ಐವತ್ತು ಮರಿ ನೀರಾವುಗಳು ಪತ್ತೆ

168

Get real time updates directly on you device, subscribe now.

ತುಮಕೂರು: ಒಂದ್ ಹಾವ್ ನೋಡಿದ್ರೇನೆ ಜೀವ ಝಲ್ ಅನ್ನುತ್ತೆ. ಒಂದೇ ಜಾಗ್ದಲ್ಲಿ ಎರಡ್ ನೋಡುದ್ರಂತು ಗುಂಡ್ಗೆ ನಿಂತೇ ಹೋಗುತ್ತೆ. ಆದ್ರೆ, ಎರಡು ದಿನದಲ್ಲಿ ಒಂದೇ ಜಾಗದಲ್ಲಿ 50 ಹಾವಿನ ಮರಿಗಳು ಕಾಣಿಸಿಕೊಂಡಿವೆ ಎಂದ್ರೆ ಏನಾಗ್ಬೇಡ..
ಹೌದು, ತುಮಕೂರಿನ ಡಿಎನ್ ಡಿಎಸ್ ಕನ್ವೆಂಷನ್ ಹಾಲ್ ಹತ್ತಿರ ಶ್ರೀನಗರ ಹೇಮಂತ್ ಎಂಬುವರ ಮನೆಯಲ್ಲಿ ಕಳೆದ ಒಂದು ವಾರಗಳಿಂದ ಹಾವಿನ ಮರಿಗಳು ಕಾಣಿಸಿಕೊಂಡಿವೆ. ಹಾವು ಕಾಣಿಸಿಕೊಂಡಾಗೆಲ್ಲಾ ಮನೆಯವರು ಸ್ನೇಹಿತರ ನೆರವಿನಿಂದ ಮರಿ ಹಾವುಗಳನ್ನು ರಕ್ಷಿಸಿ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಡುವ ಕೆಲಸ ಮಾಡಿದ್ದಾರೆ.
ಅದರೆ ಇಷ್ಟಕ್ಕೆ ನಿಲ್ಲಲಿಲ್ಲ ಎಂದು ಹೇಳುವ ಅವರು ಒಂದೇ ದಿನ ಮೂವತ್ತು ಮರಿ ಹಾವುಗಳು ಅವರ ಕಣ್ಣಿಗೆ ಬಿದ್ದಿದೆ. ತಕ್ಷಣ ಎಚ್ಚೆತ್ತುಕೊಂಡ ಅವರು ತುಮಕೂರಿನ ವಾರೆಂಗ್ಲರ್ ವನ್ಯಜೀವಿ ಜಾಗೃತಿ ಸಂಸ್ಥೆ ಉರಗ ತಜ್ಞ ದಿಲೀಪ್ ಗೆ ಕರೆ ಮಾಡಿ ತಿಳಿಸಿದರು.
ದಿಲೀಪ್ ಮತ್ತು ಪ್ರಶಾಂತ್ ಸ್ಥಳಕ್ಕೆ ತೆರಳಿ ಮನೆ ಸುತ್ತ-ಮುತ್ತಲೆಲ್ಲಾ ಪರಿಶೀಲಿಸಿ 30 ಕ್ಕೂ ಹೆಚ್ಚು ಮರಿ ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿ ದೇವರಾಯನದುರ್ಗದ ಕಾಡಿಗೆ ಬಿಡುವ ಕೆಲಸ ಮಾಡಿದ್ದಾರೆ.
ಅಬ್ಬಬ್ಬಾ ಇದೇನು ಹೀಗೆ ಎಂದು ಗಾಬರಿ ಆಗಬೇಕಿಲ್ಲ.. ೩೦೦ ಕ್ಕೂ ಹೆಚ್ಚು ಮೊಟ್ಟೆಗಳು ಸಿಕ್ಕಿರುವ ಉದಾಹರಣೆಗಳಿವೆ. ನೀರಾವು ಹೀಗೆ ಎಲ್ಲೆಂದರಲ್ಲಿ ಮೊಟ್ಟೆ ಇಟ್ಟು ಮರಿ ಮಾಡುವುದಿಲ್ಲ. ನದಿ, ಕೆರೆ ದಡದ ಬಳಿಯಲ್ಲೇ ಇಡೋದು. ಸಾಲದಕ್ಕೆ ನೀರಾವು ಹೆಚ್ಚಾಗಿ ನೀರಲ್ಲೇ ಇರಲು ಬಯಸುತ್ತೆ. ಶ್ರೀನಗರದ ಬಳಿ ಕೆರೆ ಇರುವುದರಿಂದ ಹಾವುಗಳು ಹೀಗೆ ಇಟ್ಟ ಮೊಟ್ಟೆಗಳು ಮರಿಯಾಗಿವೆ ಎಂದು ಹೇಳಿದರು. ಉರಗದ ಸಂತತಿ ಹೆಚ್ಚಿಸ್ತಿರೋ ದಿಲೀಪ್ ಕಾರ್ಯಕ್ಕೆ ಮಾತ್ರ ಭೇಷ್ ಅನ್ಬೇಕು ಅಲ್ಲವೇ.
ಯಾರು ಎಷ್ಟೇ ಹೊತ್ತಲ್ಲಿ ಫೋನ್ ಮಾಡಿದ್ರು, ಹೋಗಿ ಹಾವುಗಳನ್ನ ರಕ್ಷಿಸಿ, ಅವುಗಳ ಸಂತತಿಯನ್ನು ಹೆಚ್ಚಿಸ್ತಿರೋ ದಿಲೀಪ್ ಮತ್ತು ಅವರ ತಂಡಕ್ಕೆ ಹ್ಯಾಟ್ಸಾಫ್.
ನೀವು ಕೂಡ ಹಾವುಗಳನ್ನು ಕಂಡರೆ ಮೊ.:9916790692 ಕರೆ ಮಾಡಿ ತಿಳಿಸಿ.

Get real time updates directly on you device, subscribe now.

Comments are closed.

error: Content is protected !!