ತುಮಕೂರು: ಬಹು ನಿರೀಕ್ಷಿತ ಎಸ್.ಎಸ್.ಎಲ್.ಸಿ ಪರೀಕ್ಷೆ ಲಿತಾಂಶ ಪ್ರಕಟಗೊಂಡಿದ್ದು, ತುಮಕೂರು ಜಿಲ್ಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ತುಮಕೂರು ಶೈಕ್ಷಣಿಕ ಜಿಲ್ಲೆಯಿಂದ ಚಿಕ್ಕನಾಯಕನಹಳ್ಳಿ ತಾಲೂಕಿನ ಯಳನಾಡು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಭೂಮಿಕ 625ಕ್ಕೆ 625 ಅಂಕಗಳಿಸಿ ರಾಜ್ಯಕ್ಕೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.
ಮಗಳ ಸಾಧನೆಗೆ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ಭೂಮಿಕಾ ತಂದೆ ರವೀಂದ್ರನಾಥ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಮಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ತಾಯಿ ಲಾವಣ್ಯ ಕೂಡ ಸಂಭ್ರಮದಲ್ಲಿದ್ದಾರೆ.
ಇನ್ನು ಮಧುಗಿರಿ ಶೈಕ್ಷಣಿಕ ಜಿಲ್ಲೆಯಿಂದ ಶಿರಾ ತಾಲೂಕಿನ ಬರಗೂರಿನ ಲಿಟಲ್ ರೋಸಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ನಮ್ರತ್.ಜಿ.ಪಿ. ಎಸ್.ಎಸ್.ಎಲ್.ಸಿ ಲಿತಾಂಶದಲ್ಲಿ 625 ಕ್ಕೆ 625 ಅಂಕಗಳಿಸಿ ರಾಜಕ್ಕೆ ಟಾಪರ್ ಎನಿಸಿದ್ದಾರೆ. ಕನ್ನಡದಲ್ಲಿ- 125, ಇಂಗ್ಲಿಷ್- 100, ಹಿಂದಿ- 100, ಗಣಿತ- 100, ವಿಜ್ಞಾನ- 100, ಸಮಾಜ ವಿಜ್ಞಾನ- 100 ಕ್ಕೆ ನೂರು ಪಡೆದು ಒಟ್ಟು 625 ಅಂಕಗಳಿಸಿ ಸಾಧನೆ ಮಾಡಿದ್ದಾರೆ.
ಆಂಗ್ಲ ಮಾಧ್ಯಮದ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ನಮ್ರತ್ ಪೋಷಕರಿಗೆ ಹಾಗೂ ಶಿಕ್ಷಕರಿಗೆ, ಶಾಲೆಗೆ ಕೀರ್ತಿ ತಂದಿದ್ದಾರೆ.
ಆಂಧ್ರ ಪ್ರದೇಶದ ಗಡಿಭಾಗದ ಶಿರಾ ತಾಲೂಕು ಗೋಣಿಹಳ್ಳಿ ಗ್ರಾಮದ ಪ್ರಕಾಶ್ ಮತ್ತು ಭಾಗ್ಯಮ್ಮ ದಂಪತಿ ಮಗನಾದ ನಮ್ರತ್ ಗ್ರಾಮೀಣ ಭಾಗದ ಶಾಲೆಯಲ್ಲಿ ಉತ್ತಮ ವ್ಯಾಸಂಗ ಮಾಡಿ ರಾಜ್ಯಕ್ಕೆ ಪ್ರಥಮ ಎನಿಸಿರುವುದು ನಿಜಕ್ಕೂ ಪ್ರಶಂಸನೀಯ ಕಾರ್ಯವಾಗಿದೆ.
ತಿಪಟೂರಿನ ನಳಂದ ಶಾಲೆಯ ವಿದ್ಯಾರ್ಥಿನಿ ಸುಪ್ರಿಯಾ.ಕೆ.ಎಸ್. 625 ಅಂಕ ಗಳಿಸಿ ಅತ್ಯುನ್ನತ ಸಾಧನೆ ಮಾಡಿದ್ದು, ಶಾಲೆಗೆ, ಪೋಷಕರಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಇನ್ನು ಕುಣಿಗಲ್ ಪಟ್ಟಣದ ಬಿಜಿಎಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಶ್ಮಿತ 625ಕ್ಕೆ 624 ಅಂಕಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಇನ್ನು ಶಿರಾ ತಾಲ್ಲೂಕಿನ ಗೌಡಗೆರೆಯ ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿನಿ ನವ್ಯ.ಟಿ. 624, ಸೆಂಟ್ಆನ್ಸ್ ಶಾಲೆಯ ಸಹನಗೌಡ 623, ಬರಗೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಭವಾನಿ.ಬಿ.ಎಸ್. 623, ಬುಕ್ಕಾಪಟ್ಟಣ ಗ್ರಾಮದ ಆಕ್ಸರ್ಡ್ ಶಾಲೆಯ ಪೂರ್ವಿತ.ಡಿ.ಆರ್. 623, ಭೂವನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಲೇಖನ.ಎನ್. 623, ಬುಕ್ಕಾಪಟ್ಟಣ ಗ್ರಾಮದ ಅಂಬೇಡ್ಕರ್ ವಸತಿ ಶಾಲೆಯ ಸೋನಾ.ಹೆಚ್.ಎಂ. 623 ಅಂಕಗಳನ್ನು ಪಡೆದಿದ್ದಾರೆ.
