ಹೆಸರಘಟ್ಟ: ಹಸಿದವನಿಗೆ ಅನ್ನ ಕೊಟ್ಟರೆ ದೇವರಿಗೆ ಸಾಲ ಕೊಟ್ಟಂತೆ ವಾಸ್ತವ ದಿನದಲ್ಲಿ ಮಾತೃದೇವೋಭವ ಪಿತೃದೇವೋಭ ಎಂಬುವುದನ್ನು ಮರೆತು ಹೆತ್ತವರನ್ನೇ ಮನೆಯಿಂದ ಹೊರಗಾಕುತ್ತಿರುವ ಜನರ ಮಧ್ಯೆ ಸಪ್ತಗಿರಿ ಕಾಲೇಜಿನ ವಿದ್ಯಾರ್ಥಿಗಳು ವೃದ್ರಾರ ಆಶ್ರಯಕ್ಕೆ ನೆರಗಾಗುತ್ತಿರುವುದು ಸಂತಸದ ವಿಷಯ ಎಂದು ಸಮಾಜ ಸೇವಕ ಪ್ರಶಾಂತ್ ಚಕ್ರವರ್ತಿ ತಿಳಿಸಿದರು.
ಚಿಕ್ಕಬಾಣಾವರ ಸಪ್ತಗಿರಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇಂದು ಬೆಳಗ್ಗೆ ಹೆಸರಘಟ್ಟ ಸಮೀಪದಲ್ಲಿರುವ ಪ್ರಶಾಂತ್ ಚಕ್ರವರ್ತಿ ನಿರಾಶ್ರೀತರ ಆಶ್ರಮದ ವೃದ್ರಾರಿಗೆ ಊಟ ಕೊಟ್ಟು ಆಶ್ರಮದ ಆವರಣದಲ್ಲಿ ಹಣ್ಣು ಬಿಡುವ ಸಸಿಗಳನ್ನು ನೆಟ್ಟಿ ಸಂತಸಗೊಂಡರು.
ಈ ಸಂದರ್ಭವನ್ನು ಕುರಿತು ಮಾತನಾಡಿದ ವೃದ್ರೇಯೊಬ್ಬರು ಯಾವ ಜನ್ಮದ ಫಲವೋ ತನ್ನೊಟ್ಟಿಯಲ್ಲಿ ಹುಟ್ಟಿದ ಮಕ್ಕಳೇ ಮನೆಯಿಂದ ಹೊರಗಾಕಿರುವಾಗ ನಿಮ್ಮಿಂದ ಸೇವೆ ಪಡೆದು ಕೊಳ್ಳುತ್ತಿರುವ ನಾವೇ ಪುಣ್ಯವಂತರು ಎಂದರು.
ವಿದ್ಯಾರ್ಥಿ ಜೀವನದಲ್ಲಿ ಬರಿ ಓದುವುದೊಂದೇ ಅಲ್ಲ ತಮ್ಮ ಕೈಲಾದಷ್ಟು ಸಮಾಜಕ್ಕೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ನಾನು ಮತ್ತು ನನ್ನ ಸ್ನೇಹಿತರು ಸಮಾಜದಲ್ಲಿ ಇಂತಹ ಒಳ್ಳೆ ಕೆಲಸ ಮಾಡಲು ಸದಾ ಮುಂದಿರುತ್ತೇವೆ ಎಂದು ಸಪ್ತಗಿರಿ ಕಾಲೇಜಿನ ವಿದ್ಯಾರ್ಥಿ ಸಂತೋಷ್ ತಿಳಿಸಿದರು
ಈ ಸಂದರ್ಭದಲ್ಲಿ ಆಶ್ರಮದ ಸೇವಕರಾದ ಮುನಿಕೃಷ್ಣ, ಮಂಜುನಾಥ್, ಅನುಪಮಾ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಯುವ ಜನರ ಚಿತ್ತ ವೃದ್ಧರತ್ತ
Get real time updates directly on you device, subscribe now.
Next Post
Comments are closed.