ಕೆನರಾ ಬ್ಯಾಂಕ್ ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನ

565

Get real time updates directly on you device, subscribe now.

ಕೊರಟಗೆರೆ: ಕೆನರಾ ಬ್ಯಾಂಕ್ ನ ಕಚೇರಿ ಮತ್ತು ಆವರಣದ ಸಿಸಿ ಟಿವಿಯೇ ಮಾಯವಾಗಿದೆ, ಬ್ಯಾಂಕ್ನ ಕಟ್ಟಡದ ಹಿಂಭಾಗದ ಕಾಪೌಂಡು ಮತ್ತು ಕಿಟಕಿಯು ಶಿಥಿಲವಾಗಿದೆ, ಬ್ಯಾಂಕ್ನ ಎಟಿಎಂ ಕೇಂದ್ರಕ್ಕೆ ಕಾವಲುಗಾರನ ಭದ್ರತೆಯ ಜೊತೆ ಬಾಗಿಲು ಇಲ್ಲದಿರುವ ಪರಿಣಾಮ ರಾತ್ರೋರಾತ್ರಿ ಕಳ್ಳನೋರ್ವ ಎಟಿಎಂ ಕೇಂದ್ರದೊಳಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.

ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಬೈರೇನಹಳ್ಳಿ ಗ್ರಾಮದಲ್ಲಿಯೇ ಈಗಾಗಲೇ ಪೆಟ್ರೊಲ್ ಬಂಕ್, ಮದ್ಯದ ಅಂಗಡಿ, ಬೇಕರಿ, ಕುರಿಮೇಕೆ ಕಳ್ಳತನ, ಸರಣಿ ಚಿಲ್ಲರೆ ಅಂಗಡಿ ಕಳ್ಳತನ ಸೇರಿ ಈಗಾಗಲೇ ಹತ್ತಾರು ಕಳ್ಳತನದ ಪ್ರಕರಣ ನಡೆದಿವೆ. ಈಗ ಕೆನರಾ ಬ್ಯಾಂಕ್ನ ಎಟಿಎಂ ಸಿಸಿ ಟಿವಿ ಮತ್ತು ಕೇಬಲ್ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ.
ಗಡಿ ಭಾಗದ ಬೈರೇನಹಳ್ಳಿ ಗ್ರಾಮದ ಕೆನರಾ ಬ್ಯಾಂಕ್ನ ಕಟ್ಟಡವು ಶಿಥಿಲವಾಗಿದೆ, ಕಟ್ಟಡದ ಕಾಪೌಂಡು ಹೊಡೆದು ವರ್ಷ ಕಳೆದಿದೆ, ಬ್ಯಾಂಕ್ನ ಕಿಟಕಿಗಳು ಮುರಿದು ಬಿದ್ದಿವೆ, ಇನ್ನೂ ಬ್ಯಾಂಕ್ನ ಸುತ್ತಮುತ್ತಲು ಗಿಡ ಬೆಳೆದು ನಿಂತಿವೆ. ಬ್ಯಾಂಕ್ನ ಆವರಣದಲ್ಲಿ ಕಸ ಕಡ್ಡಿಯಿಂದ ದುರ್ವಾಸನೆ ಬೀರುತ್ತಿದ್ದರೂ ಗ್ರಾಪಂ ಮತ್ತು ಬ್ಯಾಂಕ್ನ ಅಧಿಕಾರಿ ವರ್ಗ ಮೌನ ವಹಿಸಿದ್ದಾರೆ.
ಕೆನರಾ ಬ್ಯಾಂಕ್ನ ಆವರಣದಲ್ಲಿಯೇ ಕೆನರಾ ಬ್ಯಾಂಕ್ನ ಎಟಿಎಂ ಕೇಂದ್ರವಿದೆ, ಎಟಿಎಂ ಕೇಂದ್ರಕ್ಕೆ ಬಾಗಿಲು ಮತ್ತು ಭದ್ರತೆ ಎರಡು ಇಲ್ಲದಾಗಿದೆ, ಬ್ಯಾಂಕ್ನ ಹೊರಗಡೆಯ ಸಿಸಿ ಟಿವಿ ಕೆಟ್ಟು ಹೋಗಿದೆ, ಕಳ್ಳರ ತಂಡವು ಇದನ್ನೆಲ್ಲ ನೋಡಿಯೇ ಬ್ಯಾಂಕ್ನ ಹಿಂಬದಿಯಿಂದ ವಿದ್ಯುತ್ ಕೇಬಲ್ ಕತ್ತರಿಸಿ ನಂತರ ಸಿಸಿ ಟಿವಿ ಹೊಡೆದು ಕಳ್ಳತನಕ್ಕೆ ಯತ್ನಿಸಿರುವ ದೃಶ್ಯಮತ್ತೊಂದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಕೊರಟಗೆರೆ ಪಿಎಸೈ ನಾಗರಾಜು, ಮಂಜುಳ, ಎಎಸೈ ಗೋವಿಂದನಾಯ್ಕ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!