ದೇಶಕ್ಕೆ ಹೆಚ್.ಡಿ.ಡಿ ಕೊಡುಗೆ ಅಪಾರ

ತುಮಕೂರಿನಲ್ಲಿ ದೇವೇಗೌಡರ 90 ನೇ ಹುಟ್ಟುಹಬ್ಬ ಆಚರಣೆ

178

Get real time updates directly on you device, subscribe now.

ತುಮಕೂರು: ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರ 90ನೇ ಜನ್ಮ ದಿನಾಚರಣೆಯನ್ನು ಬುಧವಾರ ಕೇಕ್ ಕತ್ತರಿಸಿ ಕಾರ್ಯಕರ್ತರಿಗೆ ಸಿಹಿ ತಿನ್ನಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿ ದೇಶಕ್ಕೆ ನೀಡಿದ ಕೊಡುಗೆ ಅಪಾರವಾದುದು ಎಂದು ತಿಳಿಸಿದರು.

ಸಿದ್ಧಗಂಗೆಯ ಡಾ.ಶಿವಕುಮಾರ ಸ್ವಾಮೀಜಿಯವರು 112 ವರ್ಷಗಳ ಬದುಕಿ ಈ ರಾಜ್ಯಕ್ಕೆ ಈ ಸಮಾಜಕ್ಕೆ ಕೊಟ್ಟಿರುವಂತಹ ಸೇವೆ ನೆನೆಯುತ್ತಾ, ದೇವೇಗೌಡರು ಸಹ ಶಿವಕುಮಾರ ಶ್ರೀಗಳ ರೀತಿಯಲ್ಲಿ ಹತ್ತಾರು ವರ್ಷ ಅವರ ರೀತಿಯಲ್ಲೇ ಬಾಳಬೇಕು, ಭಾರತ ದೇಶಕ್ಕೆ ಮತ್ತು ನಮ್ಮ ರಾಜ್ಯಕ್ಕೆ ಒಳ್ಳೆಯ ಮಾರ್ಗದರ್ಶನ ನೀಡಬೇಕು, ಅವರು ಕಂಡಂತಹ ರಾಮರಾಜ್ಯದ ಕನಸು ನನಸಾಗಬೇಕೆಂದು ಆಶಿಸಿದರು.
ದೇವೇಗೌಡರ ಕನಸು ಕರ್ನಾಟಕವು ರೈತರ ರಾಜ್ಯವಾಗಬೇಕು, ನೀರಾವರಿ, ಕುಡಿಯುವ ನೀರಿನ ವ್ಯವಸ್ಥೆ, ಅಥವಾ ಶಿಕ್ಷಣ ಕ್ಷೇತ್ರ, ಕೈಗಾರಿಕಾ ಕ್ಷೇತ್ರದಲ್ಲಾಗಲಿ ಮಹಿಳಾ ಸಬಲೀಕರಣ ವಿಚಾರದಲ್ಲಾಗಲಿ ಯುವಕರ ನಿರುದ್ಯೋಗ ಸಮಸ್ಯೆಯಲ್ಲಾಗಲಿ ಈ ಎಲ್ಲಾ ಸಮಸ್ಯೆ ಬಗೆಹರಿಸುವ ರೀತಿಯಲ್ಲಿ ಈಗಾಗಲೇ ಅವರು ಮಾರ್ಗದರ್ಶನ ನೀಡುತ್ತಿದ್ದಾರೆ. ಆದ್ದರಿಂದ ಮುಂದೆಯೂ ಕೂಡ ಅವರಿಗೆ ದೇವರು ಸಿದ್ಧಗಂಗಾ ಕ್ಷೇತ್ರದ ಡಾ.ಶಿವಕುಮಾರ ಸ್ವಾಮೀಜಿಗಳು 112 ವರ್ಷ ಬದುಕಿದಂತೆ ದೇವೇಗೌಡರೂ ಸಹ ಇನ್ನೂ 25 ವರ್ಷಗಳ ಕಾಲ ಆಯುಷ್ಯ ಪಡೆದುಕೊಂಡು ಪಕ್ಷಕ್ಕೆ ಮಾರ್ಗದರ್ಶನ ಮಾಡಿ ಇಡೀ ದೇಶಕ್ಕೆ, ಇಡೀ ರಾಜ್ಯಕ್ಕೆ ಅವರಿಂದ ನಾವು ಒಳ್ಳೆಯದನ್ನು ನಿರೀಕ್ಷಿಸಬಹುದು ಎಂದು ಹೇಳಿದರು.
ಕರ್ನಾಟಕದಿಂದ ಯಾರೂ ಕೂಡ ಇಲ್ಲಿಯವರೆಗೂ ಪ್ರಧಾನಿಯಾಗಿರಲಿಲ್ಲ, ಇಡೀ ದೇಶವನ್ನು ಆಡಳಿತ ನಡೆಸಿರಲಿಲ್ಲ, ಅಂತಹ ನಾಯಕ ನಮ್ಮ ಕರ್ನಾಟಕದಲ್ಲಿ ಹುಟ್ಟಿರುವುದು ನಮಗೆ ಹೆಮ್ಮೆ ಎಂದರು.
