ತುಮಕೂರು: ಖಾಸಗಿ ಶಾಲೆಗಳ ಡೊನೇಶನ್ ಹಾವಳಿ ತಡೆಗಟ್ಟಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಶಿಕ್ಷಣ, ಆರೋಗ್ಯ, ಎಲ್ಲರಿಗೂ ಮೂಲಭೂತವಾಗಿ ಸಿಗಬೇಕು ಇದು ಸಂವಿಧಾನ ಬದ್ದ ಹಕ್ಕು ಸಹ, ಆದರೆ ಖಾಸಗಿ ಶಾಲೆಗಳ ಡೊನೇಶನ್ ಹಾವಳಿಗೆ ಪೋಷಕರು ಹೈರಾಣು ಆಗಿದ್ದಾರೆ, ಬಡವರಿಗೆ ಶಿಕ್ಷಣ ಎಂಬುದು ಗಗನ ಕುಸುಮವೇ ಆಗಿದೆ, ಶಿಕ್ಷಣ ಖಾಸಗೀಕರಣದಿಂದ ಬಡ ಮಧ್ಯಮ ವರ್ಗದ ಮಂದಿ ಎಲ್ಕೆಜಿ, ಯುಕೆಜಿ ಯಂತಹ ನರ್ಸರಿ ಕೋರ್ಸ್ಗಳಿಗೂ ಐವತ್ತರಿಂದ ಒಂದು ಲಕ್ಷದವರೆಗೆ ಜನರಿಂದ ಡೊನೇಶನ್ ರೂಪದಲ್ಲಿ ವಸೂಲು ಮಾಡುವ ದಂಧೆಗೆ ಖಾಸಗಿ ಶಾಲೆಗಳು ಇಳಿದಿರುವುದು ದುರಂತವೆ ಸರಿ ಎಂದು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಯಲ್ಲೇಶ್ ಗೌಡ ತಿಳಿಸಿದ್ದಾರೆ.
ತುಮಕೂರು ನಗರವು ರಾಜ್ಯದಲ್ಲಿ ಉತ್ತಮ ಶಿಕ್ಷಣ ನಗರಿಯು ಹೌದು, ಆದರೆ ಇಲ್ಲಿ ವಿದ್ಯಾಭ್ಯಾಸವೆಂಬುದು ಬಲು ದುಬಾರಿ, ತುಮಕೂರು ನಗರ ಸೇರಿದಂತೆ ತಮಕೂರು ನಗರದ ಹಾಸು ಪಾಸು ನಾಯಿಕೊಡೆಗಳಂತೆ ಹಬ್ಬಿರುವ ಖಾಸಗಿ ಶಾಲೆಗಳ ಶುಲ್ಕಕ್ಕೆ ಲಂಗು ಲಗಮೇ ಇಲ್ಲದಂತಾಗಿದೆ, ಬಿಇಓ, ಡಿಡಿಪಿಐ ಅಧಿಕಾರಿಗಳು ಇದ್ದರು ಇಲ್ಲದಂತಾಗಿದ್ದಾರೆ, ಇವರ ಮಾತಿಗೆ ಕವಡೆಕಾಸಿನ ಕಿಮ್ಮತ್ತು ಕೊಡವುದಿಲ್ಲ, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು, ಸರ್ಕಾರದ ನೀತಿಯಿಂದ ಶಾಲೆಗಳ ಶುಲ್ಕ ದಂಧೆ ವ್ಯಾಪಕವಾಗಿದೆ, ಈ ನೀತಿ ಖಾಸಗಿ ಶಾಲೆಗಳ ಧನ ದಾಹವನ್ನು ಹಿಮ್ಮಡಿಗೊಳಿಸಿದೆ, ಅಲ್ಲದೇ ಯಾವ ಶಾಲೆಯು ನೋಟಿನ ಬೋರ್ಡ್ ನಲ್ಲಿ ಲಗತ್ತಿಸಿಲ್ಲ ಎಂದರು.
