ಬೈಕ್ ಡಿಕ್ಕಿ- ಯುವತಿ ಸಾವು

462

Get real time updates directly on you device, subscribe now.

ಕುಣಿಗಲ್: ವೇಗವಾಗಿ ಹೋಗುತ್ತಿದ್ದ ಬೈಕ್ ಸವಾರ ರಸ್ತೆ ದಾಟುತ್ತಿದ್ದ ಯುವತಿಗೆ ಗುದ್ದಿದ ಪರಿಣಾಮ ಯುವತಿ ಸ್ಥಳದಲ್ಲೆ ಮೃತಪಟ್ಟ ಘಟನೆ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಯಲಿಯೂರಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಮೃತ ಯುವತಿಯನ್ನು ಚಿನ್ಮಯಿ(19) ಎಂದು ಗುರುತಿಸಲಾಗಿದ್ದು, ಈಕೆ ಯಲಿಯೂರು ಗ್ರಾಮದ ಪ್ರಸನ್ನ ಎಂಬುವರ ಮಗಳಾಗಿದ್ದು, ಮಂಗಳವಾರ ಸಂಜೆ ನೀರು ತರಲು ಕೊಡದೊಂದಿಗೆ ರಸ್ತೆ ದಾಟುತ್ತಿದ್ದಾಗ ಅಂಚೆಪಾಳ್ಯದಿಂದ ವೇಗವಾಗಿ ಬಂದ ಬೈಕ್ ಚಾಲಕ ಯುವತಿಗೆ ಗುದ್ದಿದ ಪರಿಣಾಮ ಯುವತಿ ತಲೆ ರಸ್ತೆಗೆ ಅಪ್ಪಳಿಸಿ ಸ್ಥಳದಲ್ಲೆ ಮೃತಪಟ್ಟರೆ ಬೈಕ್ ಸವಾರ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತ ಯುವತಿ ಬಿಬಿಎಂ ಪ್ರಥಮ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದು ಬುಧವಾರ ಪರೀಕ್ಷೆಗೆ ಹಾಜರಾಗಬೇಕಿತ್ತು. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Get real time updates directly on you device, subscribe now.

Comments are closed.

error: Content is protected !!