ರೈತರು ಹನುಗಾರಿಕೆ ಮಾಡಿ ಲಾಭ ಗಳಿಸಲಿ: ಸಿಇಓ

122

Get real time updates directly on you device, subscribe now.

ತುಮಕೂರು: ರೈತರು ಕೃಷಿಯ ಜೊತೆಗೆ ಹೈನುಗಾರಿಕೆ, ಪಶುಪಾಲನೆ, ಪಶುಸಂಗೋಪನೆ ಯಂತಹ ಉಪ ಕಸುಬುಗಳನ್ನು ಕೈಗೊಂಡಾಗ ಮಾತ್ರ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಅಜಾದಿ ಕ ಅಮೃತ ಮಹೋತ್ಸವ ಅಂಗವಾಗಿ, ನಲ್ಮ್ ಯೋಜನೆ ಅಡಿಯಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ತರಬೇತಿ ಕೇಂದ್ರದ ಸಹಯೋಗದಲ್ಲಿ ರೈತರಿಗಾಗಿ ಹಮ್ಮಿಕೊಂಡಿದ್ದ ಸುಧಾರಿತ ಪಟು ಕುರಿತ ಜಿಲ್ಲಾ ಮಟ್ಟದ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕೃಷಿಯಲ್ಲಿ ಸಣ್ಣ ಹಿಡುವಳಿದಾರರು ಆರ್ಥಿಕವಾಗಿ ಅಭಿವೃದ್ಧಿ ಹೊಂದರಬೇಕಾದರೆ ಕೃಷಿಯ ಜೊತೆಗೆ, ಹೈನುಗಾರಿಕೆ, ಪಶು ಸಂಗೋಪನೆಯಲ್ಲಿ ತೊಡಗಿದರೆ ಮಾತ್ರ ಎಂದರು.
ಸರಕಾರ ರೈತರುಮ ಹೈನುಗಾರರು ಮತ್ತು ಪಶುಪಾಲನೆ ಮಾಡುವವರಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದೆ, ಕೆಎಂಎಫ್ ಮೂಲಕ ಹಾಲು ಖರೀದಿಯ ಜೊತೆಗೆ ಪ್ರೋತ್ಸಾಹ ಧನವನ್ನು ನೀಡುತ್ತಿದೆ, ಇದರ ಭಾಗವಾಗಿಯೇ ವೈಜ್ಞಾನಿಕ ಪಶುಪಾಲನೆ ಕುರಿತಂತೆ ಇಂದು ತರಬೇತಿ ಆಯೋಜಿಸಲಾಗಿದೆ, ಪಶು ಪಾಲನೆಯನ್ನು ಮತ್ತಷ್ಟು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಮತ್ತು ಹೈನುಗಾರಿಕೆ, ಪಶುಪಾಲನೆಯನ್ನು ಉದ್ಯಮವನ್ನಾಗಿಸುವ ಪ್ರಯತ್ನದಲ್ಲಿ ಈ ರೀತಿಯ ತರಬೇತಿ ಆಯೋಜಿಸಿಕೊಂಡು ಬರಲಾಗುತ್ತಿದೆ, ತರಬೇತಿಗೆ ಬಂದಿರುವ ಎಲ್ಲರೂ ಸಂಪನ್ಮೂಲ ವ್ಯಕ್ತಿಗಳು ಹೇಳುವ ಎಲ್ಲಾ ಮಾಹಿತಿ ಅರಿತು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು, ಅಲ್ಲದೆ ಅಗಿಂದಾಗ್ಗೆ ಪಶುಗಳಿಗೆ, ಕುರಿ, ಮೇಕೆ, ಕೋಳಿ, ಹಂದಿಗಳಿಗೆ ಬರುವ ರೋಗಗಳು, ಅವುಗಳಿಗೆ ಔಷಧೋಪಚಾರ ಸೇರಿದಂತೆ ಎಲ್ಲಾ ಮಾಹಿತಿ ಪಡೆದು ಸದುಪಯೋಗ ಪಡಿಸಿಕೊಳ್ಳುವಂತೆ ಸಿಇಓ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಶುವೈದ್ಯಕೀಯ ಮತ್ತು ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಡಾ.