ಅಧಿಕಾರಿಗಳ ವಿರುದ್ಧ ದಲಿತರ ಆಕ್ರೋಶ

ದಲಿತರ ಜಮೀನಿನಲ್ಲೇ ಸ್ಮಶಾನ ಜಾಗ ಗುರುತು

270

Get real time updates directly on you device, subscribe now.

ಕೊರಟಗೆರೆ: ಲಿಂಗಾಪುರದ ದಲಿತ ಕುಟುಂಬಕ್ಕೆ 70 ವರ್ಷದಿಂದ ಸ್ಮಶಾನದ ಜಾಗವೇ ಮರೀಚಿಕೆಯಾಗಿದೆ, ಖಾಸಗಿ ಮನೆಯಲ್ಲಿ ಕುಳಿತು ಅಧಿಕಾರಿಗಳಿಂದ ಸ್ಮಶಾನದ ಸರ್ವೇ ಕೆಲಸ ಮಾಡಿಸಿ ಸರಕಾರಿ ಕಚೇರಿಯಿಂದ ಸ್ಮಶಾನದ ಜಾಗ ಗುರುತು ಮಾಡಲಾಗಿದೆ, ಅತ್ತ ಮೃತ ದಲಿತ ಮಹಿಳೆಯ ಶವ ಸಂಸ್ಕಾರಕ್ಕೆ ಸ್ಥಳವಿಲ್ಲ, ಇತ್ತ ದಲಿತ ಕುಟುಂಬ ವರ್ಗ ಉಳುಮೆ ಮಾಡುತ್ತಿರುವ ತಮ್ಮ ಜಮೀನು ಬೀಡೋದಿಲ್ಲ, ಸ್ಮಶಾನದ ಜಮೀನಿಗಾಗಿ ಸರಕಾರಿ ಅಧಿಕಾರಿ ವರ್ಗ ಮತ್ತು ದಲಿತ ಕುಟುಂಬದ ನಡುವೆ ದಿನಪೂರ್ತಿ ವಾಗ್ವಾದ ನಡೆದಿದೆ.

ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಮಾವತ್ತೂರು ಗ್ರಾಪಂ ವ್ಯಾಪ್ತಿಯ ಲಿಂಗಾಪುರ ಗ್ರಾಮದಲ್ಲಿ ಕಳೆದ 70 ವರ್ಷದಿಂದ ದಲಿತ ಕುಟುಂಬಗಳಿಗೆ ಸ್ಮಶಾನದ ಜಾಗವಿಲ್ಲದೆ ಸಮಸ್ಯೆ ಸೃಷ್ಟಿಯಾಗಿದೆ, ಲಿಂಗಾಪುರ ಗ್ರಾಮದ ಸರ್ವೇ ನಂ. 7 ರಲ್ಲಿ ಕೊರಟಗೆರೆಯ ಕಂದಾಯ ಇಲಾಖೆಯ ಅಧಿಕಾರಿ ವರ್ಗ ದಲಿತರಿಗೆ ಸ್ಮಶಾನಕ್ಕಾಗಿ 10 ಗುಂಟೆ ಜಮೀನನ್ನು ಮಂಜೂರಾತಿ ಮಾಡಿಸಿದ್ದಾರೆ, ಆದರೆ ಅಭಿವೃದ್ಧಿಗೆ ಗ್ರಾಪಂಗೆ ಹಸ್ತಾಂತರ ಮಾಡಿಲ್ಲ.
ಕಂದಾಯ ಇಲಾಖೆಯಿಂದ ಲಿಂಗಾಪುರ ಗ್ರಾಮದ ದಲಿತರಿಗೆ ಸರ್ವೇ ನಂ. 7 ರಲ್ಲಿ ಗುರುತಿಸಿ ಮಂಜೂರು ಮಾಡಲಾಗಿದೆ. ಮಂಜೂರಾದ ಜಾಗದಲ್ಲಿ ಈಗಾಗಲೇ ದಲಿತ ಕುಟುಂಬದ ಸಮುದಾಯದ ಕುಟುಂಬವೊಂದು ಕಳೆದ 50 ವರ್ಷದಿಂದ ಉಳುಮೆ ಮಾಡಿದ್ದಾರೆ. ಕಂದಾಯ ಇಲಾಖೆ ಅಧಿಕಾರಿ ವರ್ಗ ಸ್ಮಶಾನದ ಜಾಗವನ್ನು ಸರ್ವೇ ಕೆಲಸ ನಡೆಸುವಾಗ ಏಕೆ ಸ್ಥಳೀಯರಿಗೆ ಮಾಹಿತಿ ನೀಡಿಲ್ಲ ಎಂಬುದೇ ಅನುಮಾನಕ್ಕೆ ಕಾರಣವಾಗಿದೆ.
ಕಂದಾಯ ಇಲಾಖೆಯು ಸ್ಮಶಾನಕ್ಕೆ ಮಂಜೂರು ಮಾಡಿದ ಜಾಗವನ್ನು ಅಭಿವೃದ್ಧಿ ಪಡಿಸಲು ಮಾವತ್ತೂರು ಗ್ರಾಪಂ ಹಸ್ತಾಂತರ ಮಾಡದಿರಲು ಕಾರಣವೇನು? ಪ್ರಸ್ತುತ ಮೃತ ಮಹಿಳೆಯು ದಲಿತರೇ ಸ್ಮಶಾನ ಗುರುತು ಮಾಡಿರುವ ಸ್ಥಳವನ್ನು ದಲಿತರೇ ಉಳುಮೆ ಮಾಡುತ್ತಿರುವುದು ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಿಳಿದಿಲ್ಲವಾ? ವಿನಾಕಾರಣ ಸಮಸ್ಯೆ ಸೃಷ್ಟಿಸಿ ಅಧಿಕಾರಿವರ್ಗ ಮೌನಕ್ಕೆ ಶರಣಾಗಲು ಕಾರಣವೇನು ಎಂಬುದನ್ನು ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ.

Get real time updates directly on you device, subscribe now.

Comments are closed.

error: Content is protected !!