ಎಡೆಬಿಡದೆ ಸುರಿಯುತ್ತಿರುವ ಮಳೆಗೆ 15 ಮನೆಗಳಿಗೆ ಹಾನಿ

6 ಮನೆಗಳ ಮೇಲ್ಚಾವಣಿ ಕುಸಿತ: ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳ ಭೇಟಿ

262

Get real time updates directly on you device, subscribe now.

ಶಿರಾ: ಶಿರಾ ತಾಲ್ಲೂಕಿನಲ್ಲಿ ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನಾದ್ಯಂತ 15 ಮನೆಗಳು ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಷಯ ತಿಳಿದ ತಕ್ಷಣ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ತಾಲ್ಲೂಕಿನ ಗೌಡಗೆರೆ ಹೋಬಳಿ ನೇರಲಹಳ್ಳಿ ಗ್ರಾಮದ ಸುಜಾತ ಅವರ ವಾಸದ ಮನೆಯ ಮೇಲ್ಬಾಗ ಪೂರ್ಣ ಬಿದ್ದಿದೆ. ಯಾವುದೇ ಜೀವ ಹಾನಿಯಾಗಿಲ್ಲ. ನಿಡಗಟ್ಟೆ ಗ್ರಾಮದ ಸಿದ್ದಮ್ಮ ಅವರ ವಾಸದ ಮನೆಯ ಗೋಡೆ ಭಾಗಶಃ ಬಿದ್ದಿದೆ. ಜುಂಜರಾಮನಹಳ್ಳಿ ಗ್ರಾಮದಲ್ಲಿ ಚಿಕ್ಕಣ್ಣ ಅವರ ಮನೆ ಬಿದ್ದಿದೆ. ಗೌಡಗೆರೆ ಹೋಬಳಿ ಹುಣಸೇಹಳ್ಳಿ ಗ್ರಾಮದ ಜಯಮ್ಮ ಅವರ ವಾಸದ ಮನೆಯ ಗೋಡೆ ಕುಸಿದಿದೆ. ಬರಗೂರು ಗ್ರಾಮದ ತಿಮ್ಮಕ್ಕ ಅವರ ಮನೆಯ ಹೆಂಚು ಮಳೆಯಿಂದ ಕುಸಿದು ಬಿದ್ದಿದೆ. ಯಾವುದೇ ಹಾನಿ ಆಗಿರುವುದಿಲ್ಲ.

ಮಳೆ ವರದಿ: ಶಿರಾ ತಾಲ್ಲೂಕಿನಲ್ಲಿ ಬುಧವಾರ ಬರಗೂರಿನಲ್ಲಿ ೭೯.೨ ಮಿ.ಮೀ, ಬುಕ್ಕಾಪಟ್ಟಣದಲ್ಲಿ ೨೫.೨ ಮಿ.ಮೀ., ಹುಣಸೇಹಳ್ಳಿಯಲ್ಲಿ ೫೧.೪ ಮಿ.ಮೀ. ತಾವರೆಕೆರೆಯಲ್ಲಿ ೨.೮ ಮಿ.ಮೀ. ಚಿಕ್ಕನಹಳ್ಳಿಯಲ್ಲಿ ೨೭ ಮಿ.ಮೀ., ಕಳ್ಳಂಬೆಳ್ಳದಲ್ಲಿ ೪೨ ಮಿ.ಮೀ. ಮಳೆಯಾಗಿದೆ.

Get real time updates directly on you device, subscribe now.

Comments are closed.

error: Content is protected !!