ಬಿ.ವಿ.ಜಯಣ್ಣ ಮಾತನಾಡಿ, ರಾಷ್ಟ್ರೀಯ ಜಾನುವಾರು ಮಿಷನ್ ಅಡಿಯಲ್ಲಿ ರಾಜ್ಯದಾದ್ಯಂತ ರೈತರಿಗೆ ವೈಜ್ಞಾನಿಕ ತರಬೇತಿ ಆಯೋಜಿಸಿಕೊಂಡು ಬರಲಾಗುತ್ತಿದೆ, ಕೃಷಿಯಿಂದಲೇ ಆರ್ಥಿಕ ಅಭಿವೃದ್ಧಿ ಎಂಬುದು ಇಂದು ಮರೀಚಿಕೆಯಾಗಿದೆ, ಹಾಗಾಗಿ ಕೃಷಿಯ ಜೊತೆಗೆ ಹೈನುಗಾರಿಕೆ, ಪಶುಪಾಲನೆ, ತೋಟಗಾರಿಕೆ, ಮೀನುಗಾರಿಕೆ, ಕೋಳಿ ಸಾಕಾಣಿಕೆ ಕೈಗೊಂಡರೆ ಹೆಚ್ಚು ಉತ್ತಮ, ಪಶುಪಾಲನೆಗೆ ಅದರಲ್ಲಿಯೂ ಮೇಕೆ, ಕುರಿ ಸಾಕಾಣಿಕೆಗೆ ಶ್ರಮ ಕಡಿಮೆ, ನಮ್ಮ ಜಿಲ್ಲೆಯಲ್ಲಿ ಸುಮಾರು 17 ಲಕ್ಷ ಕುರಿ, ಮೇಕೆಗಳಿವೆ, ಪಾವಗಡ, ಮಧುಗಿರಿ ತಾಲೂಕುಗಳಲ್ಲಿ ಹೆಚ್ಚಾಗಿವೆ, ಕೇಂದ್ರದ ರೈತರ ಆದಾಯ ದ್ವಿಗುಣದ ಮತ್ತೊಂದು ಭಾಗ ಹೈನುಗಾರಿಕೆ ಮತ್ತು ಪಶುಸಂಗೋಪನೆ ಎಂದರು.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ಮಂಡಳಿಯ ಸಹಾಯಕ ನಿರ್ದೇಶಕ ಡಾ.ಕೆ.ನಾಗಣ್ಣ ಮಾತನಾಡಿ, ರೈತರ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವಾರು ಯೋಜನೆ ಜಾರಿಗೆ ತಂದಿದೆ, ಆದರೆ ಇದರ ಬಗ್ಗೆ ಅರಿವು ಕಡಿಮೆ, ಈ ಹಿನ್ನೆಲೆಯಲ್ಲಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ, ರೈತರು ಹೈನುಗಾರಿಕೆ ಮತ್ತು ಪಶುಸಂಗೋಪನೆಗೆ ತಮ್ಮಲ್ಲಿರುವ ಅನುಭವದ ಜೊತೆಗೆ ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡರೆ ಹೆಚ್ಚಿನ ಲಾಭ ಪಡೆಯಬಹುದು, ಈ ನಿಟ್ಟಿನಲ್ಲಿ ಎಲ್ಲರೂ ಸಕ್ರಿಯವಾಗಿ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.
ವೇದಿಕೆಯಲ್ಲಿ ಪಶುಪಾಲನಾ ಇಲಾಖೆಯ ತರಬೇತಿ ವಿಭಾಗದ ಮುಖ್ಯಸ್ಥ ಡಾ.ಪುಟ್ಟಸ್ವಾಮಿ, ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ರುದ್ರಪ್ರಸಾದ್, ಉಪಾಧ್ಯಕ್ಷ ಡಾ.ದಿವಾಕರ್ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು ಇದ್ದರು. ನೂರಾರು ರೈತರು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!