ಮಧುಗಿರಿ: ಸಂಪಾದನೆಯ ಸ್ವಲ್ಪ ಭಾಗವನ್ನು ಸಮಾಜ ಸೇವೆಗೆ ಬಳಸಿದರೆ ನಮ್ಮ ಜೀವನ ಸಾರ್ಥಕ ಗೊಳಿಸಬಹುದು ಎಂದು ತಹಸೀಲ್ದಾರ್ ಟಿ.ಜಿ.ಸುರೇಶ್ ಆಚಾರ್ ತಿಳಿಸಿದರು.
ಪಟ್ಟಣದ ಶ್ರೀಕನ್ಯಕಾ ಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಶ್ರೀವರದಾಯಿನಿ ಸೇವಾ ಟ್ರಸ್ಟ್, ನೇತ್ರ ಸಂಗ್ರಹಣಾ ಕೇಂದ್ರ ಹಾಗೂ ಭಜನಾ ಮಂಡಳಿಯಿಂದ ಹಮ್ಮಿಕೊಂಡಿದ್ದ ಹೊಲಿಗೆ ಯಂತ್ರ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಎಲ್ಲರೂ ಸಮಾನರಾಗಿಲ್ಲ, ಬಡವರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದು, ದಾನಿಗಳು ನೆರವು ನೀಡಬೇಕೆಂದು ತಿಳಿಸಿದರು.
ಬಡ ವಿದ್ಯಾರ್ಥಿಗಳು ಆರ್ಥಿಕ ಮುಗ್ಗಟ್ಟಿನಿಂದ ವಿದ್ಯಾಭ್ಯಾಸವನ್ನು ಮೊಟಕು ಗೊಳಿಸುತ್ತಿದ್ದಾರೆ, ಅವರಿಗೆ ಸಹಾಯಧನ ನೀಡುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ, ಟ್ರಸ್ಟ್ ನಿರಂತರ ಸಮಾಜ ಸೇವಾ ಕಾರ್ಯಗಳಲ್ಲಿ ನಿರತವಾಗಿರಲಿ ಎಂದರು.
ಟ್ರಸ್ಟ್ ನ ಅಧ್ಯಕ್ಷೆ ಗಾಯತ್ರಿ ನಾರಾಯಣ್ ಮಾತನಾಡಿ, ಇದುವರೆಗೆ 154 ಜನರ ನೇತ್ರಗಳನ್ನು ಸಂಗ್ರಹಿಸಿ ಬೆಂಗಳೂರಿನ ಡಾ.ರಾಜಕುಮಾರ್ ನೇತ್ರದಾನ ಕೇಂದ್ರಕ್ಕೆ ಕಳುಹಿಸಲಾಗಿದೆ, ನೇತ್ರಗಳನ್ನು ಬೆಂಗಳೂರಿಗೆ ಕಳುಹಿಸಲು ಕಾರು ಬಾಡಿಗೆ ದುಬಾರಿಯಾಗಿದ್ದು, ಸರ್ಕಾರ ವಾಹನ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿದರು.
ಪತ್ರಕರ್ತ ಎಂ.ಎಸ್ ರಘುನಾಥ್, ಸಮಾಜ ಸೇವಕರಾದ ಸುದರ್ಶನ್ ಬಾಬು, ಕಿಶೋರ್ ಹಾಗೂ ಪಿಹೆಚ್ಡಿ ಪದವಿ ಪಡೆದಿರುವ ಭಾರ್ಗವ ಶರ್ಮ ಅವರನ್ನು ಸನ್ಮಾನಿಸಲಾಯಿತು. ಬಡ ವಿದ್ಯಾರ್ಥಿಗಳಿಗೆ ಸಹಾಯಧನ, ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ಎನ್.ಶ್ರೀನಿವಾಸಮೂರ್ತಿ, ಗೌರವಾಧ್ಯಕ್ಷ ಡಿ.ಜಿ.ಶಂಕರನಾರಾಯಣ ಶೆಟ್ಟಿ, ಪದಾಧಿಕಾರಿಗಳಾದ ಪ್ರತಿಮಾ, ಲತಾ, ಲಕ್ಷ್ಮಿ, ಪದ್ಮಾವತಿ, ನಿರ್ಮಲ ಕುಮಾರಿ, ಜಲಜ, ಸುಶಿಲಾದೇವಿ, ವೀಣಾ ಹಾಗೂ ಮುಂತಾದವರು ಇದ್ದರು.
ಸಂಪಾದನೆಯ ಸ್ವಲ್ಪ ಭಾಗ ಸಮಾಜ ಸೇವೆಗೆ ಬಳಸಿ
Get real time updates directly on you device, subscribe now.
Prev Post
Comments are closed.