ಮಧುಗಿರಿ: ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಸಕಾಲಕ್ಕೆ ಸರಿಯಾಗಿ ತಲುಪಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ರೈತರಿಗೆ ವಿತರಿಸಿ ಮಾತನಾಡಿ, ಈ ಬಾರಿ ವಾಡಿಕೆಯಂತೆ ಉತ್ತಮ ಮಳೆಯಾಗುತ್ತಿದ್ದು ಕೃಷಿ ಚಟುವಟಿಕೆಗಳು ಆರಂಭವಾಗುತ್ತಿವೆ, ಈ ಸಂದರ್ಭದಲ್ಲಿ ಕೃಷಿ ಇಲಾಖೆ ವತಿಯಿಂದ ರೈತರಿಗೆ ಅನುಕೂಲ ವಾಗುವಂತೆ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ, ವಿತರಣೆಯಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಸೌಲಭ್ಯ ಸಿಗಬೇಕು, ಮಳೆಗಾಲ ಪ್ರಾರಂಭವಾಗಿದ್ದು, ಟಾರ್ಪಲ್ ಗಳ ವಿತರಣೆ, ಬಿತ್ತನೆ ಬೀಜ, ರಸಗೊಬ್ಬರ ವಿತರಣೆಯಲ್ಲಿ ಯಾವುದೇ ದೂರು ಬರಬಾರದು, ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ನಿಮ್ಮ ಕೆಳಹಂತದ ಅಧಿಕಾರಿಗಳಿಂದ ಸರಿಯಾಗಿ ರೈತರ ಕೆಲಸ ಮಾಡಿಸಿ, ಇಲ್ಲದಿದ್ದರೆ ನಿಮ್ಮನೇ ಕ್ಷೇತ್ರದಿಂದ ವರ್ಗಾವಣೆ ಮಾಡಬೇಕಾಗುತ್ತದೆ, ಟಾರ್ಪಲ್ ವಿತರಣೆಯಲ್ಲಿ ಅವ್ಯವಹಾರವಾದರೆ ತನಿಖೆಗೆ ಒಳಪಡಿಸಲಾಗುವುದು, ನೀವೆ ಹೊಣೆಗಾರರಾಗುತ್ತೀರ ಎಂದು ಕೃಷಿ ಸಹಾಯಕ ನಿರ್ದೇಶಕ ಹನುಮಂತರಾಯಪ್ಪಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸಣ್ಣ ರೈತರಿಂದ ಮಾತ್ರ ರಾಗಿ ಖರೀದಿ ಮಾಡುತ್ತಿದ್ದು, ಹೆಚ್ಚು ಜಮೀನು ಹೊಂದಿರುವ ದೊಡ್ಡ ರೈತರಿಂದ ರಾಗಿ ಖರೀದಿ ಮಾಡುತ್ತಿಲ್ಲ ಎಂದು ರೈತರು ಗಮನಕ್ಕೆ ತಂದಾಗ ಈ ಬಗ್ಗೆ ಮಾತನಾಡಿ ಕೃಷಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸದ್ಯ ಸಣ್ಣಹಿಡುವಳಿದಾರರಿಂದ ಮಾತ್ರ ಖರೀದಿಸಲಾಗುತ್ತಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕಿ ದೀಪಶ್ರೀ, ಪುರಸಭಾ ಸದಸ್ಯ ಎಂ.ಆರ್.ಜಗನ್ನಾಥ್, ಎಡಿಎ ಹನುಮಂತರಾಯಪ್ಪ, ಕವಿತ, ಎಪಿಎಂಸಿ ಕಾರ್ಯದರ್ಶಿ ಆಶಾ, ತಿಮ್ಮಣ್ಣ, ಚನ್ನಲಿಂಗಪ್ಪ, ಗುಂಡುಗಲ್ ಶಿವಣ್ಣ, ಚೌಡಪ್ಪ, ಶ್ರೀನಿವಾಸ, ವೆಂಕಟಾಪುರ ಗೋವಿಂದರಾಜು, ಕೀರ್ತಿಶ್ರೀ ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು, ರೈತರು ಹಾಜರಿದ್ದರು.
ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ ನೀಡಿ: ಎಂವಿವಿ
Get real time updates directly on you device, subscribe now.
Prev Post
Next Post
Comments are closed.