ಸರ್ಕಾರಿ ಶಾಲೆಗಳನ್ನು ಉಳಿಸುವ ನೆಪವೊಡಿ ಸರ್ಕಾರಿ ಶಾಲಾ ವ್ಯಾಪ್ತಿಯ ಒಂದು ಕಿಲೋ ಮಿಟರ್ ಒಳಗಿನ ಖಾಸಗಿ ಶಾಲೆ ಆರ್ಟಿಇ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾಯ್ದೆಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಂದರು, ಈ ಕಾಯ್ದೆ ಆರ್ಟಿಇ ನೀತಿಯನ್ನೇ ಹಲ್ಲು ಕಿತ್ತ ಹಾವಿನಂತೆ ಮಾಡಿತು, ನಗರಗಳಲ್ಲಿ ವಾರ್ಡ್ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆ ಇದ್ದರೆ ಆ ವಾರ್ಡ್ನಲ್ಲಿ ಬರುವ ಖಾಸಗಿ ಶಾಲೆಗಳಿಗೆ ಆರ್ಟಿಇ ಪ್ರವೇಶ ಇಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ಒಂದು ಕಿಲೋ ಮೀಟರ್ ವ್ಯಾಪ್ತಿವರೆಗೆ ಎಂಬ ನೀತಿಯಿಂದ ಆರ್ಟಿಇ ಸೀಟುಗಳ ಸಂಖ್ಯೆ ಕಡಿಮೆ ಆಯಿತು, ಕುಮಾರ ಸ್ವಾಮಿಯ ಈ ನೀತಿಯು ದಲಿತ, ಬಡ ವರ್ಗದವರ ಇಂಗ್ಲಿಷ್ ಮಾಧ್ಯಮದ ಕನಸು ನುಚ್ಚುನೂರು ಮಾಡಿದೆ, ತುಮಕೂರು ನಗರದ ವ್ಯಾಪ್ತಿಯಲ್ಲಿ ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿ ಎರಡು, ಮೂರು ಶಾಲೆಗಳು ಮಾತ್ರ ಈ ಆರ್ಟಿಇ ವ್ಯಾಪ್ತಿಗೆ ಒಳಪಡುತ್ತಿವೆ.
ಇನ್ನೂ ಖಾಸಗಿ ಶಾಲೆಗಳ ಶುಲ್ಕ ದರ್ಬಾರು ನೋಡಿದರೆ ಕೋಟ್ಯಾಂತರ ರೂಪಾಯಿ ಸುರಿದು ಎಂಬಿಬಿಎಸ್ ಓದಿದ ಡಾಕ್ಟರ್ ನ ಕನ್ಸಲ್ಟೆನ್ಸಿ ಶುಲ್ಕ 250 ರೂ. ಆದರೇ ಫ್ರೀ ನರ್ಸರಿ ಶಾಲೆಯ ಪ್ರವೇಶ ಶುಲ್ಕವೇ 25 ಸಾವಿರ ರೂ. ತೆರಬೇಕಾಗಿದೆ ಎಂದು ಆರೋಪಿಸಿದ್ದಾರೆ.
ತುಮಕೂರು ನಗರ ಮತ್ತು ಗ್ರಾಮೀಣ ದಲ್ಲಿ ಇನ್ನೂ ಹತ್ತಾರು ಖಾಸಗಿ ಫ್ರೀ ನರ್ಸರಿ ಹಾಗೂ ನರ್ಸರಿ ಶಾಲೆಗಳಿದ್ದು ಯಾವ ಶಾಲೆಯಲ್ಲೂ 20 ಸಾವಿರಕ್ಕಿಂತ ಕಡಿಮೆ ಶುಲ್ಕವಿಲ್ಲ. ಈ ರೀತಿ ಶುಲ್ಕಗಳಿಂದ ಪೋಷಕರು ಹೈರಾಣಗಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿಯಲ್ಲಿ ಹೇಳಿದ್ದಾರೆ.
ಖಾಸಗಿ ಶಾಲೆಗಳ ಡೊನೇಶನ್ ಹಾವಳಿ ತಡೆಗಟ್ಟಲು ಆಗ್ರಹ
Get real time updates directly on you device, subscribe now.
Next Post
Comments are closed.