ಮಳೆಯ ಆರ್ಭಟ- ನೀರಿನಲ್ಲಿ ಮುಳುಗಿದ ಭತ್ತದ ಬೆಳೆ

364

Get real time updates directly on you device, subscribe now.

ಕೊರಟಗೆರೆ: ನವಿಲು ಕುರಿಕೆ ಕೆರೆಯ ಪುನಶ್ಚೇತನ ಮತ್ತು ಅಭಿವೃದ್ಧಿ ಕಳೆದ 45 ವರ್ಷದಿಂದ ಮರೀಚಿಕೆ, ಕೆರೆಯ ತೂಬು ಶಿಥಿಲವಾಗಿ ಬಿರುಕು ಬಿಟ್ಟಿರುವ ಕೆರೆಯ ಏರಿಯ ದುರಸ್ಥಿಯೇ ಹಗಲು ಕನಸು, ಸಣ್ಣ ನೀರಾವರಿ ಇಲಾಖೆಯ ದಿವ್ಯ ನಿರ್ಲಕ್ಷದಿಂದ 50 ರೈತ ಕುಟುಂಬ ಬೆಳೆದಿರುವ 120 ಎಕರೆಗೂ ಅಧಿಕ ಭತ್ತದ ಬೆಳೆ ಕೆರೆಯ ನೀರಿನಲ್ಲಿ ಮುಳುಗಿ ಮೊಳಕೆ ಹೊಡೆದಿದೆ.

ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಇಗ್ರಹಾರ ಗ್ರಾಪಂ ವ್ಯಾಪ್ತಿಯ ನವಿಲುಕುರಿಕೆ ಗ್ರಾಮದ ಕೆರೆಯು 1972 ರಲ್ಲಿ ನಿರ್ಮಾಣವಾಗಿದೆ, ಕಳೆದ 45 ವರ್ಷದಿಂದ ಕೆರೆಯ ಅಭಿವೃದ್ಧಿಯೇ ಮರೀಚಿಕೆ ಆಗಿದೆ, ಕೆರೆಯ ತೂಬು ಮತ್ತು ಏರಿಯಲ್ಲಿ ಬಿರುಕು ಕಾಣಿಸಿಕೊಂಡು ಕೆರೆಯಲ್ಲಿನ ನೀರು ಕಳೆದ ಎರಡು ವರ್ಷಗಳಿಂದ ರೈತರ ಜಮೀನುಗಳಿಗೆ ವ್ಯರ್ಥವಾಗಿ ಹರಿಯುತ್ತೀದೆ.
ನವಿಲುಕುರಿಕೆ ಕೆರೆಯು 130ಎಕರೇ ಅಚ್ಚುಕಟ್ಟು ಪ್ರದೇಶ ಹೊಂದಿದೆ, ದೇವರಬೆಟ್ಟ, ಮಿಂಚುಕಲ್ಲುಬೆಟ್ಟ, ಮಬ್ಬಗಲ್ಲು, ನಡುವಲಗುಟ್ಟೆ, ಕೋಡಿಗುಟ್ಟೆಯಿಂದ ಹರಿಯುವ ಮಳೆಯ ನೀರಿನಿಂದ ಪ್ರತಿ ವರ್ಷವು ನವಿಲುಕುರಿಕೆ ಕೆರೆ ತುಂಬಲಿದೆ, ಕೆರೆಯ ನೀರು ರಾತ್ರೋರಾತ್ರಿ ಖಾಲಿಯಾಗಿ ರೈತರ ಅಡಿಕೆ, ತೆಂಗು, ಬಾಳೆತೋಟ, ಭತ್ತದಗದ್ದೆ ಮತ್ತು ರಾಗಿಯ ಜಮೀನಿಗೆ ಹರಿಯುತ್ತಿರುವ ಪರಿಣಾಮ ರೈತರಿಗೆ ಸಂಕಷ್ಟ ಎದುರಾಗಿದೆ.
ನವಿಲು ಕುರಿಕೆ ರೈತರ ಮನವಿಗೆ ಶಾಸಕರು ಸ್ಪಂದಿಸುತ್ತಿಲ್ಲ, ಸಣ್ಣ ನೀರಾವರಿ ಇಲಾಖೆ ಅಧಿಕಾರಿವರ್ಗ ಸ್ಥಳಕ್ಕೆ ಬರೋಲ್ಲ, ಸ್ಥಳೀಯ ಗ್ರಾಪಂಗೆ ರೈತರ ನೋವಿನ ಮಾತು ಕೇಳಿಸೋದಿಲ್ಲ, ರೈತಾಪಿವರ್ಗ ಬೆಳೆಯುವ ಅನ್ನದ ಬೆಳೆಗೆ ಭದ್ರತೆ ನೀಡೋರು ಯಾರು ಎಂಬುದೆ ಈಗಿರುವ ಯಕ್ಷಪ್ರಶ್ನೆಯಾಗಿದೆ, ಗದ್ದೆಯಲ್ಲಿನ ನೀರು ಖಾಲಿಯಾಗುತ್ತ ಅಥವಾ ನೀರಿನಲ್ಲಿ ಭತ್ತದ ಬೆಳೆ ಮುಳುಗಿ ಮೊಳಕೆ ಹೊಡೆಯುತ್ತಾ ಎಂಬುದನ್ನು ಕಾದುನೋಡಬೇಕಿದೆ.

Get real time updates directly on you device, subscribe now.

Comments are closed.

error: Content is protected !!