ಶಾಲಾರಂಭಕ್ಕೆ ಮಕ್ಕಳ ಸಂಭ್ರಮ- ಹೂ ಕೊಟ್ಟು ಸ್ವಾಗತಿಸಿದ ಶಿಕ್ಷಕರು

258

Get real time updates directly on you device, subscribe now.

ಶಿರಾ: 2022-23ನೇ ಶೈಕ್ಷಣಿಕ ವರ್ಷದ ಆರಂಭ ಇದೇ ಮೇ 16ರ ಸೋಮವಾರದಿಂದ ಮೊದಲ್ಗೊಂಡಿದ್ದು, ಮೊದಲ ದಿನವೇ ಉತ್ಸಾಹಭರಿತರಾಗಿ ತರಗತಿಗೆ ಆಗಮಿಸಿದ ಮಕ್ಕಳನ್ನು ಹೂ ನೀಡುವ ಮೂಲಕ ಶಿಕ್ಷಕರು ಸ್ವಾಗತಿಸಿದ್ದಾರೆ.

ತಾಲ್ಲೂಕಿನ ಬಹುತೇಕ ಸರ್ಕಾರಿ ಶಾಲೆಗಳನ್ನು ತೋರಣ, ಹೂಗಳಿಂದ ಅಲಂಕರಿಸಲಾಗಿತ್ತು, ಸಮವಸ್ತ್ರ ಧರಿಸಿ ಸಂಭ್ರಮದಿಂದ ಶಾಲೆಗೆ ಬಂದ ಮಕ್ಕಳಿಗೆ ಹೂಗಳನ್ನು ನೀಡಿ ಸ್ವಾಗತಿಸಲಾಯಿತು. ಹಲವಾರು ಕಡೆ ಶಿಕ್ಷಕರು ಸಹಿ ಹಂಚಿ ಸಂಭ್ರಮಿಸಿದರು. ಕಳೆದೆರಡು ವರ್ಷಗಳಿಂದ ಕೊರೊನಾ ಭೀತಿಯಲ್ಲಿ ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದ ಪೋಷಕರು ತಮ್ಮ ತಮ್ಮ ಮಕ್ಕಳನ್ನು ಶಾಲೆಗೆ ಬಿಟ್ಟು ಸಂತಸ ವ್ಯಕ್ತಪಡಿಸಿದರು. ಕಳೆದೆರಡು ವರ್ಷಗಳಲ್ಲಿ ಶಾಲೆಯ ಆವರಣದಲ್ಲಿ ಮುಕ್ತವಾಗಿ ಕುಣಿಯುವ ಅವಕಾಶದಿಂದ ವಂಚಿತರಾಗಿದ್ದ ಮಕ್ಕಳು, ಶಾಲಾರಂಭದ ದಿನವೇ ಕುಣಿದು-ಕುಪ್ಪಳಿಸಿ ಸಂಭ್ರಮಿಸಿದ್ದಾರೆ.
ಬರಿ ಸರ್ಕಾರಿ ಶಾಲೆಗಳಷ್ಟೇ ಅಲ್ಲದೇ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲೂ ಹಬ್ಬದ ವಾತಾವರಣ ಕಂಡುಬಂದಿತ್ತು. ಎಲ್ಲ ಶಾಲೆಗಳನ್ನು ಅಲಂಕರಿಸಿ, ಮಕ್ಕಳನ್ನು ಸ್ವಾಗತಿಸಲಾಗಿದೆ.
ಪ್ರಸ್ತುತ ವರ್ಷವನ್ನು ಕಲಿಕಾ ಚೇತರಿಕೆ ವರ್ಷವಾಗಿ ಕರೆಯಲಾಗಿದ್ದು, ಕಳೆದೆರಡು ವರ್ಷಗಳಲ್ಲಿ ಕೊರೋನಾ ಕಾರಣದಿಂದ ಮಕ್ಕಳಿಗೆ ಉಂಟಾಗಿದ್ದ ಕಲಿಕಾ ಕೊರತೆಯನ್ನು ನೀಗಿಸಲು ಹಿಂದಿನ ಎರಡು ವರ್ಷಗಳ ವಿಷಯಗಳನ್ನೂ ಮಕ್ಕಳು ಅಭ್ಯಾಸ ಮಾಡಲಿದ್ದಾರೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

Get real time updates directly on you device, subscribe now.

Comments are closed.

error: Content is protected !!