ತುಮಕೂರು: ಗೃಹ ರಕ್ಷಕ ದಳ ಶಿಸ್ತಿಗೆ ಹೆಸರಾಗಿದ್ದು, ಪ್ರತಿಯೊಬ್ಬ ಗೃಹ ರಕ್ಷಕರು ಮೂಲ ತರಬೇತಿ ಪಡೆದು ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಎಎಸ್ಪಿ ಉದೇಶ್ ಕರೆ ನೀಡಿದರು.
ನಗರದ ಗೃಹ ರಕ್ಷದ ದಳದ ಕಚೇರಿಯಲ್ಲಿ ನಡೆದ ಗೃಹ ರಕ್ಷಕರ ವಾರ್ಷಿಕ ಮೂಲ ತರಬೇತಿ ಶಿಬಿರದಲ್ಲಿ ಮಾತನಾಡಿ, ಒಂದೊಂದು ಇಲಾಖೆಗೂ ಒಂದೊಂದು ರೀತಿಯ ಶಿಸ್ತು ಇರುತ್ತದೆ, ಶಿಸ್ತನ್ನು ಕಲಿಯಬೇಕಾದರೆ ಮೂಲ ತರಬೇತಿ ಅವಶ್ಯ, ಹಾಗಾಗಿ ಗೃಹ ರಕ್ಷಕರಿದೆ ವಾರ್ಷಿಕ ಮೂಲ ತರಬೇತಿ ನೀಡಲಾಗುತ್ತಿದೆ, ಪ್ರತಿಯೊಬ್ಬ ಗೃಹ ರಕ್ಷಕರು ಮೂಲ ತರಬೇತಿ ಪಡೆದು ಮತ್ತಷ್ಟು ಶಿಸ್ತು ಬದ್ಧರಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ತರಬೇತಿ ಪಡೆಯದಿದ್ದರೆ ಬೇರೆ ಇಲಾಖೆಗಳಿಗೆ ಗೃಹ ರಕ್ಷಕರನ್ನು ನಿಯೋಜನೆ ಮಾಡಲು ಸಾಧ್ಯವಿಲ್ಲ, ಹಾಗಾಗಿ ಮೂಲ ತರಬೇತಿ ಅತ್ಯವಶ್ಯವಾಗಿದ್ದು, 10 ದಿನಗಳ ಈ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಮನೆ ಕಟ್ಟಬೇಕಾದರೆ ಯಾವ ರೀತಿ ಬುನಾದಿ ಹಾಕುತ್ತೇವೆಯೋ ಅದೇ ರೀತಿ ಇಲಾಖೆಗೆ ಸಂಬಂಧಪಟ್ಟಂತೆ ಶಿಸ್ತು ಕಲಿಯಬೇಕಾದರೆ ಮೂಲ ತರಬೇತಿ ಅತ್ಯಗತ್ಯ ಎಂದ ಅವರು ತರಬೇತಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಯಾವ ರೀತಿ ಕಾನೂನು ಸುವ್ಯವಸ್ಥೆ ಪಾಲನೆ, ಟ್ರಾಫಿಕ್ ವಿಭಾಗದಲ್ಲಿ ಯಾವ ರೀತಿ ಕರ್ತ್ಯವ್ಯ ನಿರ್ವಹಿಸಬೇಕು ಎಂಬುದರ ಬಗ್ಗೆಯೂ ತರಬೇತಿ ನೀಡಲಾಗುತ್ತದೆ ಎಂದರು.
ಉತ್ತಮ ರೀತಿಯಲ್ಲಿ ಶಿಸ್ತನ್ನು ಕಲಿತು ಅಳವಡಿಸಿಕೊಳ್ಳಬೇಕು, ಈ ಮೂಲಕ ಬೇರೆ ಇಲಾಖೆಗಳು ಹೋಂ ಗಾರ್ಡ್ನವರನ್ನು ಕರೆಯುವಂತೆ ನಾವು ನಡೆದುಕೊಳ್ಳಬೇಕು, ಹಾಗಾಗಿ ಮೂಲ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ತರಬೇತಿ ಅವಧಿಯಲ್ಲಿ ಯೋಗ ಸಹ ಹೇಳಿಕೊಡಲಾಗುತ್ತದೆ, ಆರೋಗ್ಯ ದೃಷ್ಟಿಯಿಂದ ಯೋಗ ತರಬೇತಿ ಅತ್ಯಾವಶ್ಯ, ಯೋಗದಲ್ಲಿ ಪರಿಪಕ್ವವಾದರೆ ಆರೋಗ್ಯವಂತರಾಗಿರಬಹುದು ಎಂದರು.
ಗೃಹ ರಕ್ಷಕ ದಳ ಎಂದರೆ ಶಿಸ್ತಿಗೆ ಹೆಸರಾಗಿದೆ, ಗೌರವ ಧನಕ್ಕಾಗಿಯೇ ಕಾರ್ಯ ನಿರ್ವಹಿಸುತ್ತಿರುವ ಗೃಹ ರಕ್ಷಕರು ಒಳ್ಳೆಯ ನಡತೆ ತೋರುತ್ತಿರುವುದು ಇತರ ಇಲಾಖೆಗಳಿಗೂ ಮಾದರಿಯಾಗಿದೆ ಎಂದು ಹೇಳಿದರು.
ಸಮಾರಂಭ ಉದ್ಘಾಟಿಸಿದ ಅಗ್ನಿಶಾಮಕ ದಳದ ಅಧಿಕಾರಿ ಮಹಾಲಿಂಗಪ್ಪ ಎಸ್.ಲಂಗೋಟಿ ಮಾತನಾಡಿ, ಗೃಹ ರಕ್ಷಕರಲ್ಲಿ ಶಿಸ್ತು ಅತಿ ಮುಖ್ಯ, ಶಿಸ್ತು ಕಲಿಯಬೇಕಾದರೆ ತರಬೇತಿ ಅತಿ ಮುಖ್ಯ, ಗೃಹ ರಕ್ಷಕರು ಹಾಕುವ ಬಟ್ಟೆ, ಶೂ, ಬೆಲ್ಟ್, ಸೆಲ್ಯೂಟ್ ನಲ್ಲೂ ಶಿಸ್ತು ಇರಬೇಕು, ಹಾಗಾಗಿ ಮೂಲ ತರಬೇತಿ ಪಡೆಯುವುದು ಅಗತ್ಯವಾಗಿದೆ ಎಂದರು.
ಬಂದೋಬಸ್ತ್ ಕಾರ್ಯದಲ್ಲಿ ಹೇಗಿರಬೇಕು, ಸೆಲ್ಯೂಟ್ ಹೇಗಿರಬೇಕು ಎಂಬ ಬಗ್ಗೆಯೂ ತರಬೇತಿ ಮುಖ್ಯವಾಗಿದೆ, ಆದ್ದರಿಂದ ಗೃಹ ರಕ್ಷಕರು ಮೂಲ ತರಬೇತಿ ಪಡೆಯುವುದು ಸೂಕ್ತ ಎಂದರು.
ಈ ಸಂದರ್ಭದಲ್ಲಿ ಗೃಹ ರಕ್ಷದ ದಳದ ಜಿಲ್ಲಾ ಸಮಾದೇಷ್ಟ ಪಾತಣ್ಣ, ಶಿವಪ್ರಸಾದ್, ಹನುಮಂತರಾಯಪ್ಪ, ಪ್ರಕಾಶ್ ಮತ್ತಿತರರು ಇದ್ದರು.
Get real time updates directly on you device, subscribe now.
Prev Post
Comments are closed.