2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿ ದೇವೇಗೌಡರ ಕನಸನ್ನು ನನಸು ಮಾಡಬೇಕು ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಗೋವಿಂದರಾಜು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ 90ನೇ ವರ್ಷದ ಜನ್ಮ ದಿನಾಚರಣೆಯ ಶುಭಾಶಯ ಕೋರುತ್ತಾ, ದೇವೇಗೌಡರು ಪ್ರಧಾನಿಯಾಗಿದ್ದ ಅವಧಿಯಲ್ಲಿ ರಾಜ್ಯಕ್ಕೆ ಮತ್ತು ದೇಶಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಮಹಿಳಾ ಮೀಸಲಾತಿ ಜಾರಿಗೆ ತರುವ ಮೂಲಕ ಇಡೀ ದೇಶಕ್ಕೆ ಮಾದರಿ ಪ್ರಧಾನಿ ಎನಿಸಿದ್ದಾರೆ ಎಂದರು.
ಇಂದು ಹೆಚ್.ಡಿ.ಕುಮಾರಸ್ವಾಮಿಯವರು ಜನತಾ ಜಲಧಾರೆ ರಥಯಾತ್ರೆಯನ್ನು ದೇವೇಗೌಡರ ಸಲಹೆ ಮೇರೆಗೆ ಹಮ್ಮಿಕೊಂಡು ಯಶಸ್ವಿಯಾಗಿದ್ದು, ನೀರಾವರಿಗೆ, ಕುಡಿಯುವ ನೀರಿಗೆ ಆದ್ಯತೆ ಸೇರಿದಂತೆ ನದಿಗಳ ಜೋಡಣೆಯಿಂದ ರಾಜ್ಯದ ಎಲ್ಲಾ ಕೆರೆಗಳಿಗೂ ನೀರಿನ ವ್ಯವಸ್ಥೆಯಾಗಬೇಕು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಆಹಾಕಾರವಿಲ್ಲದಂತೆ ಸಮೃದ್ಧ ಕರ್ನಾಟಕ ಮಾಡಬೇಕೆಂಬ ಸಂಕಲ್ಪದೊಂದಿಗೆ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾಗಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಹಾಲನೂರು ಅನಂತಕುಮಾರ್, ರಾಜ್ಯ ಹಿರಿಯ ಉಪಾಧ್ಯಕ್ಷ ಎನ್.ಗಂಗಣ್ಣ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಆರ್.ದೇವರಾಜು, ನಗರಾಧ್ಯಕ್ಷ ಬೆಳ್ಳಿ ಲೋಕೇಶ್, ಮುಖಂಡರಾದ ಶ್ರೀನಿವಾಸ ಪ್ರಸಾದ್, ಚಲುವರಾಜು, ಸುಲ್ತಾನ್ ಅಹಮ್ಮದ್, ವಿಶ್ವೇಶ್ವರಯ್ಯ, ಉಮಾಶಂಕರ್, ಜಿಲ್ಲಾ ವಕ್ತಾರ ಮೆಡಿಕಲ್ ಮಧು, ದೀಪು, ಮುಜಾಹಿದ್, ಉಪ್ಪಾರಹಳ್ಳಿ ಕುಮಾರ್, ಉಪ್ಪಾರಹಳ್ಳಿ ಮಂಜು, ಸ್ವಾಮಿ, ಧನಂಜಯ, ಮಹಿಳಾ ಮುಖಂಡರಾದ ಯಶೋಧ, ಲಕ್ಷ್ಮಮ್ಮ, ತಾಹೆರಾ ಕುಲ್ಸುಂ, ಜಯಶ್ರೀ, ರಾಧ ಸೇರಿದಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!