ಕೊರಟಗೆರೆ: ಹಗಲಿನಲ್ಲಿ ಮಳೆರಾಯ- ಬಿರುಗಾಳಿಯ ಆರ್ಭಟ, ರಾತ್ರಿವೇಳೆ ಕರಡಿ- ಚಿರತೆಯ ಕಾಟ, ಮಕ್ಕಳ ವ್ಯಾಸಂಗಕ್ಕೆ ರಾತ್ರಿಯಿಡಿ ದೀಪದ ಬೆಳಕೇ ಆಧಾರ, ಪ್ರತಿನಿತ್ಯ ಜೀವ ಭಯದ ನೆರಳಿನಲ್ಲಿ ರೈತಾಪಿ ವರ್ಗದ ಬದುಕು, ಕೊರಟಗೆರೆ ಬೆಸ್ಕಾಂ ಇಲಾಖೆಯಿಂದ ನಿರ್ಲಕ್ಷ್ಯದಿಂದ ನವಿಲುಕುರಿಕೆ ಗ್ರಾಮದ 15 ರೈತ ಕುಟುಂಬಗಳಿಗೆ ನಿತ್ಯ ಸಂಕಷ್ಟ ಎದುರಾಗಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿ ಅಗ್ರಹಾರ ಗ್ರಾಪಂ ವ್ಯಾಪ್ತಿಯ ನವಿಲುಕುರಿಕೆ ಗ್ರಾಮದ ರೈತರ ಕತ್ತಲೆಯ ಜೀವನದ ಕತೆಯಿದು, ನವಿಲುಕುರಿಕೆ ಗ್ರಾಮದ ಜಮೀನು ಮತ್ತು ತೋಟದ ಮನೆಯಲ್ಲಿ ವಾಸವಿರುವ 15ಕ್ಕೂ ಅಧಿಕ ಕುಟುಂಬಗಳಿಗೆ ನಿರಂತರ ಜ್ಯೋತಿಯ ವ್ಯವಸ್ಥೆ ಮರೀಚಿಕೆಯಾಗಿದೆ.
ಬೆಸ್ಕಾಂ ಇಲಾಖೆಯಿಂದ ರೈತರ ಕೊಳವೆಬಾವಿಗೆ ಪ್ರತಿನಿತ್ಯ 7 ಗಂಟೆ ವಿದ್ಯುತ್ ನೀಡಲಾಗುತ್ತೆ, ಹಗಲಿನಲ್ಲಿ 3 ಗಂಟೆ ಮತ್ತು ರಾತ್ರಿ ವೇಳೆ 4 ಗಂಟೆ ವಿದ್ಯುತ್ ಸಂಪರ್ಕಇರಲಿದೆ, ಹಗಲಿನಲ್ಲಿ ಯಾವಾಗ ಕರೆಂಟ್ ನೀಡಿದರೂ ರೈತರಿಗೆ ಅನುಕೂಲ. ಆದರೆ ರಾತ್ರಿ ಯಾವ ಸಮಯದಲ್ಲಿ ರೈತರಿಗೆ ವಿದ್ಯುತ್ ಬರಲಿದೆ ಎಂಬುದೇ ಖುದ್ದು ಬೆಸ್ಕಾಂ ಇಲಾಖೆಗೆ ಮಾಹಿತಿ ಇಲ್ಲದಿರುವುದೇ ವಿಪರ್ಯಾಸ.
ರೈತಾಪಿ ವರ್ಗ ಪ್ರತಿನಿತ್ಯ ಸಂಜೆ 6ಗಂಟೆಯಿಂದ ಮುಂಜಾನೆ 6ಗಂಟೆ ವರೆಗೆ ಕತ್ತಲೆಯ ಬದುಕು ಸಾಗಿಸಬೇಕಿದೆ, ಮಧ್ಯೆ ರಾತ್ರಿ ತ್ರೀ ಪೇಸ್ ವಿದ್ಯುತ್ ನೀಡಿದಾಗ ಮಾತ್ರ ತೋಟ ಮತ್ತು ಜಮೀನಿನಲ್ಲಿ ವಾಸವಿರುವ ಮನೆಗಳಿಗೆ ಬೆಳಕು ಲಭ್ಯ ಇರಲಿದೆ, ಇಲ್ಲವಾದಲ್ಲಿ ಲಾಟೀನು ಅಥವಾ ಮೇಣದ ಬತ್ತಿಯ ಬೆಳಕೆ ಪುಟಾಣಿ ಮಕ್ಕಳ ವ್ಯಾಸಂಗಕ್ಕೆ ಆಧಾರವಾಗಿ ರೈತರ ಬದುಕಿನಲ್ಲಿ ಕತ್ತಲೆ ಕವಿದಿದೆ.
ಕರೆಂಟ್ ಕಣ್ಣಾಮುಚ್ಚಾಲೆ- ರೈತರ ಆಕ್ರೋಶ
Get real time updates directly on you device, subscribe now.
Prev Post
Comments are closed.