ಸಾಲದ ಬಾಧೆಗೆ ರೈತ ನೇಣಿಗೆ ಶರಣು

137

Get real time updates directly on you device, subscribe now.

ಶಿರಾ: ಕೊರೋನಾದಿಂದ ಬಳಲುತ್ತಿರುವ ಶಿರಾ ತಾಲ್ಲೂಕಿನಲ್ಲಿ ಸಾಲದ ಬಾಧೆಗೆ ಸಿಲುಕಿದ ರೈತನೊಬ್ಬ ನೇಣಿಗೆ ಕೊರಳೊಡ್ಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ತಾಲ್ಲೂಕಿನ ದೇವರಹಳ್ಳಿಯ ಸುಮಾರು 65 ವರ್ಷದ ರೈತ ಗಂಗಾಧರ ನೇಣಿಗೆ ಶರಣಾದ ದುರ್ದವಿಯಾಗಿದ್ದಾನೆ. ತನ್ನ ಹೊಲದಲ್ಲಿ ಮೆಡಿಕಲ್ ಸೌತೆ ಮತ್ತು ಬೀಜದ ಕೃಷಿ ನಡೆಸುತ್ತಿದ್ದ ರೈತ, ಕೆಲ ವರ್ಷಗಳಿಂದ ಅಡಿಕೆ ಸಸಿ ನಾಟಿ ಮಾಡಿದ್ದು, ಜಮೀನಿನ ಅಭಿವೃದ್ಧಿಗಾಗಿ ತಾವರೆಕೆರೆ ಕೆನರಾ ಬ್ಯಾಂಕ್ ಮತ್ತು ಖಾಸಗಿಯಾಗಿ ಸೇರಿದಂತೆ ಒಟ್ಟಾರೆ 5 ಲಕ್ಷಕ್ಕೂ ಹೆಚ್ಚು ಮೊತ್ತದ ಸಾಲ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕೆಲ ದಿನಗಳಿಂದ ಖಿನ್ನನಾಗಿದ್ದ ರೈತ ಸಾಲ ತೀರಿಸಲು ಒತ್ತಾಯ ಹೆಚ್ಚಾಗುತ್ತಿದೆ ಎಂದು ಕುಟುಂಬದವರಲ್ಲಿ ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ. ಅದೇ ಕೊರಗಿನಲ್ಲಿ ತನ್ನ ಜಮೀನಲ್ಲಿದ್ದ ಬೇವಿನ ಮರವೊಂದರಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ಅಂದಾಜಿಸಲಾಗಿದೆ. ಬುಧವಾರ ರಾತ್ರಿಯಾದರೂ ಮನೆಗೆ ಬಾರದ ರೈತನನ್ನು ಹುಡುಕಿಕೊಂಡು ಬಂದ ಮನೆಯವರಿಗೆ, ರೈತ ನೇಣು ಬಿಗಿದುಕೊಂಡಿರುವುದು ಗಮನಕ್ಕೆ ಬಂದಿದೆ.
ವಿಷಯ ತಿಳಿದ ಸ್ಥಳೀಯ ಶಾಸಕ ಬಿ.ಸತ್ಯನಾರಾಯಣ ಮೃತನ ಅಂತಿಮ ದರ್ಶನ ಪಡೆದು, ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಹಾರದ ಮೊತ್ತ ಕೊಡಿಸುವಂತೆ ನಿರ್ದೇಶನ ನೀಡಿದ್ದಾರೆ. ಘಟನೆ ಕುರಿತು ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

Get real time updates directly on you device, subscribe now.

Comments are closed.

error: Content is protected !!