ಅದೇ ರೀತಿ ಗುಬ್ಬಿ ಪಟ್ಟಣದ ಶುಭೋದಯ ಶಾಲೆಯ ವಿದ್ಯಾರ್ಥಿನಿ ನವ್ಯ 623 ಅಂಕ ಪಡೆದಿದ್ದಾರೆ,
ಕೊರಟಗೆರೆ ತಾಲ್ಲೂಕಿನ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಹೇಮಂತ್ ಕುಮಾರ್ ಜಿ.ಎನ್.624 ಅಂಕ ಗಳಿಸಿ ತಾಲ್ಲೂಕಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾನೆ.
ಮಧುಗಿರಿಯ ಚಿರಕ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ನಿತ್ಯಶ್ರೀ.ಆರ್.ಎ. 623 ಅಂಕ ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಪಾವಗಡ ತಾಲ್ಲೂಕಿನ ಗುರುಕುಲ ಗ್ರಾಮಾಂತರ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಜ್ವಲ್ ಚೌದರಿ ನಡೆನ್ಲ 624 ಹಾಗೂ ಕೊಡಿಗೇಹಳ್ಳಿಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ರಜಿತಾ 624 ಮತ್ತು ಕೋಟಗುಡ್ಡದ ಸಹನಾ ಆಂಗ್ಲ ಮಾಧ್ಯಮ ಶಾಲೆಯ ಚಿನ್ಮಯಿ 623 ಅಂಕ ಗಳಿಸಿ ಸಾ‘ನೆ ಮಾಡಿದ್ದಾರೆ.
ತುರುವೇಕೆರೆ ತಾಲೂಕಿನಿಂದ ಪಟ್ಟಣದ ಪ್ರಿಯಾ ಆಂಗ್ಲ ಶಾಲೆಯ ಜಹಿನಾಬ್ 624 ಅಂಕ ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಒಟ್ಟಾರೆ ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಮಾರ್ಚ್, ಏಪ್ರಿಲ್ 2022ರಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಂತಹ ಒಟ್ಟು 21852 ವಿದ್ಯಾರ್ಥಿಗಳ ಪೈಕಿ ಒಟ್ಟು 20028 ಮಕ್ಕಳು ಉತ್ತೀರ್ಣರಾಗಿದ್ದು, ಶೇ.91.65 ರಷ್ಟು ತೇರ್ಗಡೆ ಹೊಂದಿರುತ್ತಾರೆ ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಒಟ್ಟು 12547 ವಿದ್ಯಾರ್ಥಿಗಳ ಪೈಕಿ ಒಟ್ಟು 11813 ಮಕ್ಕಳು ಉತ್ತೀರ್ಣರಾಗಿದ್ದು, ಶೇ.94.15 ರಷ್ಟು ಮಕ್ಕಳು ತೇರ್ಗಡೆ ಹೊಂದಿರುತ್ತಾರೆ.
ತುಮಕೂರು(ದ) ಶೈಕ್ಷಣಿಕ ಜಿಲ್ಲೆಯಲ್ಲಿ 11610 ಬಾಲಕರು ಮತ್ತು 10242 ಬಾಲಕಿಯರು ಪರೀಕ್ಷೆ ಬರೆದಿದ್ದು, ಈ ಪೈಕಿ 10414 ಬಾಲಕರು ಮತ್ತು 9614 ಬಾಲಕಿಯರು ತೇರ್ಗಡೆ ಹೊಂದಿರುತ್ತಾರೆ. ಬಾಲಕರು ಶೇ.89.70 ಮತ್ತು ಬಾಲಕಿಯರು ಶೇ.93.87 ರಷ್ಟು ತೇರ್ಗಡೆ ಹೊಂದಿರುತ್ತಾರೆ.
ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 6437 ಬಾಲಕರು ಮತ್ತು 6110 ಬಾಲಕಿಯರು ಪರೀಕ್ಷೆ ಬರೆದಿದ್ದು, ಈ ಪೈಕಿ 5984 ಬಾಲಕರು ಮತ್ತು 5829 ಬಾಲಕಿಯರು ತೇರ್ಗಡೆ ಹೊಂದಿರುತ್ತಾರೆ. ಬಾಲಕರು ಶೇ.92.96 ಮತ್ತು ಬಾಲಕಿಯರು ಶೇ.95.40ರಷ್ಟು ತೇರ್ಗಡೆ ಹೊಂದಿರುತ್ತಾರೆ.
ಶೇ.100 ರಷ್ಟು ಲಿತಾಂಶ ಪಡೆದ ಶಾಲೆಗಳು
ತುಮಕೂರು(ದ) ಶೈಕ್ಷಣಿಕ ಜಿಲ್ಲೆಯಲ್ಲಿ 55 ಸರ್ಕಾರಿ ಶಾಲೆಗಳು, 17 ಅನುದಾನಿತ ಶಾಲೆಗಳು ಮತ್ತು 48 ಅನುದಾನ ರಹಿತ ಶಾಲೆಗಳು ಶೇ.100 ರಷ್ಟು ಲಿತಾಂಶ ಪಡೆದಿವೆ ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 55 ಸರ್ಕಾರಿ ಶಾಲೆಗಳು, 25 ಅನುದಾನಿತ ಶಾಲೆಗಳು ಮತ್ತು 35 ಅನುದಾನರಹಿತ ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿವೆ.
Get real time updates directly on you device, subscribe now.
Comments are closed.