ಬಸ್ ಡಿಕ್ಕಿ- ಸ್ಥಳದಲ್ಲೆ ವೃದ್ಧೆ ಸಾವು

271

Get real time updates directly on you device, subscribe now.

ತುರುವೇಕೆರೆ: ತಾಲೂಕಿನ ಚಿಕ್ಕಪುರ ಗೇಟ್ ಬಳಿ ರಾಜ್ಯ ಸಾರಿಗೆ ಬಸ್ ರಸ್ತೆ ದಾಟುತ್ತಿದ್ದ ಅಪರಿಚಿತ ವೃದ್ಧೆಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ಧೆ(65) ಸ್ಥಳದಲ್ಲೆ ಮೃತ ಪಟ್ಟಿದ್ದಾರೆ.

ತಾಲೂಕಿನ ಚಿಕ್ಕಪುರ ಮಾರ್ಗವಾಗಿ ಮೈಸೂರಿನಿಂದ ತುರುವೇಕೆರೆ ಕಡೆಗೆ ಸಾರಿಗೆ ಬಸ್ ಬರುತ್ತಿರುವುದನ್ನು ಗಮನಿಸದ ವೃದ್ಧೆ ಮಹಿಳೆ ರಸ್ತೆ ದಾಟಲು ಮುಂದಾಗಿದ್ದಾರೆ. ಆ ವೇಳೆ ಚಾಲಕನಿಂದ ಬಸ್ ನ್ನು ನಿಯಂತ್ರಣ ಸಾಧ್ಯವಾಗದ ಆಕಸ್ಮಿಕವಾಗಿ ವೃದ್ಧೆಗೆ ಬಸ್ ಡಿಕ್ಕಿ ಹೊಡೆಯಿತು. ಪರಿಣಾಮವಾಗಿ ವೃದ್ಧೆ ಸ್ಥಳದಲ್ಲೆ ಮೃತಪಟ್ಟಿದ್ದಾಗಿ ಬಸ್ ನಿರ್ವಾಹಕ ಪೊಲೀಸರಿಗೆ ದೂರಿತ್ತಿದ್ದಾರೆ. ನಿರ್ವಾಹಕನ ದೂರಿನ ಮೇರೆಗೆ ತುರುವೇಕೆರೆ ಪೊಲೀಸರು ಪ್ರಕರಣ ದಾಖಲಿಸಿ ಕ್ರಮಕ್ಕೆ ಮುಂದಾಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!