ಶಾಲೆಗಳು ಆರಂಭ- ಪುಟಾಣಿಗಳ ಆಗಮನ

340

Get real time updates directly on you device, subscribe now.

ತುಮಕೂರು: ಕೊರೊನಾ ಮಹಾಮಾರಿಯ ಆರ್ಭಟದಿಂದ ಕಳೆದ 2 ವರ್ಷಗಳಿಂದ ನಿಗದಿತ ಸಮಯಕ್ಕೆ ಶಾಲೆಗಳು ಆರಂಭವಾಗದೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನೆಡೆಯಾಗಿತ್ತು, ಆದರೆ ಈ ಬಾರಿ ಕೊರೊನಾ ಸೋಂಕು ಗಣನೀಯವಾಗಿ ಇಳಿಮುಖವಾಗಿರುವುದರಿಂದ ರಾಜ್ಯ ಸರ್ಕಾರ ಸೋಮವಾರದಿಂದ ಶಾಲೆಗಳನ್ನು ಪುನರಾರಂಭಿಸಿದ್ದು, ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳಿಗೆ ಚಿಣ್ಣರು ಸಮವಸ್ತ್ರ ಧರಿಸಿ ಹೆಜ್ಜೆ ಹಾಕಿದರು.

ನಗರದ ಮರಳೂರಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ಪಠ್ಯ ಪುಸ್ತಕ ವಿತರಿಸುವ ಶಾಲೆಗೆ ಸ್ವಾಗತಿಸಿದರು.
ಶಾಲಾ ಮಕ್ಕಳು ಸಮವಸ್ತ್ರ ಧರಿಸಿ ಹೆಗಲಿಗೆ ಶಾಲಾ ಬ್ಯಾಗ್ ಹಾಕಿಕೊಂಡು ಶಾಲೆಯ ಕಾಂಪೌಂಡ್ ಒಳಗೆ ಖುಷಿಯಿಂದಲೇ ತೆರಳುತ್ತಿದ್ದ ದೃಶ್ಯ ಜಿಲ್ಲೆಯಾದ್ಯಂತ ಕಂಡು ಬಂದವು.
ಕಳೆದ 2 ವರ್ಷಗಳಿಂದ ನಿಗದಿ ಅವಧಿಗೆ ಶಾಲೆಗಳು ಪ್ರಾರಂಭವಾಗದೆ ಮಕ್ಕಳು ಆನ್ಲೈನ್ ಪಾಠ ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು, ಆದರೆ ಈ ಬಾರಿ ರಾಜ್ಯ ಸರ್ಕಾರ ನಿಗದಿತ ಅವಧಿಗೆ ಶಾಲೆಗಳನ್ನು ಪ್ರಾರಂಭಿಸಿರುವುದರಿಂದ ಶಾಲೆಗಳಲ್ಲಿ ಮಕ್ಕಳ ಕಲರವ ಕಂಡು ಬರುತ್ತಿದೆ. ಮಕ್ಕಳಷ್ಟೇ ಶಿಕ್ಷಕರು ಸಹ ಖುಷಿಯಿಂದಲೇ ಶಾಲೆಗಳಿಗೆ ತೆರಳಿದ್ದು ವಿಶೇಷವಾಗಿತ್ತು.

Get real time updates directly on you device, subscribe now.

Comments are closed.

error: Content is protected !!