕರರ ಧ್ಯೇಯೋದ್ದೇಶ ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಹಾಗಾಗಿ ಎಲ್ಲಾ ಸಮುದಾಯಗಳೊಂದಿಗೆ ಜಯಂತಿ ಆಚರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಶಂಕರಾಚಾರ್ಯರ ಉತ್ಸವದಲ್ಲಿ ಎಂ.ಕೆ.ನಾಗರಾಜರಾವ್, ಜಿ.ಎಸ್.ಮಂಜುನಾಥ್, ಡಾ.ಹರೀಶ್, ಸಿ.ಎನ್.ರಮೇಶ್, ಅನಂತರಾಮು ಸೇರಿದಂತೆ ಶಂಕರ ಸೇವಾ ಸಮಿತಿ ಟ್ರಸ್ಟ್, ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ವಿಪ್ರ ಸಂಘಟನೆಗಳ ನೂರಾರು ಮಂದಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!