ಮೀಸಲಾತಿ ಹೆಚ್ಚಿಸಲು ಸರ್ಕಾರದ ಮೀನಾಮೇಷ: ರಾಜೇಂದ್ರ

234

Get real time updates directly on you device, subscribe now.

ಮಧುಗಿರಿ: ಪರಿಶಿಷ್ಟ ವರ್ಗಗಳ ಮೀಸಲಾತಿ ಹೆಚ್ಚಿಸುವುದಾಗಿ ರಾಜ್ಯದಲ್ಲಿ ಅಧಿಕಾರ ಹಿಡಿದ ಬಿಜೆಪಿ ಸರ್ಕಾರ ಈಗ ಯಾವುದೇ ಮೀಸಲಾತಿ ಹೆಚ್ಚಿಸಲು ಮೀನಮೇಷ ಎಣಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವತಿಯಿಂದ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, 2018 ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರು ಬಿಜೆಪಿಯನ್ನು ಅಧಿಕಾರಕ್ಕೆ ತಂದಲ್ಲಿ ಮೀಸಲಾತಿ ಹೆಚ್ಚಿಸುವುದರ ಜೊತೆಗೆ ಶ್ರೀರಾಮುಲು ಅವರನ್ನು ಡಿಸಿಎಂ ಮಾಡುವುದಾಗಿ ಭರವಸೆ ನೀಡಿದ್ದರು, ಇದನ್ನು ನಂಬಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ತಳ ಸಮುದಾಯಗಳು ಈ ಸಂದರ್ಭದಲ್ಲಿ ಬಿಜೆಪಿಗೆ ಹೆಚ್ಚಿನ ಬೆಂಬಲ ನೀಡಿದ್ದವು, ಆದರೆ ಚುನಾವಣೆ ನಂತರ ಮೀಸಲಾತಿಯೂ ಇಲ್ಲ, ಡಿಸಿಎಂ ಪಟ್ಟವೂ ಇಲ್ಲ ಎಂಬಂತಾಗಿದ್ದು, ಈ ಹಿನ್ನೆಲೆಯಲ್ಲಿ ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ರಾಜನಹಳ್ಳಿಯ ಪರಮ ಗುರುಗಳಾದ ಪ್ರಸನ್ನಾನಂದ ಶ್ರೀಗಳ ನೇತೃತ್ವದಲ್ಲಿ ಸುಮಾರು 110 ದಿನಗಳ ಕಾಲ ಸಮುದಾಯಗಳ ಒಳಿತಿಗಾಗಿ ಚಳಿ, ಗಾಳಿ, ಮಳೆ ಲೆಕ್ಕಿಸದೆ ಶೇ.3 ರಿಂದ ಶೇ.7.5 ರಷ್ಟು ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ಧರಣಿ ನಡೆಸಿದಾಗ ಈ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರು ಉಪ ಚುನಾವಣೆ ಮುಗಿದ ನಂತರ ಮತ್ತು ಕೋವಿಡ್ ಸೋಂಕು ಕಡಿಮೆಯಾದ ನಂತರ ಮೀಸಲಾತಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಕೇಳಲು ಹೋದರೆ ವರದಿ ಬಂದ ನಂತರ ಪರಿಶೀಲಿಸುವುದಾಗಿ ತಿಳಿಸುತ್ತಿದ್ದು, ಸರ್ಕಾರದಲ್ಲಿರುವ ಸಚಿವರೂ ಸಹ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ, ಪಕ್ಕದ ಆಂಧ್ರ ಮತ್ತು ಮಹಾರಾಷ್ಟ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ.7.5 ರಷ್ಟು ಮೀಸಲಾತಿ ಹೆಚ್ಚಿಸಿದ್ದು, ನಮ್ಮ ರಾಜ್ಯದಲ್ಲಿ ಜಾರಿಯಾಗದಿರುವುದು ದುರಂತ. ಸರ್ಕಾರಕ್ಕೆ ಅಂತಿಮ ಗಡುವು ನೀಡಿದ್ದರೂ ಇದೂವರೆವಿಗೂ ಸರ್ಕಾರದಿಂದ ಸಕಾರತ್ಮಾಕವಾದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ, ಹಾಗಾಗಿ ಯುವ ಪೀಳಿಗೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹೋರಾಟ ಅನಿವಾರ್ಯವಾಗಿದ್ದು, ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ನೇತೃತ್ವದಲ್ಲಿ ಸಮುದಾಯದ ಮುಖಂಡರೆಲ್ಲರ ನೇತೃತ್ವದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ರಂಗಾಶ್ಯಾಮಣ್ಣ, ಡಿ.ಓ.ನಾಗರಾಜು, ಹುಚ್ಚಣ್ಣ, ದೊಡ್ಡಯ್ಯ, ಜಿ.ಎಸ್.ಜಗದೀಶ್ ಕುಮಾರ್, ಹನುಮಂತರಾಯಪ್ಪ, ಬ್ರಹ್ಮ ಸಮುದ್ರ ಕೃಷ್ಣಮೂರ್ತಿ, ಚಿರಂಜೀವಿ, ಚಂದನ್, ರಾಜನಾಯಕ, ಗಂಗರಾಜು, ಕೊಡಿಗೇನಹಳ್ಳಿ ಚಲಪತಿ, ಶಂಕರನಾರಾಯಣ, ದೊಡ್ಡೇರಿ ಕಣೀಮಯ್ಯ, ಸತೀಶ್, ಗಿರೀಶ್, ರಂಗಶ್ಯಾಮಣ್ಣ, ಚಿಕ್ಕಮ್ಮ, ಅಂಜಿನಪ್ಪ, ಜಯಕುಮಾರ್, ಶಿವಣ್ಣ, ಚಂದ್ರಮ್ಮ, ಗ್ರಾಪಂ ಅಧ್ಯಕ್ಷ ಜಯಲಕ್ಷಮ್ಮ, ಮಾಜಿ ಪುರಸಭಾ ಸದಸ್ಯೆ ಭಾಗ್ಯಮ್ಮ, ಮಿಲ್ ರಾಜಣ್ಣ, ಗ್ರಾಪಂ ಸದಸ್ಯ ಚಿರಂಜೀವಿ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!