ಕುಣಿಗಲ್: ತಾಲೂಕಿನ ಹುಲಿಯೂರು ದುರ್ಗದ ವಿಲಚೇತನ ವ್ಯಕ್ತಿಯೊಬ್ಬರು ನವದೆಹಲಿಯಲ್ಲಿ ನಡೆದ ಪಾರ್ಶ್ವವಾಯು ಪೀಡಿತರಿಗೆ ಆಯೋಜಿಸುವ ಕ್ರೀಡಾಕೂಟದ ರಾಷ್ಟ್ರ ಮಟ್ಟದಲ್ಲಿ ಭರ್ಜಿ ಎಸೆತದಲ್ಲಿ ಚಿನ್ನದ ಪದಕ, ಗುಂಡು ಎಸೆತ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಹುಲಿಯೂರುದುರ್ಗದ ವಾಸಿ ಮಹಾಲಿಂಗಯ್ಯ, ಶಾಂತಮ್ಮನವರ ಪುತ್ರ ಈಶ್ವರ್ ರಾಷ್ಟ್ರಮಟ್ಟದ ಕ್ರಿಡಾಕೂಟದಲ್ಲಿ ಸಾಧನೆ ಮಾಡಿದ ಪ್ರತಿಯಾಗಿದ್ದಾರೆ. ಪಿಯುಸಿ ವ್ಯಾಸಂಗ ಮಾಡಿರುವ ಈಶ್ವರ್ ಸ್ಥಳೀಯವಾಗಿ ಅರಕನಳ್ಳಿ ಎಂಬ ಹೆಸರಿನಿಂದ ಖ್ಯಾತಿ, ಕಳೆದ ಏಳು ವರ್ಷದ ಹಿಂದೆ ಸ್ನೇಹಿರೊಬ್ಬರು ನೀಡಿದ ಸಲಹೆಯಿಂದಾಗಿ ಕ್ರೀಡೆಯ ಬಗ್ಗೆ ಒಲವು ತೋರಿಸಿ ಮೈಸೂರಿನಲ್ಲಿನ ರಾಜು, ಶ್ರೀಧರ ಎಂಬುವರ ಮಾರ್ಗದರ್ಶನದಲ್ಲಿ ಸತತ ಅಭ್ಯಾಸ ಮಾಡಿದ್ದಾರೆ.
ಮೇ 5ರಿಂದ 7ರ ವರೆಗೂ ನವದೆಹಲಿಯಲ್ಲಿ ಸಿ.ಪಿ.ಎಸ್.ಎಪೈ ನಡೆಸಿದ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಯಿಂದ ಏಕೈಕ ವ್ಯಕ್ತಿ ಆಯ್ಕೆಯಾಗಿ ಪ್ರತಿನಿಧಿಸಿ ಜಾವಲಿನ್ ಥ್ರೋ ನಲ್ಲಿ ಚಿನ್ನದ ಪದಕ, ಶಾಟ್ಪುಟ್ ಥ್ರೋ ಸ್ಫರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಪದಕ ಗಳಿಸಿರುವ ಅವರ ಸಾಧನೆ ಗುರುತಿಸಿ ಶಾಸಕ ಡಾ.ರಂಗನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್ ಗೌಡ ಸನ್ಮಾನಿಸಿ, ಅಭಿನಂದಿಸಿದರು.
ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪದಕ ಗಳಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಈಶ್ವರ್ ಅವರು, ವಿಕಲಚೇತನರ ಕ್ರೀಡೆಗೆ ಸರ್ಕಾರ ಮತ್ತಷ್ಟು ಹೆಚ್ಚಿನ ಪ್ರೋತ್ಸಾಹ ನೀಡಬೇಕು, ಆಗ ದೇಶದಲ್ಲಿ ಮತ್ತಷ್ಟು ಪ್ರತಿಭಾವಂತ ಕ್ರೀಡಾಳುಗಳ ಸಾಮಾರ್ಥ್ಯ ಹೊರಬರಲು ಸಹಕಾರಿಯಾಗುತ್ತದೆ, ಸಹೃದಯಿಗಳು, ಹೃದಯವಂತ ವ್ಯಕ್ತಿಗಳ ಸಹಕಾರದಿಂದ ಕ್ರೀಡೆಯಲ್ಲಿ ಪಾಲ್ಗೊಂಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಸಾಧನೆ ಮಾಡಲು ಶ್ರಮಿಸುತ್ತೇನೆ ಎಂದಿದ್ದಾರೆ.
ಚಿನ್ನದ ಪದಕ ಪಡೆದ ಈಶ್ವರ್ ಸಾಧನೆಗೆ ಮೆಚ್ಚುಗೆ
Get real time updates directly on you device, subscribe now.
Next Post
Comments are closed.