ಗುಬ್ಬಿ: ಗಣಿ ಭಾದಿತ ಪ್ರದೇಶಗಳಿಗೆ ಈಗಾಗಲೇ 12 ಕೋಟಿಯಷ್ಟು ಅನುದಾನ ಬಿಡುಗಡೆ ಮಾಡಿ ಅದರಲ್ಲಿ ಈ ಭಾಗದ ಅಭಿವೃದ್ಧಿ ಕೆಲಸ ಮಾಡಲಾಗುತ್ತದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲೂಕಿನ ಬಡವನ ಪಾಳ್ಯ, ಹರೇನಹಳ್ಳಿ, ತಿಮ್ಮಳ್ಳಿ ಪಾಳ್ಯ, ರಾಜನಕುಂಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಹೈಕೋರ್ಟ್ನಲ್ಲಿ ಪ್ರಕರಣ ಇರುವುದರಿಂದ ಈಗ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಯಾದ ಪಕ್ಷದಲ್ಲಿ ಈ ಭಾಗದಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಕೆಲಸ ಮಾಡಬಹುದಾಗಿದೆ ಎಂದು ತಿಳಿಸಿದರು.
ನಾನಿನ್ನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ, ಆದರೆ ನಮ್ಮ ನಾಯಕರೇ ನನ್ನನ್ನ ದೂರವಿಟ್ಟಿದ್ದರು, ಹಾಗಾಗಿ ನಾನು ನನ್ನ ದಾರಿ ನೋಡಿಕೊಳ್ಳಬೇಕಾಗಿತ್ತು, ಈಗ ಎರಡು ಬಾರಿ ಕುಮಾರಸ್ವಾಮಿಯವರೇ ದೂರವಾಣಿ ಕರೆ ಮಾಡಿ ಮಾತನಾಡಬೇಕು ಎಂದು ತಿಳಿಸಿದ್ದಾರೆ, ನಾನು ಸಹ ಖುದ್ದು ಬಂದು ಮಾತನಾಡುತ್ತೇನೆ ಎಂದು ತಿಳಿಸಿದ್ದೇನೆ, ಡಿಸೆಂಬರ್ ತಿಂಗಳ ವರೆಗೆ ಯಾವುದೇ ವಿಚಾರ ಮಾಡದೆ ನಿಶ್ಚಲವಾಗಿ ಇರುತ್ತೇನೆ, ನಮ್ಮ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಮಾತುಕತೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.
ನಾನು ಯಾವತ್ತೂ ಸಹ ಪಕ್ಷ ಬಿಡುತ್ತೇನೆ, ಬೇರೆ ಪಕ್ಷಕ್ಕೆ ಸೇರಿಕೊಳ್ಳುತ್ತೇನೆ ಎಂದು ಎಲ್ಲೂ ಹೇಳಿಲ್ಲ, ಆದರೆ ನಮ್ಮ ನಾಯಕರೆ ನನ್ನನ್ನು ದೂರವಿಟ್ಟು ಬೇರೊಬ್ಬರನ್ನು ಮುಂದಿನ ಜೆಡಿಎಸ್ ಅಭ್ಯರ್ಥಿ ಎಂದು ಬಿಂಬಿಸಿ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ, ಹೀಗಾದಾಗ ನನ್ನ ದಾರಿ ನಾನು ನೋಡಿಕೊಳ್ಳಬೇಕಾಗುತ್ತದೆ, ಇಷ್ಟೆಲ್ಲಾ ಆದ ಮೇಲೆ ಈಗ ಮಾತುಕತೆ ಮಾಡುವುದು ಎಷ್ಟು ಸರಿ ಗೊತ್ತಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಮ್ಮ ಬಸವರಾಜು, ಉಪಾಧ್ಯಕ್ಷೆ ಮೀನಾಕ್ಷಿ ರಮೇಶ್, ಸದಸ್ಯರಾದ ಶ್ರೀಪಾದ, ಲೋಕೇಶ್, ಯಶೋಧಮ್ಮ ರಮೇಶ್, ಮುಖಂಡರಾದ ನರಸಿಂಹಮೂರ್ತಿ, ಬಸವರಾಜು, ಸುಧಾಕರ್ ಇನ್ನಿತರರು ಹಾಜರಿದ್ದರು.
ನಾನಿನ್ನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ: ಶ್ರೀನಿವಾಸ್
Get real time updates directly on you device, subscribe now.
Prev Post
Comments are closed.