ಶಿರಾ ನಗರಸಭೆ 21ನೇ ವಾರ್ಡ್ ಗೆ ಚುನಾವಣೆ ಮೇ 20ಕ್ಕೆ:ಡೀಸಿ

141

Get real time updates directly on you device, subscribe now.

ತುಮಕೂರು: ತುಮಕೂರು ಜಿಲ್ಲೆಯ ಶಿರಾ ನಗರಸಭೆಯ 21ನೇ ವಾರ್ಡ್ ಚುನಾವಣೆ ಮೇ 20, 2022ರಂದು ಚುನಾವಣೆ ನಡೆಯಲಿದ್ದು, ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಈ ಕೆಳಕಂಡಂತೆ ಅಗತ್ಯ ಸೂಚನೆಗಳನ್ನು ನೀಡಿ ಆದೇಶಿಸಿರುತ್ತಾರೆ.

ಮತದಾನದ ದಿನಾಂಕದಂದು ಮತದಾನ ಪ್ರಾರಂಭವಾಗುವ ಮುಂಚಿನ 48 ಗಂಟೆಯೊಳಗೆ ಬಹಿರಂಗ ಪ್ರಚಾರವನ್ನು ನಿಲ್ಲಿಸಬೇಕಾಗುತ್ತದೆ. ಮತದಾನ ನಡೆಯುವ ದಿನಾಂಕಗಳಲ್ಲಿ ಆ ಮತದಾನ ಕೇಂದ್ರದೊಳಗೆ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸ್ಥಳದಲ್ಲಿ ಮತಗಳಿಗೆ ಪ್ರಚಾರ ಮಾಡುವುದು, ಮತ ಕೋರುವುದು, ಯಾವುದೇ ನಿರ್ಧಿಷ್ಟ ಅಭ್ಯರ್ಥಿಗೆ ಮತ ನೀಡದಿರುವಂತೆ ಯಾವುದೇ ಮತದಾರರ ಮನವೊಲಿಸುವುದು ಮಾಡತಕ್ಕದ್ದಲ್ಲ. ಚುನಾವಣೆಗೆ ಸಂಬಂಧಪಟ್ಟ ಯಾವುದೇ ಸೂಚನೆ ಮತ್ತು ಚಿಹ್ನೆಯನ್ನು ಪ್ರದರ್ಶಿಸುವುದು. (ಸರ್ಕಾರಿ ನೋಟೀಸನ್ನು ಹೊರತುಪಡಿಸಿ) ಈ ಯಾವುದೇ ಉಪಬಂಧಗಳನ್ನು ಉಲ್ಲಂಸುವ ವ್ಯಕ್ತಿಯು ಜುಲ್ಮಾನೆಯಿಂದ ದಂಡಿತನಾಗತಕ್ಕದ್ದಾಗಿರುತ್ತದೆ.
ದಿನಾಂಕ:18-5-2022ರ ಬೆಳಿಗ್ಗೆ 7 ಗಂಟೆಯ ನಂತರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಮತದಾರರಲ್ಲದ ಬೆಂಬಲಿಗರು/ ರಾಜಕೀಯ ಪಕ್ಷದ ಪದಾಧಿಕಾರಿಗಳು, ಮುಖಂಡರುಗಳು, ಕಾರ್ಯಕರ್ತರು ಪ್ರಚಾರ ಕಾರ್ಯ ನಿರ್ವಹಿಸುವವರು, ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ನ ವ್ಯಾಪ್ತಿಯಿಂದ ಹೊರಗೆ ಹೋಗತಕ್ಕದ್ದು. ಆ ನಗರ ಸ್ಥಳೀಯ ಸಂಸ್ಥೆ ವಾರ್ಡ್ ನ ವ್ಯಾಪ್ತಿಯಲ್ಲಿರುವ ಕಲ್ಯಾಣ ಮಂಟಪ, ಸಮುದಾಯ ಭವನ, ಇತರೆ ಸ್ಥಳಗಳಲ್ಲಿ ಆ ನಗರ ಸ್ಥಳೀಯ ಸಂಸ್ಥೆ ವಾರ್ಡ್ ನ ವ್ಯಾಪ್ತಿಗೆ ಒಳಪಡುವ ಮೇಲೆ ತಿಳಿಸಿದಂತಹ ವ್ಯಕ್ತಿಗಳು ಇದ್ದಾರೆಯೇ ಎಂಬ ಬಗ್ಗೆ ತಪಾಸಣೆ ಮಾಡುವುದು. ಆ ನಗರ ಸ್ಥಳೀಯ ಸಂಸ್ಥೆ ವಾರ್ಡ್ ನ ವ್ಯಾಪ್ತಿಯಲ್ಲಿರುವ ಪ್ರವಾಸಿಗರ ವಸತಿ ಗೃಹಗಳಲ್ಲಿ ಮತ್ತು ಪ್ರವಾಸಿ ಮಂದಿರದಲ್ಲಿ ಅಂತಹ ವ್ಯಕ್ತಿಗಳು ಇದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮವಹಿಸುವುದು. ಆ ನಗರ ಸ್ಥಳೀಯ ಸಂಸ್ಥೆ ವಾರ್ಡ್ ನ ವ್ಯಾಪ್ತಿಯಲ್ಲಿ ಅನುಮಾನಾಸ್ಪದ ವಾಹನಗಳು ಹಾಗೂ ಜನರ ಸಂಚಾರದ ಮೇಲೆ ನಿಗಾವಹಿಸಲಾಗುವುದು ಎಂದು ಅವರು ಆದೇಶಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!