ಪ್ರಸನ್ನ ದೊಡ್ಡಗುಣಿ
ಗುಬ್ಬಿ: ತಾಲೂಕಿನ ಹೊಸಕೆರೆ ಗ್ರಾಮದ ನಾಗಮ್ಮ ಎನ್ನುವ ಹಳ್ಳಿಯ ಪ್ರತಿಯೊಂದು ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಪಾನ್ ಇಂಡಿಯಾ ಮಾಸ್ಟರ್ ಗೇಮ್ ಗೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಆರ್ಥಿಕವಾಗಿ ಸಂಪೂರ್ಣವಾಗಿ ಹಿಂದಿರುವ ಕ್ರೀಡಾಪಟು ಏನಾದರೊಂದು ಸಾಧನೆ ಮಾಡಲೇಬೇಕೆಂದು ಆಯ್ಕೆ ಮಾಡಿಕೊಂಡಿರುವ ಬದುಕು ಮಾತ್ರ ಕ್ರೀಡೆ, ಅದರಲ್ಲೂ ಬಹಳ ವಿಶೇಷವಾಗಿ ವಾಕ್ ರೇಸ್ ಮತ್ತು ರನ್ನಿಂಗ್ ರೇಸ್ ನಂತಹ ಕಷ್ಟದ ಕ್ರೀಡೆ ತಮ್ಮ ಗ್ರಾಮದಲ್ಲಿ ಯಾವುದೇ ರೀತಿಯ ಮೂಲಭೂತ ಸೌಲಭ್ಯ ಇಲ್ಲದೆ ಬರಿಗಾಲಿನಲ್ಲಿ ತಮ್ಮ ಗ್ರಾಮದ ರಸ್ತೆಗಳು ಮತ್ತು ತೋಟದ ಹಾದಿಯಲ್ಲಿ ಮುಂಜಾನೆ 5 ಗಂಟೆಯಿಂದ 8 ಗಂಟೆ ವರೆಗೆ ಸತತವಾಗಿ ಬರಿಗಾಲಿನಲ್ಲಿ ರನ್ನಿಂಗ್ ರೇಸ್, ವಾಕ್ ರೇಸ್ ಪ್ರಾಕ್ಟೀಸ್ ಮಾಡಿ ಕಷ್ಟಬಿದ್ದು ಆಸಕ್ತಿಯಿಂದ ಸುಮಾರು ನಾಲ್ಕು ತಿಂಗಳ ಕಾಲ ಸತತ ಪರಿಶ್ರಮದಿಂದಾಗಿ ಬೆಂಗಳೂರಿನಲ್ಲಿ ನಡೆದ ಪಾನ್ ಇಂಡಿಯಾ ಮಾಸ್ಟರ್ ಗೇಮ್ ನಲ್ಲಿ ಆಯ್ಕೆಯಾಗುವ ಮೂಲಕ ಹಳ್ಳಿಯ ಪ್ರತಿಭೆಯೊಂದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ವಿಶೇಷವೇ ಸರಿ.
ಈ ಕುಟುಂಬಕ್ಕೆ ತಾಯಿಯೇ ಆಸರೆಯಾಗಿದ್ದು ಇರುವ ಚಿಕ್ಕ ಭೂಮಿಯಲ್ಲಿ ನಾಗಮ್ಮ ತಾಯಿ ವ್ಯವಸಾಯ ಮಾಡುವ ಮೂಲಕ ಐದು ಮಕ್ಕಳನ್ನು ಸಾಕಿ ಸಲಹುತ್ತಿದ್ದಾರೆ, ಅದರಲ್ಲಿ ಮಗ ವಿಶೇಷ ಚೇತನವಾಗಿದ್ದಾರೆ, ಈ ನಡುವೆ ನಾಗಮ್ಮ ಏನಾದರೂ ಸಾಧನೆ ಮಾಡಲೇಬೇಕೆಂದು ನಿಶ್ಚಯಿಸಿ ಕ್ರೀಡೆಯತ್ತ ಮುಖ ಮಾಡಿದ್ದಾರೆ, ಜೀವನ ನಡೆಸಲು ಹೋಂ ಗಾರ್ಡ್ಸ್ ನಲ್ಲಿ ಕೂಡ ಕೆಲಸ ನಿರ್ವಹಣೆ ಮಾಡಿ ಕುಟುಂಬದ ನಿರ್ವಹಣೆಗೆ ಸಹಕಾರ ಮಾಡುತ್ತಿರುವ ನಾಗಮ್ಮ ಬೆಂಗಳೂರಿನಲ್ಲಿ ಗೆದ್ದಿದ್ದು, ಆಸ್ಟ್ರೇಲಿಯಾ ಪ್ರವಾಸ ಮಾಡಬೇಕಿದೆ, ಆದರೆ ಬಡತನ ಎಂಬುದು ಅಲ್ಲಿಗೆ ಹೋಗಿ ಹೇಗೆ ಕ್ರೀಡೆಯಲ್ಲಿ ಭಾಗವಹಿಸುವುದಕ್ಕೆ ಅಡ್ಡಿಯಾಗಿದೆ, ಅಲ್ಲಿಗೆ ಹೋಗುವ ಖರ್ಚುವೆಚ್ಚಗಳನ್ನು ಹೇಗೆ ಬರಿಸುವುದು ಎಂಬ ಚಿಂತೆಯಲ್ಲಿ ಇದ್ದಾರೆ, ಆದರೂ ಅವರಿಗೊಂದು ದೊಡ್ಡ ಕನಸಿದೆ, ಯಾರಾದರೂ ಸಹಾಯ ಮಾಡುತ್ತಾರೆ ಎಂಬ ಚಿಕ್ಕ ಭರವಸೆಲ್ಲಿದ್ದು ಸುಮಾರು ಎರಡು ಲಕ್ಷ ಹಣ ಆಸ್ಟ್ರೇಲಿಯಾ ಪ್ರವಾಸಕ್ಕೆ ಬೇಕಾಗಬಹುದು ಎಂದು ಬೇಸರದಿಂದಲೇ ತಿಳಿಸುತ್ತಾರೆ.
ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂದು ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದೇನೆ, ಸ್ನೇಹಿತರ ಸಹಾಯದಿಂದ ಗೆಲುವು ಪಡೆದಿದ್ದು ಮುಂದೆ ನಡೆಯುವ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇನೆ, ಅಲ್ಲಿಗೆ ಹೋಗಲು ಸಹಕಾರದ ನಿರೀಕ್ಷೆಯಲ್ಲಿದ್ದೇನೆ ಎಂನ್ನುತ್ತಾರೆ ಕ್ರೀಡಾಪಟು ನಾಗಮ್ಮ, ಇವರಿಗೆ ಸಹಾಯ ಹಸ್ತ ಚಾಚಬೇಕಿದೆ ಅಷ್ಟೆ.
ಆಸ್ಟ್ರೇಲಿಯಾದಲ್ಲಿ ಓಡಲು ನಾಗಮ್ಮ ರೆಡಿ- ಆದ್ರೆ ನೆರವು ಬೇಕಿದೆ!
Get real time updates directly on you device, subscribe now.
Prev Post
Next Post
Comments are closed.