ಹುಳಿಯಾರು: ಎಲ್ಲೆಲ್ಲೂ ಲಾಕ್ ಡೌನ್ ವಿಷಯವೇ ಹರಿದಾಡುತ್ತಿದೆ. ಹೊರಗಂತು ಕಾಲಿಡುವ ಹಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಹೃದಯತೆ ತೋರಿ ಜನರ ಮೆಚ್ಚುಗೆ ಗಳಿಸಿದ್ದಾರೆ ಈರುಳ್ಳಿ ವ್ಯಾಪಾರಿ ಹಾರೂನ್ ಷರೀಫ್.
ಹಾರೂನ್ ಷರೀಫ್ ಅವರು 300 ಕ್ಕೂ ಹೆಚ್ಚು ಕುಟುಂಬಗಳಿಗೆ ಅಕ್ಕಿ, ಎಣ್ಣೆ, ಉಪ್ಪು, ಬೇಳೆ, ಸಕ್ಕರೆ, ಟೀಪುಡಿ ಇರುವ ಕಿಟ್ ವಿತರಣೆ ಮಾಡುತ್ತಿದ್ದಾರೆ.
ಧರ್ಮ, ಜಾತಿ ನೋಡದೆ ಎಲ್ಲಾ ವರ್ಗದ ಸಂಕಷ್ಟಕ್ಕೆ ಸಿಲುಕಿರುವ ನಿರ್ಗತಿಕರು, ಬಡವರು, ಅಲೆಮಾರಿಗಳು, ದಿನಗೂಲಿಗಳಿಗೆ ಆಹಾರ ಸಾಮಗ್ರಿ ವಿತರಿಸುವ ಮೂಲಕ ಮಾನವೀಯತೆ ತೋರಿದ್ದಾರೆ.
ಸ್ವಂತ ಹಣದಲ್ಲಿ, ಸ್ವಯಂ ಪ್ರೇರಣೆಯಿಂದ ಬಡಜನರಿಗೆ ದವಸ-ಧಾನ್ಯ ತಲುಪಿಸಿ ಧೈರ್ಯ ತುಂಬುವ ಕೆಲಸ ಅವರದ್ದು. ಈ ಸತ್ಕಾರ್ಯದಲ್ಲಿ ಪತ್ನಿ, ಮಕ್ಕಳು, ನೆಂಟರಿಷ್ಟರು ಭಾಗಿಯಾಗಿರುವುದು ಮತ್ತೊಂದು ವಿಶೇಷ. ಸಾಮಾಜಿಕ ಅಂತರ ಕಾಯುವ, ಮಾಸ್ಕ್ ಧರಿಸುವ ಲೌಕ್ ಡೌನ್ ನಿಯಮ ಪಾಲನೆಯಲ್ಲಿ ಅನುಸರಿಸುವುದರಲ್ಲು ಅವರು ಹಿಂದೆ ಬಿದ್ದಿಲ್ಲ.
ಪ್ರತಿ ರಂಜಾನ್ ಹಬ್ಬದಲ್ಲೂ ಬಡವರಿಗೆ ಸಹಾಯ ಮಾಡುತ್ತ ಬಂದಿರುವ ಇವರು ಬರಗಾಲದ ಸಂದರ್ಭದಲ್ಲೂ ಬಡವರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದ್ದಾರೆ
ಅಲ್ಲದೆ ಹಿಂದೂ, ಮುಸ್ಲೀಂ ಎರಡೂ ಧರ್ಮದ ಅನೇಕ ಧಾರ್ಮಿಕ ಕಾರ್ಯಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಎರಡೂ ಧರ್ಮದ ಜನರ ವಿಶ್ವಾಸಪಾತ್ರರಾಗಿದ್ದಾರೆ
ಈರುಳ್ಳಿ ವ್ಯಾಪಾರಿಯ ಸಹೃದಯತೆ
Get real time updates directly on you device, subscribe now.
Prev Post
Comments are closed.