ರೈತರು ಖುಷಿಯಿಂದ ಕೃಷಿ ಮಾಡಲಾಗ್ಲಿಲ್ಲ

211

Get real time updates directly on you device, subscribe now.

ತುಮಕೂರು: ಪ್ರಸ್ತುತ ಭಾರತದ ಕೃಷಿ ಮಾತ್ರ ಬಿಕ್ಕಟ್ಟಿನಲ್ಲಿಲ್ಲ, ಇಡೀ ರೈತ ಸಮುದಾಯ ಸಂಕಷ್ಟಗಳ ಸರಮಾಲೆ ಎದುರಿಸುತ್ತಿದೆ ಎಂದು ಮಾಜಿ ಪ್ರಧಾನಿ ಅಟಲ್ ಜೀಯವರ ಸಲಹೆಗಾರರಾಗಿದ್ದ ಸುಧೀಂದ್ರ ಕುಲಕರ್ಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕಿನ ದೊಡ್ಡ ಹೊಸೂರು ಗ್ರಾಮದ ಸಹಜ ಬೇಸಾಯ ಕೃಷಿಕ ರವೀಶ್ ಅವರ ತೋಟಕ್ಕೆ ಭೇಟಿ ನೀಡಿ ವೀಕ್ಷಿಸಿದ ನಂತರ ಗಾಂಧಿ ಸಹಜ ಬೇಸಾಯ ಆಶ್ರಮದಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ, ರೈತರು ಖುಷಿಯಿಂದ ಕೃಷಿ ಮಾಡಲಾಗುತ್ತಿಲ್ಲ, ನಮ್ಮ ಕೃಷಿಯನ್ನು ವ್ಯಾಪಾರೀಕರಣಗೊಳಿಸಿ ರೈತರು ಮಾರುಕಟ್ಟೆಯ ನಾಗಲೋಟದಲ್ಲಿ ಎಲ್ಲವನ್ನೂ ರೂಪಾಯಿಗಳಲ್ಲಿ ಅಳೆಯುವ ಪರಿಪಾಠದಲ್ಲಿ ಸಿಲುಕುವಂತಾಗಿದೆ, ರೈತರ ಸಂಕಷ್ಟ ಇದರಲ್ಲಿ ಅಡಗಿವೆ, ಜೊತೆಗೆ ಕೃಷಿಯ ಹಣಕಾಸೀಕರಣ ಮಾರುಕಟ್ಟೆಗಳು ಮತ್ತು ಕೃಷಿ ಬಿಕ್ಕಟ್ಟಿನಲ್ಲಿ ಅಡಕವಾಗಿವೆ ಎಂದು ತಿಳಿಸಿದರು.
ಸಹಜ ಬೇಸಾಯ ತಜ್ಞ ಡಾ.ಹೆಚ್.ಮಂಜುನಾಥ್ ಮಾತನಾಡಿ, ಲಾಭ ಅತ್ಯಗತ್ಯವಾದರೂ ಕೃಷಿಯನ್ನು ಲಾಭದ ನಿರೀಕ್ಷೆಯಲ್ಲಿ ಮಾತ್ರ ಮಾಡಬಾರದು, ಅನೇಕರ ಆನಂದ ಕೃಷಿಯಲ್ಲಿ ಅಂತರ್ಗತವಾಗಿದೆ, ಅದನ್ನು ಒಂದು ಜೀವನೋಪಾಯವಾಗಿ ಪರಿಗಣಿಸಬೇಕು ಎಂದರು.
ಧಾರವಾಡದ ಸುಮನವನದ ನಿರ್ದೇಶಕ ಸಂಜೀವ ಕುಲಕರ್ಣಿ ಮಾತನಾಡಿ, ಪ್ರತಿಯೊಂದು ಜೀವ ಪರಿಸರ ವಲಯದಲ್ಲೂ ಅಲ್ಲಿಯ ರೈತರ ಅಗತ್ಯಗಳ ಬಗ್ಗೆ ಮಾರ್ಗದರ್ಶನ ಮಾಡಲು ಇಂತಹ ಸಹಜ ಬೇಸಾಯ ಆಶ್ರಮಗಳು ಅಗತ್ಯವಿದೆ ಎಂದರು.
ಸಹಜ ಬೇಸಾಯಾಶ್ರಮದ ರವೀಶ್ ಅತಿಥಿಗಳನ್ನು ಸ್ವಾಗತಿಸಿ ಆಶ್ರಮದ ಚಟುವಟಿಕೆ ಪರಿಚಯಿಸಿದರು.

Get real time updates directly on you device, subscribe now.

Comments are closed.

error: Content is protected !!